ಕೊನೆಗೂ ಖೆಡ್ಡಾಗೆ ಬಿತ್ತು ಚಿರತೆ; ಕಾರ್ಯಾಚರಣೆ ಹೇಗಿತ್ತು..?

ಕೊನೆಗೂ ಖೆಡ್ಡಾಗೆ ಬಿತ್ತು ಚಿರತೆ; ಕಾರ್ಯಾಚರಣೆ ಹೇಗಿತ್ತು..?

ದಾವಣಗೆರೆ: ಜಿಲ್ಲೆಯಲ್ಲಿ ಜನರ ನಿದ್ದೆ ಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಕಳೆದ ಒಂದೆರಡು ತಿಂಗಳುಗಳಿಂದ ಚಿರತೆ ಹಾವಳಿಗೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮಸ್ಥರು ಆತಂಕಗೊಂಡಿದ್ದರು.

blank

ಒಂದು ತಿಂಗಳಿನಿಂದ ನಾಯಿ, ಎಮ್ಮೆಗಳ ಬೇಟೆಯಾಡ್ತಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು, ಜನರು ನಿರಾಳರಾಗಿದ್ದಾರೆ. ಇನ್ನು ಚಿರತೆಯ ಸೆರೆಗಾಗಿ ಅರಣ್ಯ ಇಲಾಖೆಯು ಒಂದು ತಿಂಗಳ ಹಿಂದೆಯೇ ಬೋನ್ ಇಟ್ಟಿತ್ತು. ಒಂದು ತಿಂಗಳಿನಿಂದ ಬೋನ್​ಗೆ ಬೀಳದ ಚಿರತೆ ಇಂದು ಸೆರೆಯಾಗಿದೆ. ಇನ್ನು ಸೆರೆಯಾಗಿರುವ ಚಿರತೆಯನ್ನ ಶಿವಮೊಗ್ಗದ ದಟ್ಟಾರಣ್ಯದ ಕಡೆ ಅರಣ್ಯ ಇಲಾಖೆ ಬಿಡಲಿದೆ.

Source: newsfirstlive.com Source link