ಡ್ರಗ್​ ಪ್ರಕರಣದಲ್ಲಿ ಆ್ಯಂಕರ್ ಅನುಶ್ರೀ ಸೇಫ್ ಆಗಿಯೇ ಇರ್ತಾರಾ..?

ಡ್ರಗ್​ ಪ್ರಕರಣದಲ್ಲಿ ಆ್ಯಂಕರ್ ಅನುಶ್ರೀ ಸೇಫ್ ಆಗಿಯೇ ಇರ್ತಾರಾ..?

ಬೆಂಗಳೂರು: ಮಂಗಳೂರು ಸಿಸಿಬಿ ಪೊಲೀಸ್ರಿಂದ ಡ್ರಗ್ ಕೇಸ್ ಚಾರ್ಜ್ ಶೀಟ್​ನಲ್ಲಿ ಅನುಶ್ರೀ ಆರೋಪಿ ಎಂದು ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಆರೋಪಿ ಕಿಶೋರ್​ ಶೆಟ್ಟಿ ಅನುಶ್ರೀ ಹೆಸರನ್ನ ಹೇಳಿದ್ದಾರೆ ಅಷ್ಟೇ. ಹೀಗಾಗಿ ಡ್ರಗ್​ ಪ್ರಕರಣದಲ್ಲಿ ಅನುಶ್ರೀ ಸೇಫಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಅನುಶ್ರೀ ಸೇಫ್ ಆಗಿಯೇ ಇರ್ತಾರಾ? ಮುಂದೆ ಅನುಶ್ರೀಗೆ ಮತ್ತೆ ಸಂಕಷ್ಟ ಸಾಧ್ಯತೆ ಇದ್ಯಾ? ಅದಕ್ಕೆ ಇರುವ ಕಾನೂನು ದಾರಿಗಳು ಏನು ಹೇಳುತ್ತೆ? ಅಂತಾ ನೋಡೋದಾದ್ರೆ ಸದ್ಯಕ್ಕೆ ಅನುಶ್ರೀಗೆ ಸಿಸಿಬಿಯಿಂದ ಯಾವುದೇ ವಿಚಾರಣೆ ಇಲ್ಲ.

ಒಂದು ವೇಳೆ ಸಿಸಿಬಿ ಚಾರ್ಜ್ ಶೀಟ್​ನಲ್ಲಿ ಅನುಶ್ರೀ ಹೆಸರನ್ನ ಕೈಬಿಟ್ಟಿರುವ ಬಗ್ಗೆ ಪ್ರಶ್ನೆ ಮಾಡಬಹುದು. ಉದ್ದೇಶ ಪೂರ್ವಕವಾಗಿ ಬಿಟ್ಟಿದ್ದಾರೆಂದು ಪ್ರಶ್ನಿಸಬಹುದು. ಪ್ರಕರಣದ ಮರು ತನಿಖೆಗೆ ಆದೇಶ ಮಾಡುವಂತೆ ಕೋರಬಹುದು. ಅನುಶ್ರೀ ವಿರುದ್ಧ ಸಾಕ್ಷಿಗಳಿದ್ದರೂ ಬಿಟ್ಟಿದ್ದಾರೆಂದು ಆರೋಪಿಸಬಹುದು. ಆಗ ಮಾತ್ರ ಕೇಸ್ ಮತ್ತೆ ಜೀವ ಪಡೆದುಕೊಳ್ಳುವ ಸಾಧ್ಯತೆ ಇದೆ. ಇಲ್ಲಾಂದ್ರೆ ಪ್ರಕರಣದಲ್ಲಿ ಮುಂದೆ ಅನುಶ್ರೀಗೆ ಯಾವುದೇ ಕಿರಿಕಿರಿ ಇರಲ್ಲ.

Source: newsfirstlive.com Source link