ಡ್ರಗ್ಸ್​ ‘ಸುಳಿ’ಯಲ್ಲಿ ರಾಣಾ ದಗ್ಗುಬಾಟಿ.. ED ಮುಂದೆ ಹಾಜರಾದ ಬಲ್ಲಾಳದೇವ

ಡ್ರಗ್ಸ್​ ‘ಸುಳಿ’ಯಲ್ಲಿ ರಾಣಾ ದಗ್ಗುಬಾಟಿ.. ED ಮುಂದೆ ಹಾಜರಾದ ಬಲ್ಲಾಳದೇವ

ಬಾಹುಬಲಿ ನಟಿ, ಟಾಲಿವುಡ್​ ಸ್ಟಾರ್​ ರಾಣಾ ದಗ್ಗುಬಾಟಿ ಇಂದು ಜಾರಿ ನಿರ್ದೇಶನಾಲಯ (ಇ.ಡಿ) ಎದುರು ಹಾಜರಾಗಿದ್ದಾರೆ.

2017ರ ಡ್ರಗ್ಸ್​ ಪ್ರಕರಣದ ಸಂಬಂಧ ರಾಣಾ ವಿಚಾರಣೆಗೆ ಎದುರಾಗಿದ್ದು, ಹೈದರಾಬಾದ್​​ನ ಇ.ಡಿ ಕಚೇರಿಗೆ ಇಂದು ಬೆಳಗ್ಗೆ ಆಗಮಿಸಿದರು. ಇ.ಡಿ ಅಧಿಕಾರಿಗಳು ಟಾಲಿವುಡ್​​ನ ಹಲವು ನಟ ನಟಿಯರಿಗೆ ಪ್ರಕರಣದ ಸಂಬಂಧ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.

ವರದಿಗಳ ಅನ್ವಯ 2017ರಲ್ಲಿ ಎಸ್​​​ಐಟಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಾಣಾ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೇ ಸಾಕ್ಷಿ ಆಧಾರಗಳ ಕೊರತೆಯಿಂದ ಎಸ್​​ಐಟಿ ಪೊಲೀಸರು ಕೂಡ ಯಾವುದೇ ಸ್ಟಾರ್ ನಟ, ನಟಿಯರ ಹೆಸರನ್ನು ಚಾರ್ಜ್​​ ಶೀಟ್​ನಲ್ಲಿ ಉಲ್ಲೇಖ ಮಾಡಿರಲಿಲ್ಲ ಎನ್ನಲಾಗಿದೆ. ಇನ್ನು ಪ್ರಕರಣ ಸಂಬಂಧ ವಿಚಾರಣೆಗೆ ಆರಂಭ ಮಾಡಿದ ಇ.ಡಿ ಸೆ.2 ರಿಂದ 22ರ ನಡುವೆ ವಿಚಾರಣೆಗೆ ಹಾಜರಾಗಲು ನೋಟಿಸ್​ ನೀಡಿದೆ. ಇದರಂತೆ ರಾಕುಲ್​ ಪ್ರೀತ್​ ಸಿಂಗ್​ ಸೆ.6 ರಂದು ಹಾಜರಾಗಿದ್ದರು. ಸೆ.9 ರಂದು ರಜಿತೇಜ ವಿಚಾರಣೆಗೆ ಆಗಮಿಸಬೇಕಿದೆ.

blank

ಏನಿದು 2017ರ ಡ್ರಗ್ಸ್ ಪ್ರಕರಣ?
2017ರ ಜೂನ್​​ನಲ್ಲಿ ಹೈದರಾಬಾದ್ ಪೊಲೀಸರು ಬಹುದೊಡ್ಡ ಡ್ರಗ್ಸ್​ ರಾಕೆಟ್​ ದಂಧೆಯನ್ನು ಬೆಳಕಿಗೆ ತಂದಿದ್ದರು. ಇದರಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಡ್ರಗ್ಸ್​ ಸೇವನೆ ಮಾಡುತ್ತಿದ್ದದ್ದು ಖಚಿತವಾಗಿತ್ತು.

ಅಲ್ಲದೇ ಆರೋಪಿಗಳು ವಿದ್ಯಾರ್ಥಿಗಳು ಮಾತ್ರವಲ್ಲದೇ ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎಂದು ಗುರುತಿಸಿಕೊಂಡಿದ್ದ ವ್ಯಕ್ತಿಗಳು ಡ್ರಗ್ಸ್ ಪೂರೈಕೆ ಮಾಡಿರುವುದು ಕಂಡು ಬಂದಿತ್ತು. ಇದರಲ್ಲಿ ಟಾಲಿವುಡ್​ನ ಹಲವು ನಟ-ನಟಿಯರ ಹೆಸರು ಕೇಳಿ ಬಂದಿತ್ತು. ಸದ್ಯ ಡ್ರಗ್ಸ್ ಖರೀದಿಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ಆರೋಪ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಇ.ಡಿ ಕೂಡ ಎಂಟ್ರಿ ಕೊಟ್ಟಿತ್ತು.

Source: newsfirstlive.com Source link