ಕಿಶೋರ್ ಶೆಟ್ಟಿ ಹೇಳಿಕೆಯಿಂದ ಅನುಶ್ರೀ ಮತ್ತೆ ಲಾಕ್ ಆಗ್ತಾರಾ..?

ಕಿಶೋರ್ ಶೆಟ್ಟಿ ಹೇಳಿಕೆಯಿಂದ ಅನುಶ್ರೀ ಮತ್ತೆ ಲಾಕ್ ಆಗ್ತಾರಾ..?

ಬೆಂಗಳೂರು: ಮಂಗಳೂರು ಡ್ರಗ್​​ ಕೇಸ್​ಗೆ ಸಂಬಂಧಿಸಿದಂತೆ ಡ್ಯಾನ್ಸರ್ ಕಿಶೋರ್ ತನಿಖೆ ವೇಳೆ ಅನುಶ್ರೀ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ. ಕಿಶೋರ್​ ಶೆಟ್ಟಿ ಹೇಳಿಕೆಯಿಂದ ಅನುಶ್ರೀ ಮತ್ತೆ ಲಾಕ್ ಆಗುತ್ತಾರಾ ಅನ್ನೋ ಅನುಮಾನ ಶುರುವಾಗಿದೆ.

ಇದನ್ನೂ ಓದಿ: ಆ್ಯಂಕರ್​​ ಅನುಶ್ರೀ ವಿರುದ್ಧ ಡ್ರಗ್ಸ್​ ಕೇಸ್ ಆರೋಪಿ ಕಿಶೋರ್ ನೀಡಿರೋ ಹೇಳಿಕೆ ಏನು..?

2020 ಸೆಪ್ಟೆಂಬರ್​ 26 ರಂದು ಮಾಧ್ಯಮಗಳ ಮುಂದೆ ಮಾತನಾಡಿದ್ದ ಅನುಶ್ರೀ, ನನಗೂ ಕಿಶೋರ್ ಶೆಟ್ಟಿಗೂ ಕನೆಕ್ಷನ್ ಇಲ್ಲ ಅಂತಾ ಹೇಳಿದ್ದರು. 12 ವರ್ಷಗಳಿಂದ ಯಾವುದೇ ಸಂಪರ್ಕ ಇಲ್ಲ ಅಂತಾ ಹೇಳಿದ್ದರು.

ಇದನ್ನೂ ಓದಿ: ಅನುಶ್ರೀಗೆ ಮತ್ತೆ ‘ಡ್ರಗ್​​ ಕೇಸ್​ ಸಂಕಷ್ಟ’ -ಚಾರ್ಜ್​​ಶೀಟ್​ನಲ್ಲಿ ಗಂಭೀರ ಆರೋಪ ಉಲ್ಲೇಖ

ಆದರೆ ಇದೀಗ ಕಿಶೋರ್​ ಶೆಟ್ಟಿ.. ಅನುಶ್ರೀ ಡ್ರಗ್ ಮಾರಾಟ ಹಾಗೂ ಸೇವನೆ ಬಗ್ಗೆ ಖಚಿತಪಡಿಸಿದ್ದಾನೆ ಅಂತಾ ಪೊಲೀಸರು ಉಲ್ಲೇಖಿಸಿದ್ದಾರೆ. ಹೀಗಾಗಿ ತನಿಖಾಧಿಕಾರಿಗಳ ಚಾರ್ಜ್ ಶೀಟ್ ಅಂಶಗಳೇ ಅನುಶ್ರೀಗೆ ಮುಳುವಾಗುತ್ತಾ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ: ‘ಅನುಶ್ರೀ ಜೊತೆ ಮಾದಕ ವಸ್ತು ಸೇವಿಸಿ ಡಿಂಕ್ಸ್​ ಪಾರ್ಟಿ ಮಾಡಿರ್ತೇನೆ’ -ಚಾರ್ಜ್​ಶೀಟ್​ನಲ್ಲಿ ಕಿಶೋರ್​ ಶೆಟ್ಟಿ ಹೇಳಿಕೆ ಉಲ್ಲೇಖ

Source: newsfirstlive.com Source link