ಅನುಶ್ರೀ ಮುಖವಾಡ ಕಳಚಿ ಬಿದ್ದಿದ್ದೆ, ಜೈಲಿಗೆ ಹೋಗೋದು ಪಕ್ಕ -ಪ್ರಶಾಂತ್ ಸಂಬರಗಿ

ಅನುಶ್ರೀ ಮುಖವಾಡ ಕಳಚಿ ಬಿದ್ದಿದ್ದೆ, ಜೈಲಿಗೆ ಹೋಗೋದು ಪಕ್ಕ -ಪ್ರಶಾಂತ್ ಸಂಬರಗಿ

ಬೆಂಗಳೂರು: ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಿರೂಪಕಿ ಅನುಶ್ರೀಗೆ ವಿರುದ್ಧ ಎ2 ಆರೋಪಿಯಾಗಿರುವ ಕಿಶೋರ್ ಮಾಹಿತಿ ನೀಡಿದ್ದಾರೆ ಎಂಬ ಬಗ್ಗೆ ಪೊಲೀಸರು ಚಾರ್ಜ್​ ಶೀಟ್​​ ಸಲ್ಲಿಕೆ ಮಾಡಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ ನೀಡಿದ್ದು, ಸೆಪ್ಟೆಂಬರ್‌ 2020ರಲ್ಲಿ ನಾನು ಸುಗರ್ ಡ್ಯಾಡಿ ಅಂತ ಟ್ವೀಟ್ ಮಾಡಿದ್ದೆ. ಪ್ರಕರಣ ವಿಚಾರಣೆ ಸರಿಯಾದ ಕ್ರಮದಲ್ಲಿ ನಡೆದಿಲ್ಲ ಎಂದು ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಶಾಂತ್ ಸಂಬರಗಿ, ಸೆಪ್ಟೆಂಬರ್‌ 2020ರಲ್ಲಿ ನಾನು ಸುಗರ್ ಡ್ಯಾಡಿ ಅಂತ ಆಗ ಮಾಜಿ ಮುಖ್ಯಮಂತ್ರಿಯೊಬ್ಬರು ಊಹಾಪೋಹಕ್ಕೆ ನಾಂದಿ ಹಾಡಿದ್ರು. ಈ ಪ್ರಕರಣದಲ್ಲಿ ಅನುಶ್ರೀ ಅವರನ್ನು ಡೈಲ್ಯೂಟ್ ಮಾಡಲಾಗಿದೆ. ಈ ಪ್ರಕರಣದ ತನಿಖೆ ಮಾಡ್ತಿದ್ದ ಶಿವಪ್ರಕಾಶ್ ವರ್ಗಾವಣೆ ಮಾಡಿದ್ರು. ಪೊಲೀಸ್ ವಿಚಾರಣೆಗೆ ಬರೋಕೆ ಅನುಶ್ರೀ ನಾಟಕ ಮಾಡಿದ್ರು. ನಂತರ ಫೇಸ್ ಬುಕ್ ಲೈವ್ ಬಂದು ನಾಟಕ ಮಾಡಿ ನನ್ನ ಸ್ತ್ರೀ ವಿರೋಧಿ ಅನ್ನೋತರ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಮಂಗಳೂರು ಪೊಲೀಸ್ ವೀಕ್ ಆಗಿದ್ದು ಏಕೆ..? ಶಿವಪ್ರಕಾಶ್ ನಾಯಕ್ ಅವರನನ್ನ ಎತ್ತಂಗಡಿ ಮಾಡಿದ್ದೇಕೆ. ಎಸಿಪಿ ಗಾವ್ಕಂಕರ್ ಸರಿಯಾದ ತನಿಖೆ ಮಾಡಿಲ್ಲ ಎಂದು ಆರೋಪಿಸಿದರು.

ತರುಣ್ ಹೇಳಿಕೆಯಲ್ಲೆ ಅನುಶ್ರೀ ಇದೆ. ಆದರೆ ಚಾರ್ಜ್ ಶೀಟ್ ನಲ್ಲಿ ತರುಣ್ ಹೆಸರನ್ನು ಕೈ ಬಿಟ್ಟಿದ್ದು ಯಾಕೆ? ಅಪ್ರಭಾವಿ ವ್ಯಕ್ತಿ ಮುಖ್ಯಮಂತ್ರಿ ಭೇಟಿಯಿಂದ ಈ ಪ್ರಕರಣ ವೀಕ್ ಆಗಿದೆ. ಮಂಗಳೂರಿನ ಸಿಸಿಬಿಯಲ್ಲಿ ಲೋಪದೋಷ ಕಾಣ್ತಿದೆ. ತರುಣ್ ಹೇಳಿಕೆಯಲ್ಲೇ ಅನುಶ್ರೀ ಹೆಸರಿರೋದು.. ಆದರೆ ಅನುಶ್ರೀ ಬಚಾವ್ ಮಾಡುವ ಸಲುವಾಗಿ ತರುಣ್ ಅವರನ್ನು ಬಿಟ್ಟು ಕಳಿಸಲಾಗಿದೆ. ಈ ಪ್ರಕರಣವನ್ನು ಮರು ತನಿಖೆ ಮಾಡಬೇಕು. ತರುಣ್ ನ ಮತ್ತೆ ವಿಚಾರಣೆ ಮಾಡಬೇಕು. ಅನುಶ್ರೀ ಡ್ರಗ್ ಸೇವನೆ ಮಾತ್ರವಲ್ಲ ಪೆಡ್ಲಿಂಗ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಅನುಶ್ರೀ ಮುಖವಾಡ ಕಳಚಿ ಬಿದ್ದಿದ್ದೆ. ಅನುಶ್ರೀ ಜೈಲಿಗೆ ಹೋಗೋದು ಪಕ್ಕ. ಮಂಗಳೂರಿನ 12 ಕೋಟಿ ರೂ. ಮನೆ, ಬೆಂಗಳೂರಿನ 4 ಕೋಟಿ ರೂ. ಮನೆ ಬರಿ ಟಿವಿಯಿಂದಲೇ ಬಂದಿದ್ದು ಅಂದ್ರೆ ಅವರನ್ನ ಮೆಚ್ಚುತ್ತೇನೆ.

ಶುಗರ್ ಡ್ಯಾಡಿ ವಿಚಾರದಲ್ಲಿ ಆಗಿನ ಮುಖ್ಯಮಂತ್ರಿ ಅಂತ ಹೇಳಿದೆ. ಮುಂದಿನ ದಿನಗಳಲ್ಲಿ ಪ್ರೆಸ್ ಮೀಟ್ ಮಾಡಿ ನನಗೆ ಕರೆ ಬಂದಿದ್ದ ಆಡಿಯೋ ರಿಲೀಸ್ ಮಾಡ್ತಿನಿ. ನಿವೃತ್ತಿಯಾಗಿರುವ IPS ಅಧಿಕಾರಿಯಿಂದ ಈ ಕೇಸ್ ದಿಕ್ಕು ತಪ್ಪಿದೆ ಎಂದು ನಾನು ನೇರವಾಗಿ ಅರೋಪ ಮಾಡ್ತಿನಿ. ಅನುಶ್ರೀ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು.

ಅಕಿಲ್ ನವೀಶಿಲ್, ಕಿಶೋರ್ ಅಮನ್ ಶೆಟ್ಟಿ, ಮಹಮದ್ ಶಕೀದ್, ಫ್ರಾಂಕ್ ಸಂಡೆ ಇಬ್ಬಚ್ಚು, ಶಮೀನ್ ಫರ್ನಂಢೀಶ್ ಆಲಿಸ್ ಶಾಮ್ ಇವರೆಲ್ಲಾ ಮಂಗಳೂರಿನ ಇನ್ವೆಸ್ಟಿಗೇಷನ್ ನಲ್ಲಿ ಬಂದಿರೋ ಹೆಸರು ಆದರೆ ತರುಣ್ ಹೆಸರಿಲ್ಲ. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಿಂದ ನನಗೆ ಬೆದರಿಕೆ ಕರೆ ಬರುತ್ತೆ. ಈ ವಿಚಾರವಾಗಿ ನಾನು ಪೊಲೀಸ್ ಕಂಪ್ಲೈಂಟ್ ನೀಡಿದ್ದೆ. ಅವರು ನನಗೆ ನಂಬರ್, ಮನೆ, ಕಾರ್ ಚೇಂಜ್ ಮಾಡುವಂತೆ ಹೇಳಿದ್ದಾರೆ.

ಸ್ಯಾಂಡಲ್ ವುಡ್ ನ ಸ್ಟಾರ್ ನಟ, ನಟಿ ಇಬ್ಬರು ಡ್ರಗ್ ಒವರ್ ಡೋಸ್ ನಿಂದ ಸಾವನ್ನಪ್ಪಿದ್ದಾರೆ. ನಾನು ಶುಗುರ್ ಡ್ಯಾಡಿ ಅನ್ನೋ ಪುಸ್ತಕ ಬರೆಯುತ್ತಿದ್ದೇನೆ. ಶೀಘ್ರದಲ್ಲೇ ಬುಕ್ ಹೊರ ಬರಲಿದೆ. ಕೊರೊನಾದಿಂದ ಉಡ್ತಾ ಕರ್ನಾಟಕ ಆಗೋದು ತಪ್ಪಿದೆ. ಲಾಕ್ ಡೌನ್ ಇದ್ದ ಕಾರಣ ಶಾಲಾ, ಕಾಲೇಜ್ ರಜಾ ಇದ್ದ ಕಾರಣ ಡ್ರಗ್ ದಂದೇ ಸ್ಲೋ ಆಗಿದೆ. ಆಗಸ್ಟ್ 21ಕ್ಕೆ ಅನಿತಾ 2000 ಜನ ಡ್ರಗ್ ಸೇವನೆ ಮಾಡುವವರ ಹೆಸರು ಬಿಡುಗಡೆ ಮಾಡ್ತಾರೆ. ನವಂಬರ್ 1ಕ್ಕೆ ನಶೆ ಎಂದರೆ ಅಂತ ನಾಗೇಂದ್ರ ಪ್ರಸಾದ್ ಬರೆದಿರುವ ಪುಸ್ತಕ, ಶುಗರ್ ಡ್ಯಾಡಿ ಪುಸ್ತಕ ರಿಲೀಸ್ ಆಗಲಿದೆ ಎಂದರು.

Source: newsfirstlive.com Source link