ನಿವೃತ್ತ ಐಪಿಎಸ್ ಅಧಿಕಾರಿಯ ಮಧ್ಯಸ್ಥಿಕೆಯಿಂದ ಇಡೀ ಕೇಸ್ ಹಳ್ಳ ಹಿಡಿದಿದೆ: ಸಂಬರ್ಗಿ ಆರೋಪ

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಪ್ರಭಾವದಿಂದ ಇಡೀ ಡ್ರಗ್ಸ್ ಪ್ರಕರಣ ಹಳ್ಳ ಹಿಡಿದಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರುಣ್ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಚಾರ್ಜ್ ಶೀಟ್ ನಲ್ಲಿ ತರುಣ್ ಹೆಸರು ಯಾಕೆ ಉಲ್ಲೇಖ ಆಗಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬರೀ ಯೂರಿನ್, ರಕ್ತ ಪರೀಕ್ಷೆ ಮಾಡಿದ್ರೆ ಸಾಲದು -ಹೇರ್ ಫೋಲಿಕಲ್ ಟೆಸ್ಟ್‌ಗೆ ಇಂದ್ರಜಿತ್ ಆಗ್ರಹ

ನಿವೃತ್ತ ಐಪಿಎಸ್ ಆಫೀಸ್ ಅವರ ಮಧ್ಯಸ್ಥಿಕೆಯಿಂದ ಇಡೀ ಕೇಸ್ ಹಳ್ಳ ಹಿಡಿದಿದೆ. ಇಲ್ಲಿ ಅನುಶ್ರೀ ಡ್ರಗ್ಸ್ ಸೇವನೆ ಮಾಡಿಲ್ಲ. ಬೆಂಗಳೂರಿಗಿಂತ ಮಂಗಳೂರಿನಲ್ಲಿ ಡ್ರಗ್ಸ್ ಮಾತ್ರೆಗಳು ಹೆಚ್ಚಾಗಿ ಸಿಗುತ್ತಿದೆ ಎಂಬುದು ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅಲ್ಲಿಗೆ ಗೋವಾ ಹಾಗೂ ಕೇರಳದಿಂದ ಡ್ರಗ್ಸ್ ಮಾತ್ರೆಗಳು ರವಾನೆಯಾಗುತ್ತಿವೆ ಎಂದು  ಆರೋಪಿಸಿದರು. ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ

ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ್ದ ಇಂದ್ರಜಿತ್, ಯೂರಿನ್ ರಕ್ತ ಪರೀಕ್ಷೆಯ ಬದಲು ಹೇರ್ ಫೋಲಿಕಲ್ ಟೆಸ್ಟ್ ಮಾಡಿ ಎಂದು ಆಗ್ರಹಿಸಿದ್ದರು. ಈ ಹಿಂದೆ ಪ್ರಕರಣ ಸಂಬಂಧ ಯಾರನ್ನು ವಿಚಾರಣೆಗೆ ಕರೆದಿದ್ದಾರೋ ಅವರಿಗೆ ಯಾವುದೇ ರೀತಿಯ ಭಯ ಹುಟ್ಟಿಲ್ಲ. ಕೊರೊನಾ ಎರಡನೇ ಅಲೆಯ ಬಳಿಕ ಅವರು ಮತ್ತೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.  ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

blank

ನಾನು ಈ ಹಿಂದೆ ಹೇಳಿದಂತೆ ಇದೊಂದು ಇಡೀ ಕರ್ನಾಟಕದ ಇತಿಹಾಸದಲ್ಲಿಯೇ ದೊಡ್ಡ ಸ್ಕ್ಯಾಮ್ ಆಗಿದೆ. ರಾಜಕೀಯ, ಸಮಾಜ, ಯುವಕ ಹಾಗೂ ಚಿತ್ರರಂಗದ ಆ್ಯಂಗಲ್ ಗಳಿವೆ. ಹೀಗಾಗಿ ನೀವು ಕಳಿಸಿರುವ ಸಂದೇಶದಿಂದ ಯಾರಿಗೂ ಭಯ ಇಲ್ಲ. ಇಂದಿಗೂ ಕೋಟ್ಯಂತರ ರೂ. ಡ್ರಗ್ಸ್ ಕರ್ನಾಟಕ ಮಾತ್ರವಲ್ಲದೇ ಅದರಲ್ಲೂ ಬೆಂಗಳೂರಿನಲ್ಲಿ ಡಂಪ್ ಆಗುತ್ತಿದೆ ಎಂದು ಇಂದ್ರಜಿತ್ ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಡ್ರಗ್ಸ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

Source: publictv.in Source link