ಡ್ರಗ್​​ ಕೇಸ್​: ಌಂಕರ್ ಅನುಶ್ರೀಗೆ ಮುಳವಾಗುತ್ತಾ ಈ ಪವರ್​ಪುಲ್​ ಸೆಕ್ಷನ್​ಗಳು?

ಡ್ರಗ್​​ ಕೇಸ್​: ಌಂಕರ್ ಅನುಶ್ರೀಗೆ ಮುಳವಾಗುತ್ತಾ ಈ ಪವರ್​ಪುಲ್​ ಸೆಕ್ಷನ್​ಗಳು?

ದಕ್ಷಿಣ ಕನ್ನಡ:  ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅನುಶ್ರೀ, ಚಾರ್ಜ್​ ಶೀಟ್​​ನಲ್ಲಿ ಆರೋಪಿ ಅಲ್ಲ ಎಂದಾಕ್ಷಣ  ಅವರು ಸೇಫ್ ಅಲ್ಲ ಎನ್ನಲಾಗ್ತಿದೆ. ಯಾಕಂದ್ರೆ ಅನುಶ್ರೀಗೆ ಸಿಸಿಬಿ ಕ್ಲೀನ್ ಚೀಟ್ ನೀಡಿಲ್ಲ. ಈ ಕುರಿತು ನ್ಯೂಸ್ ಫಸ್ಟ್ ಗೆ ಎಕ್ಸಕ್ಲೂಸೀವ್ ಅಂಶಗಳು ಲಭ್ಯವಾಗಿದ್ದು ಹೀಗಿವೆ.

CRPC 173(8)ಅಡಿ ಕೇಸ್​ ದಾಖಲು

ನಟಿ ಅನುಶ್ರೀಗೆ ಸಿಸಿಬಿ ಇನ್ನು ಕ್ಲೀನ್​ಚಿಟ್​ ನೀಡಿಲ್ಲವಾದ್ದರಿಂದ ನಟಿಯು ತಾನು ಅಪರಾಧ ಎಸಗಿಲ್ಲ ಎನ್ನಲಾಗ್ತಿದ್ದು, ಮಂಗಳೂರು ಸಿಸಿಬಿ CRPC 173(8)ಅಡಿ ಕೇಸ್​ ದಾಖಲು ಮಾಡಿದ್ದಾರೆ. ಈ ಸೆಕ್ಷನ್ ಪ್ರಕಾರ ಪ್ರಕರಣದ ತನಿಖೆ ಮುಕ್ತಾಯ ಆಗಿಲ್ಲ ಅಂತಾ ಹೇಳಲಾಗ್ತಿದ್ದು, ಅಂದ್ರೆ ಮುಂದೆ ಕೇಸ್ ಪುನಃ ತನಿಖೆ ನಡೆಸಲು ಅವಕಾಶವಿದೆ. ಪ್ರಕರಣದಲ್ಲಿ ಮತ್ತೆ ಆರೋಪಿಗಳ ಸೇರಿಸಲು ಈ ಸೆಕ್ಷನ್ ನಲ್ಲಿ ಅವಕಾಶ ಇದ್ದು, CRPC 173(8) ಸಬ್ ಸೆಕ್ಷನ್ 2 ಅಡಿ ನ್ಯಾಯಧೀಶರಿಗೆ ಮನವಿ ಸಲ್ಲಿಸಿದ ಬಳಿಕ ಅನುಮತಿ ಪಡೆದುಕೊಂಡು ಆರೋಪಿಯನ್ನ ಕೇಸ್​ಗೆ ಸೇರಿಸಬಹುದು.

ಇದನ್ನೂ ಓದಿ:ಡ್ರಗ್​​ ಕೇಸ್​: ರಾಜಕೀಯ ಒತ್ತಡಕ್ಕೆ ಮಣಿದು ಅನುಶ್ರೀ ಹೆಸರು ಕೈಬಿಟ್ಟಿತ್ತಾ ಮಂಗಳೂರು ಸಿಸಿಬಿ..?

ಎವಿಡೆನ್ಸ್ ಆಕ್ಟ್  ಸೆಕ್ಷನ್ 30 ಪ್ರಕಾರ ಕೇಸ್​ ದಾಖಲು

ಎವಿಡೆನ್ಸ್ ಆಕ್ಟ್ ಸೆಕ್ಷನ್ 30 ಅನುಶ್ರೀಗೆ ಮುಳುವಾಗಬಹುದು ಎನ್ನಲಾದ ಇನ್ನೊಂದು ಸೆಕ್ಷನ್. ಸೆಕ್ಷನ್ 30 ಪ್ರಕಾರ ಪೊಲೀಸರ ಮೇಲೆ ಒತ್ತಡ ತರಬಹುದು. ಇದರ ಪ್ರಕಾರ ಆರೋಪಿಯ ಸ್ವಇಚ್ಚಾ ಹೇಳಿಕೆಯೂ ಮುಖ್ಯವಾಗಿದ್ದು, ಆರೋಪಿ ಕಿಶೋರ್​ ಒಟ್ಟಿಗೆ ಸೇರಿ ಅಪರಾಧ ಮಾಡಿದ್ದೆವೆಂದು ಹೇಳಿಕೆ ನೀಡಿದ್ರೆ ಅದನ್ನು ಎವಿಡೆನ್ಸ್ ಆಕ್ಟ್​ ಸೆಕ್ಷನ್​ 30 ಪ್ರಕಾರ  ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಒಟ್ಟಿಗೆ ಸೇರಿ ಕ್ರೈಂ ಮಾಡಿದ ಮೇಲೆ ಅದು ನೇರವಾದ ಸಾಕ್ಷಿ ಎನ್ನಲಾಗುತ್ತದೆ. ಸದ್ಯ ಈ ಕೇಸ್ ನಲ್ಲಿ ಆರೋಪಿ ಕಿಶೋರ್ ನಾವು ಒಟ್ಟಿಗೆ ಸೇರಿ ಇಲ್ಲಿ ಡ್ರಗ್ ಸೇವಿಸಿದ್ದಾಗಿ ಹೇಳಿಕೆ ನೀಡಿದ್ದು, ಇದರ ಪ್ರಕಾರ ಈ ಸೆಕ್ಷನ್ ಪ್ರಕಾರ ಕ್ರಮಕ್ಕೆ ಮನವಿ ಮಾಡಬಹುದಾಗಿದೆ.

Source: newsfirstlive.com Source link