ಕ್ಯಾಮ್ಸ್​ ಶಶಿಕುಮಾರ್ ಹತ್ಯೆಗೆ ಸುಪಾರಿ​ ಆರೋಪ; RTI ಕಾರ್ಯಕರ್ತ ರವಿ ಅರೆಸ್ಟ್

ಕ್ಯಾಮ್ಸ್​ ಶಶಿಕುಮಾರ್ ಹತ್ಯೆಗೆ ಸುಪಾರಿ​ ಆರೋಪ; RTI ಕಾರ್ಯಕರ್ತ ರವಿ ಅರೆಸ್ಟ್

ಬೆಂಗಳೂರು: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹತ್ಯೆಗೆ ಸುಪಾರಿ ನೀಡಿದ್ದ ಎನ್ನಲಾಗಿರುವ ​ಆರ್ ಟಿಐ ರವಿಯನ್ನು ಬೆಂಗಳೂರಿನ ಜಾಲಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ಬಳಿಕ ನಾಪತ್ತೆಯಾಗಿದ್ದ ರವಿಗಾಗಿ ಬರೋಬ್ಬರಿ 40 ದಿನಗಳ ಕಾಲ ಪೊಲೀಸರು ಹುಡುಕಾಟ ನಡೆಸಿ ಕೊನೆಗೂ ವಶಕ್ಕೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಕಾಡಿನಲ್ಲಿ ಅಡಗಿದ್ದ ರವಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಮೇಲೆ ದುಷ್ಕರ್ಮಿಗಳಿಂದ ಕೊಲೆಗೆ ಯತ್ನ

ಇನ್ನು ಈ ಪ್ರಕರಣ ಸಂಬಂಧ ಐವರು ಆರೋಪಿಗಳನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ಕಳೆದ ಜುಲೈ 29 ರ ರಾತ್ರಿ ಕಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಮನೆ ಬಳಿಯೇ ಆರೋಪಿಗಳು ಹತ್ಯೆ ಮಾಡಲು ಪ್ರಯತ್ನಿಸಿದ್ರು.

ಇದನ್ನೂ ಓದಿ: ಕ್ಯಾಮ್ಸ್​ ಶಶಿಕುಮಾರ್​ ಮೇಲೆ ಅಟ್ಯಾಕ್: ಐವರ ಬಂಧನ; 6 ತಿಂಗಳ ಹಿಂದೆಯೇ ನಡೆದಿತ್ತು ಕೊಲೆಗೆ ಸ್ಕೆಚ್..?

Source: newsfirstlive.com Source link