ಬಿಜೆಪಿ ಸಂಸದನ ಮೇಲೆ ಟಾರ್ಗೆಟ್​; ಮನೆ ಬಾಗಿಲಿಗೆ 3 ಬಾಂಬ್ ಎಸೆದ ದುಷ್ಕರ್ಮಿಗಳು..!

ಬಿಜೆಪಿ ಸಂಸದನ ಮೇಲೆ ಟಾರ್ಗೆಟ್​; ಮನೆ ಬಾಗಿಲಿಗೆ 3 ಬಾಂಬ್ ಎಸೆದ ದುಷ್ಕರ್ಮಿಗಳು..!

ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಅವರ ಮನೆಯ ಸಮೀಪದಲ್ಲಿ ಇಂದು ಬೆಳಗ್ಗೆ ಮೂರು ಬಾಂಬ್​​ಗಳನ್ನು ಯಾರೋ ಕಿಡಿಗೇಡಿಗಳು ಎಸೆದಿದ್ದಾರೆ.

ಕೋಲ್ಕತ್ತದಿಂದ ಸುಮಾರು 100 ಕಿ.ಮೀ. ದೂರದ ಜಗತ್‌ದಲ್‌ನಲ್ಲಿರುವ ಅರ್ಜುನ್‌ ಸಿಂಗ್‌ ಅವರ ಮನೆಯ ಗೇಟ್‌ಗೆ ಬಾಂಬ್‌ಗಳು ಅಪ್ಪಳಿಸಿದ್ದು, ಕಬ್ಬಿಣದ ಗೇಟ್‌ಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧನಕರ್‌ ಆಗ್ರಹಿಸಿದ್ದಾರೆ. ‘ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕ ಹಿಂಸಾಚಾರಗಳು ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯೇ ಚಿಂತೆಗೀಡು ಮಾಡಿದೆ ಅಂತ ಅಸಮಧಾನ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link