ಅಫ್ಘಾನ್​ನಲ್ಲಿ ತಾಲಿಬಾನಿ ಸರ್ಕಾರ; ಅಮೆರಿಕದ ಸ್ಪೈಮಾಸ್ಟರ್​ ಭೇಟಿಯಾದ ಅಜಿತ್ ದೋವಲ್

ಅಫ್ಘಾನ್​ನಲ್ಲಿ ತಾಲಿಬಾನಿ ಸರ್ಕಾರ; ಅಮೆರಿಕದ ಸ್ಪೈಮಾಸ್ಟರ್​ ಭೇಟಿಯಾದ ಅಜಿತ್ ದೋವಲ್

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸರ್ಕಾರ ರಚನೆ ಬೆನ್ನಲ್ಲೇ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಅಮೆರಿಕದ ಸ್ಪೈಮಾಸ್ಟರ್​ ವಿಲಿಯಮ್ ಬರ್ನ್​​​​​ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇಬ್ಬರು ಗಣ್ಯರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ದೋವಲ್ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಯ (ಸಿಐಎ) ಜೊತೆ ಮಾತುಕತೆ ನಡೆಸಿದ ವಿವರಗಳು ಲಭ್ಯವಾಗಿಲ್ಲ. ಆದರೆ ಅವರು ಮಾತುಕತೆಗಳು ದೇಶದ ಭದ್ರತೆಗೆ ಸಂಬಂಧಿಸಿದ್ದಾಗಿದೆ ಅಂತಾ ವರದಿಯಾಗಿದೆ.

ಆಗಸ್ಟ್​ 15 ರ ನಂತರ ತಾಲಿಬಾನಿಗಳು ಕಾಬೂಲ್ ವಶಪಡಿಸಿಕೊಂಡಾಗ ಎಲ್ಲಾ ದೇಶಗಳು ತಮ್ಮ ನಾಗರಿಕರನ್ನ ತಾಯ್ನಾಡಿಗೆ ಕರೆದುಕೊಂಡು ಬರುವ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಭಾರತ ಅಮೆರಿಕ ಜೊತೆ ಮಾತುಕತೆ ನಡೆಸಿ, ಭಾರತೀಯ ನಾಗರಿಕರನ್ನ ಕರೆದುಕೊಂಡು ಬರುವಲ್ಲಿ ಸಫಲವಾಗಿತ್ತು. ರಷ್ಯಾ ಮತ್ತು ಪಾಕಿಸ್ತಾನಗಳು ಅಲ್ಲಿಯೇ ಉಳಿದುಕೊಂಡಿವೆ.

ದೋವಲ್ ಮತ್ತು ಸಿಐಎ ಮುಖ್ಯಸ್ಥರ ಭೇಟಿಯು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಇತ್ತೀಚೆಗಿನ ಬೆಳವಣಿಯಿಂದ ಭಾರತದ ಮೇಲೆ ಯಾವೆಲ್ಲಾ ಪರಿಣಾಮ ಬೀರಬಹುದು. ತಾಲಿಬಾನಿ ಉಗ್ರರಿಂದ ಜಮ್ಮು-ಕಾಶ್ಮೀರದ ಮೇಲೆ ಪರಿಣಾಮ ಬೀರದಂತೆ ಹೇಗೆ ಕಾಪಾಡಿಕೊಳ್ಳುವುದು ಅನ್ನೋದ್ರ ಬಗ್ಗೆ ಚರ್ಚೆ ನಡೆಯಲಿದೆ ಅಂತಾ ಭಾರತ ನಿರೀಕ್ಷೆ ಮಾಡಿದೆ.

Source: newsfirstlive.com Source link