ಡ್ರಗ್​ ಕೇಸ್: ‘ಯಾಕೆ ಕೆಲವ್ರಿಗೆ ಹೇರ್​ ಪಾಲಿಕಲ್ ಟೆಸ್ಟ್​ ಮಾಡಿಲ್ಲ? -ಇಂದ್ರಜಿತ್ ಪ್ರಶ್ನೆ

ಡ್ರಗ್​ ಕೇಸ್: ‘ಯಾಕೆ ಕೆಲವ್ರಿಗೆ ಹೇರ್​ ಪಾಲಿಕಲ್ ಟೆಸ್ಟ್​ ಮಾಡಿಲ್ಲ? -ಇಂದ್ರಜಿತ್ ಪ್ರಶ್ನೆ

ಬೆಂಗಳೂರು: ಡ್ರಗ್​ ಕೇಸ್​ ಕರ್ನಾಟಕ ಇತಿಹಾಸದಲ್ಲೇ ದೊಡ್ಡ ಸ್ಕ್ಯಾಂಡಲ್​ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

ಡ್ಯಾನ್ಸರ್ ಹಾಗೂ ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್​ ಶೆಟ್ಟಿ ಹೇಳಿಕೆಯಲ್ಲಿ ಅನುಶ್ರೀ ಹೆಸರು ಕೇಳಿಬಂದ ಬೆನ್ನಲ್ಲೇ ನಗರದಲ್ಲಿ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ನಾನು ಹೇಳಿದಾಗ ಅದನ್ನ ನಿರಾಕರಿಸಿದ್ದರು. ಅಲ್ಲದೇ ಯಾರೆಲ್ಲಾ ಡ್ರಗ್ಸ್​ ಸೇವನೆ ಮಾಡಿಲ್ಲ ಅಂತಾ ಹೇಳಿಕೊಂಡಿದ್ದರೂ ಅವರು ಏನು ಅನ್ನೋದು ಗೊತ್ತಾಗಿದೆ. ನಾನು ಈ ಹಿಂದೆ ಡ್ರಗ್ಸ್ ಜಾಲದ ಬಗ್ಗೆ ಧ್ವನಿಯೆತ್ತಿದೆ. ಆ ಸಮಯದಲ್ಲಿ ನನ್ನ ಹಲವಾರು ಜನ ನನ್ನ ಬೆನ್ನು ತಟ್ಟಿದ್ದರು.

ಒನ್​ಡೇ ಮ್ಯಾಚ್​ ಅಲ್ಲ.. 
ಇಂದಿನ ಬೆಳವಣಿಗೆಗಳು ಸಮಾಜದ ದೃಷ್ಟಿಯಿಂದ, ಕರ್ನಾಟಕದ ದೃಷ್ಟಿಯಿಂದ ಒಂದು ಸಮಾಧಾನಕರ ವಿಚಾರ. ಇದರಿಂದ ದೊಡ್ಡ ಮಟ್ಟದಲ್ಲಿ ಒಂದು ಅರಿವು ಇದೆ. ಈ ವಿಚಾರದಲ್ಲಿ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಇದು ಒನ್​ಡೇ ಮ್ಯಾಚ್​ ಅಲ್ಲ, ದಿನ ನಿತ್ಯವೂ ಈ ಹೋರಾಟವನ್ನ ಮುಂದುವರಿಸಬೇಕು.

ಇಂದು ಅರೆಸ್ಟ್ ಮಾಡಿದ್ದಾರೆ, ತನಿಖೆ ಮಾಡಿದ್ದಾರೆ. ಆದರೂ ಕೂಡ ಡ್ರಗ್ಸ್​ ದಂಧೆ ನಡೆಯುತ್ತಿರೋದು ಯಾಕೆ? ಯಾರನ್ನ ನೀವು ಅರೆಸ್ಟ್ ಮಾಡಿದ್ದೀರೋ? ತನಿಖೆ ಮಾಡಿದ್ದೀರೋ? ಅವರೇ ಇಂದು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತನಿಖೆ ನಿರಂತರವಾಗಿ ನಡೆಯಬೇಕು. ನನಗೆ ನೀವು ಸಹಕರಿಸಿದ ರೀತಿಯಲ್ಲಿ ಮುಂದೆಯೂ ಸಹಕರಿಸಿ. ಇಲ್ಲಿ ರಾಜಕೀಯ, ಚಿತ್ರರಂಗದ ಹಾಗೂ ಸಮಾಜದ ಆ್ಯಂಗಲ್ ಇದೆ. ಇಂದು ಪೊಲೀಸರು ಕಳುಹಿಸಿರುವ ಮೆಸೇಜ್​ನಿಂದ ಯಾರಿಗೂ ಭಯ ಆಗಿಲ್ಲ. ಡ್ರಗ್ಸ್​ ಸೇವನೆ ನಿರಂತರವಾಗಿ ನಡೆಯುತ್ತಿರೋದ್ರಿಂದ ಮತ್ತೆ ಮತ್ತೆ ಜನ ಸಿಕ್ಕಿ ಹಾಕಿಕೊಳ್ತಿದ್ದಾರೆ ಎಂದು ಆರೋಪಿಸಿದರು.

ಹೇರ್​ ಪಾಲಿಕಲ್ ಟೆಸ್ಟ್ ಮಾಡಬೇಕು. ಯೂರಿನ್ ಮತ್ತು ಬ್ಲಡ್​ ಟೆಸ್ಟ್​ ಮಾಡಿದ್ರೆ ಗೊತ್ತಾಗಲ್ಲ. ಹೇರ್​ ಪಾಲಿಕಲ್ ಟೆಸ್ಟ್​ ಮಾಡಿದ್ರೆ ಒಂದು ವರ್ಷದ ಹಿಂದೆ ಏನೆಲ್ಲಾ ನಡೆದಿದೆ ಅನ್ನೋದ್ರ ಬಗ್ಗೆ ಗೊತ್ತಾಗುತ್ತದೆ. ಹೇಲ್​ ಪಾಲಿಕಲ್ ಟೆಸ್ಟ್​ ಯಾಕೆ ಕೆಲವರಿಗೆ ಮಾಡಿಲ್ಲ? ಯಾಕೆ ಹೇಳಿಕೆ ಪಡೆದುಕೊಂಡು ಅವರನ್ನ ವಾಪಸ್ ಕಳುಹಿಸಿದ್ರೆ, ಅವರಿಗೂ ಹೇರ್​ ಪಾಲಿಕಲ್ ಟೆಸ್ಟ್​ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.

Source: newsfirstlive.com Source link