ಡ್ರಗ್​​ ಕೇಸ್​: ರಾಜಕೀಯ ಒತ್ತಡಕ್ಕೆ ಮಣಿದು ಅನುಶ್ರೀ ಹೆಸರು ಕೈಬಿಟ್ಟಿತ್ತಾ ಮಂಗಳೂರು ಸಿಸಿಬಿ..?

ಡ್ರಗ್​​ ಕೇಸ್​: ರಾಜಕೀಯ ಒತ್ತಡಕ್ಕೆ ಮಣಿದು ಅನುಶ್ರೀ ಹೆಸರು ಕೈಬಿಟ್ಟಿತ್ತಾ ಮಂಗಳೂರು ಸಿಸಿಬಿ..?

ಬೆಂಗಳೂರು: ಮಂಗಳೂರು ಡ್ರಗ್​​ ಕೇಸ್​ಗೆ ಸಂಬಂಧಿಸಿದಂತೆ ಡ್ಯಾನ್ಸರ್ ಕಿಶೋರ್ ತನಿಖೆ ವೇಳೆ ಅನುಶ್ರೀ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ. ಕಿಶೋರ್​ ಶೆಟ್ಟಿ ಹೇಳಿಕೆಯಿಂದ ಅನುಶ್ರೀ ಮತ್ತೆ ಲಾಕ್ ಆಗುತ್ತಾರಾ ಅನ್ನೋ ಅನುಮಾನ ಶುರುವಾಗಿದೆ.

ಸಾಕ್ಷಿಗಳನ್ನು ಸಂಗ್ರಹ ಏನಾಗಬೇಕಿತ್ತು..?
ಜೊತೆಗೆ ಈ ಪ್ರಕರಣದಲ್ಲಿ ಅನುಶ್ರೀ ಆರೋಪಿ‌ ಅಲ್ಲ. ಮಂಗಳೂರು ಡ್ರಗ್​​ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಿಶೋರ್ ಕೊಟ್ಟ ಹೇಳಿಕೆಯಲ್ಲಿ ಅನುಶ್ರೀ ಹೆಸರು ಬಂದಿದೆ. ಅನುಶ್ರೀ ಜೊತೆ ಸೇರಿ ಡ್ರಗ್ ಸೇವನೆ ಮಾಡಿರೋದಾಗಿ ಕಿಶೋರ್​ ಶೆಟ್ಟಿ ಹೇಳಿದ್ದಾನೆ. ಹೀಗಾಗಿ ಮಂಗಳೂರು ಸಿಸಿಬಿ ಪೊಲೀಸ್ರ ವಿರುದ್ಧ ಒಂದಿಷ್ಟು ಡೌಟ್​​ಗಳೂ ಮೂಡಿವೆ.

ಇದನ್ನೂ ಓದಿ: ಅನುಶ್ರೀ ಮುಖವಾಡ ಕಳಚಿ ಬಿದ್ದಿದ್ದೆ, ಜೈಲಿಗೆ ಹೋಗೋದು ಪಕ್ಕ -ಪ್ರಶಾಂತ್ ಸಂಬರಗಿ

ಕಿಶೋರ್ ಹೇಳಿಕೆಯ ಆಧಾರದ ಮೇಲೆ ಅನುಶ್ರೀಯವರ ವಿಚಾರಣೆ ನಡೆದಿದೆ. ಕಿಶೋರ್ ಹೇಳಿಕೆಯಂತೆ ಡ್ರಗ್ ಪಡೆದ ಬಗ್ಗೆ ಪ್ರತ್ಯಕ್ಷ ಸಾಕ್ಷಿ ಪತ್ತೆಯಾಗಿದೆ. ಕಿಶೋರ್ ಡ್ರಗ್ ಪಡೆಯಲು ಅನುಶ್ರೀ ಪ್ರಚೋದನೆ ನೀಡಿರುವ ಆರೋಪವಿದೆ. ಅವರೇ ಡ್ರಗ್ ಖರೀದಿ ಮಾಡಿಕೊಂಡು ಬಂದಿದ್ದಾಗಿ ಕಿಶೋರ್ ಹೇಳಿದ್ದಾರೆ. ಡ್ರಗ್ ಕೇಸ್​ನಲ್ಲಿ ಆರೋಪಿಯ ಪಾತ್ರದ ವಿಧಾನ ಪತ್ತೆ ಮಾಡಬೇಕಿತ್ತು. ಡ್ರಗ್ ಖರೀದಿ, ಸೇವನೆ ಸ್ಥಳ ಮಹಜರ್, ಹಣಕಾಸಿನ ಸಹಾಯ, ಡ್ರಗ್ ಸರಬರಾಜು, ಡ್ರಗ್ ಸೇವನೆಗೆ ಪ್ರಚೋದನೆ ನೀಡಿರುವ ಬಗ್ಗೆ ತನಿಖೆ ಮಾಡಬೇಕು.

ಇದನ್ನೂ ಓದಿ: ಆ್ಯಂಕರ್​​ ಅನುಶ್ರೀ ವಿರುದ್ಧ ಡ್ರಗ್ಸ್​ ಕೇಸ್ ಆರೋಪಿ ಕಿಶೋರ್ ನೀಡಿರೋ ಹೇಳಿಕೆ ಏನು..?

ಯಾವ ಮೂಲದಿಂದ ಅವರಿಗೆ ಡ್ರಗ್ ಸಿಕ್ತು ಅನ್ನೋದನ್ನ ಪತ್ತೆ ಮಾಡಬೇಕು. ಅವರು ಸೇವನೆ ಮಾಡಿದ್ದಾರೆಂದು ಆರೋಪಿಸಿದ್ದ ಡ್ರಗ್ ಮಾದರಿ ಚೆಕ್ ಮಾಡಬೇಕು. ಮಾತ್ರವಲ್ಲ ಯಾವ ಉದ್ದೇಶಕ್ಕೆ ಡ್ರಗ್ ತೆಗೆದುಕೊಂಡಿದ್ದರು ಅನ್ನೋದು ಕೂಡ ಪತ್ತೆ ಮಾಡಬೇಕು. ಅಲ್ಲದೇ ಡ್ರಗ್ ಪಡೆದುಕೊಂಡ ಬಳಿ ಆಗಿರುವ ಮುಂದಿನ ಪರಿಣಾಮ ಏನು? ಈ ಕೇಸ್​ನಲ್ಲಿ ಒಳಸಂಚು ನಡೆದಿದ್ಯಾ? ಇಲ್ಲವಾ ಅನ್ನೋದನ್ನ ಪತ್ತೆ ಮಾಡಬೇಕು. ಡ್ರಗ್ ಕ್ವಾಂಟಿಟಿಯೂ ಸಹ ಕೇಸ್ ನಲ್ಲಿ ಪ್ರಮುಖವಾಗುತ್ತದೆ. ಇದನ್ನೆಲ್ಲಾ ಸಹ ತನಿಖಾಧಿಕಾರಿಗಳು ಪತ್ತೆ ಮಾಡಬೇಕಿತ್ತು.

ಡ್ರಗ್ ಕೇಸ್​ನಿಂದ ಆರೋಪಿ ಕೈಬಿಡಲು ಕೊಟ್ಟ ಕಾರಣಗಳೇನು?

  • ಆರೋಪಿಯ ಹೇಳಿಕೆಯ ಮೇಲೆ ಚಾರ್ಜ್ ಮಾಡಲು ಸಾಧ್ಯವಿಲ್ಲ
  • ಸೂಕ್ತ ಸಾಕ್ಷಿಗಳು ಪ್ರಮುಖವಾಗಿ ಸಿಕ್ಕಿಲ್ಲದಿರುವುದು ಕಾರಣ
  • ಯಾವುದೇ ಡಿಜಿಟಲ್ & ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿಲ್ಲ
  • ವೈದ್ಯಕೀಯ ಪರೀಕ್ಷೆ ನಡೆಸದೇ ಕೇಸ್ ನಿಂತಿಲ್ಲ
  • ನೇರವಾಗಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಸಿಕ್ಕಿಲ್ಲ

ಹೀಗಾಗಿ ಸದ್ಯಕ್ಕೆ ಮಂಗಳೂರು ಸಿಸಿಬಿ ಪೊಲೀಸರ ಬಗ್ಗೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಮುಂಬರುವ ದಿನಗಳಲ್ಲಿ ಏನಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

Source: newsfirstlive.com Source link