‘ನಾನು ಎರಡು ಬಾರಿ ಡ್ರಗ್ಸ್​ ತೆಗೆದುಕೊಂಡಿದ್ದೇನೆ, ಆದರೆ ಅನುಶ್ರೀ..’

‘ನಾನು ಎರಡು ಬಾರಿ ಡ್ರಗ್ಸ್​ ತೆಗೆದುಕೊಂಡಿದ್ದೇನೆ, ಆದರೆ ಅನುಶ್ರೀ..’

ಮಂಗಳೂರು: ಡ್ರಗ್​ ಕೇಸ್​​ಗೆ ಸಂಬಂಧಿಸಿದಂತೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಆರೋಪಿ ಕಿಶೋರ್​ ಶೆಟ್ಟಿ.. ಅನುಶ್ರೀ ಜೊತೆ ಡ್ರಗ್​ ಸೇವನೆ ಮಾಡಿರುವ ಬಗ್ಗೆ ನಾನು ಹೇಳಿಯೇ ಇಲ್ಲ. ಅನುಶ್ರೀಗೂ, ನನಗೂ ಈ ಕೇಸ್​ನಲ್ಲಿ ಯಾವುದೇ ಸಂಬಂಧ ಇಲ್ಲ ಅಂತಾ ಹೇಳಿದರು.

ನಾಲ್ಕೈದು ವರ್ಷಗಳ ಹಿಂದೆ ಅವರು ನನ್ನನ್ನ ಭೇಟಿ ಮಾಡಿದ್ದರು. ಅನುಶ್ರೀ ಜೊತೆ ನಾನು ಯಾವುದೇ ಪಾರ್ಟಿ ಮಾಡಿಲ್ಲ. ನಾನು ಡ್ರಗ್ ಮಾಡಿ ಡ್ಯಾನ್ಸ್​ ಮಾಡಿಲ್ಲ. ನಾನು ಎರಡು ಬಾರಿ ಡ್ರಗ್ಸ್​ ಸೇವನೆ ಮಾಡಿದ್ದೇನೆ. ಆದರೆ ಡ್ರಗ್ಸ್​ ಸೇವನೆ ಮಾಡಿ ನಾನು ಡ್ಯಾನ್ಸ್​ ಮಾಡಿಲ್ಲ ಎಂದರು. ಚಾರ್ಜ್​ಶೀಟ್​ನಲ್ಲಿ ದಾಖಲಾದ ಉಲ್ಲೇಖಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

Source: newsfirstlive.com Source link