ನಾನು ಅನುಶ್ರೀ ಹೆಸರನ್ನ ಹೇಳಿಯೇ ಇಲ್ಲ -ಚಾರ್ಜ್​ಶೀಟ್ ಉಲ್ಲೇಖ ನಿರಾಕರಿಸಿದ ಕಿಶೋರ್ ಶೆಟ್ಟಿ

ನಾನು ಅನುಶ್ರೀ ಹೆಸರನ್ನ ಹೇಳಿಯೇ ಇಲ್ಲ -ಚಾರ್ಜ್​ಶೀಟ್ ಉಲ್ಲೇಖ ನಿರಾಕರಿಸಿದ ಕಿಶೋರ್ ಶೆಟ್ಟಿ

ಬೆಂಗಳೂರು: ನನ್ನ ಹೇಳಿಕೆಯನ್ನ ಪೊಲೀಸರು ತಿರುಚಿದ್ದಾರೋ, ಬಿಟ್ಟಿದ್ದಾರೋ ನಂಗೆ ಗೊತ್ತಿಲ್ಲ. ಆದರೆ ನಾನು, ತರುಣ್ ಮತ್ತು ಅನುಶ್ರೀ ಸೇರಿ ಡ್ರಗ್​ ಸೇವನೆ ಮಾಡಿದ್ದೇವೆ ಅಂತಾ ಹೇಳಿಕೆಯನ್ನೇ ನೀಡಿಲ್ಲ ಎಂದು ಮಂಗಳೂರು ಡ್ರಗ್ ಪ್ರಕರಣದ ಆರೋಪಿ ನಂಬರ್ 2, ಡ್ಯಾನ್ಸರ್ ಕಿಶೋರ್​ ಶೆಟ್ಟಿ ಹೇಳಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಕಿಶೋರ್​ ಶೆಟ್ಟಿ.. ವಿಚಾರಣೆಯನ್ನ ಯಾರು ಮಾಡಿದ್ದಾರೆ ಎಂದು ಗೊತ್ತಿಲ್ಲ. ಅನುಶ್ರೀ ಡ್ರಗ್ಸ್​ ಸೇವನೆ ಮಾಡ್ತಾರೆ ಎಂದು ನಾನು ಹೇಳಿಲ್ಲ. ಅನುಶ್ರೀಯನ್ನ ಪರಿಚಯ ಮಾಡಿಕೊಟ್ಟಿದ್ದು ತರುಣ್. ನನ್ನ ಸ್ಟೇಟ್ಮೆಂಟ್​​ನಲ್ಲಿ ತರುಣ್ ಹೆಸರನ್ನ ನಾನು ಹೇಳಿಲ್ಲ. ಅನುಶ್ರೀ ಅವರನ್ನ ಪರಿಚಯ ಮಾಡಿಕೊಟ್ಟಿದ್ದು ಅಂತಾ ತರುಣ್ ಎಂದು ಹೇಳಿದ್ದೇನೆ.

ಒಮ್ಮೆ ಡ್ರಗ್ಸ್​ ತೆಗೆದುಕೊಂಡಿದ್ದೇನೆ
ಬೆಂಗಳೂರಲ್ಲಿ ನಾವು ಯಾವತ್ತೂ, ಅಂತಹ ಕೆಲಸವನ್ನ ಮಾಡಿಲ್ಲ. ಮಂಗಳೂರಲ್ಲಿ ಒಂದು ಬಾರಿ ಮಾತ್ರ ನಾನು ಡ್ರಗ್​​ ಸೇವನೆ ಮಾಡಿದ್ದೇನೆ. ಈ ವೇಳೆ ಅನುಶ್ರೀ ಅವರು ಇರಲಿಲ್ಲ. ಅನುಶ್ರೀಗೆ ಈ ವಿಚಾರದಲ್ಲಿ ಯಾವುದೇ ಸಂಬಂಧ ಇಲ್ಲ ಎಂದರು.

ಅಲ್ಲದೇ ಪೊಲೀಸ್ ವಿಚಾರಣೆ ವೇಳೆ ನಾನು ಅನುಶ್ರೀ ಹೆಸರನ್ನ ಹೇಳಲಿಲ್ಲ. ಡ್ರಗ್ಸ್​ ಸೇವಿಸಿ ನಾನು ಡ್ಯಾನ್ಸ್​ ಮಾಡಿಲ್ಲ. ಡ್ರಗ್ಸ್​ ಬಗ್ಗೆ ನನಗೆ ಕ್ಯೂರಿಯಾಸಿಟಿ ಇತ್ತು. ನಾನು ಅನುಶ್ರೀಗೆ ಹೇಳಲು ಇಷ್ಟಪಡ್ತೇನೆ. ಈ ಕೇಸ್​ನಲ್ಲಿ ಅನುಶ್ರೀ ಅವರು ಇಲ್ಲ. ನನಗೆ ಮತ್ತು ಅನುಶ್ರೀಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

Source: newsfirstlive.com Source link