ಡ್ರಗ್ಸ್​ ಪ್ರಕರಣ; ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ -ಆರಗ ಜ್ಞಾನೇಂದ್ರ

ಡ್ರಗ್ಸ್​ ಪ್ರಕರಣ; ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ -ಆರಗ ಜ್ಞಾನೇಂದ್ರ

ಬೆಳಗಾವಿ: ಡ್ರಗ್ಸ್ ಕೇಸ್ ಚಾರ್ಜ್​​ಶೀಟ್​ನಲ್ಲಿ ಆ್ಯಂಕರ್ ಅನುಶ್ರೀ ಕೈ ಬಿಡಲಾಗಿದೆಯೇ ಎಂಬ ಪ್ರಶ್ನೆ ಉದ್ಭವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಯಾರನ್ನು ಬಿಡೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಡ್ರಗ್ಸ್ ಪ್ರಕರಣದಲ್ಲಿ ಯಾವ ರಾಜಕೀಯ ಒತ್ತಡಗಳು ಇರೋದಿಲ್ಲ. ಡ್ರಗ್ಸ್ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಯಾರನ್ನು ಬಿಡುವ ಪ್ರಶ್ನೆ ಇಲ್ಲ, ನಿಜವಾದ ಅಪರಾಧಿಗಳಾದ್ರೆ ಖಂಡಿತ ಶಿಕ್ಷೆಯಾಗುತ್ತೆ ಎಂದರು.

ಪೊಲೀಸರ ಮೇಲೆ ಒತ್ತಡ ಎಂಬುದೆಲ್ಲ ಊಹಾಪೋಹಗಳು, ನಮ್ಮ ಪೊಲೀಸರು ಯಾವ ಒತ್ತಡಗಳಿಗೂ ಮಣಿಯೋದಿಲ್ಲ. ಆರೋಪಿ ಅನುಶ್ರೀ ಹೆಸರು ಹೇಳಿದ ಮೇಲೂ ಅನುಶ್ರೀ ಹೆಸರು ಕೈ ಬಿಡಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಾರನ್ನು ಬಿಡೋ ಪ್ರಶ್ನೆಯಿಲ್ಲ ಆ ಬಗ್ಗೆ ಮಾಹಿತಿ ತಗೋತಿನಿ ಎಂದರು.

Source: newsfirstlive.com Source link