ಹೀರಣ್ಯಕೇಶಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ – ಆತಂಕದಲ್ಲಿ ನದಿ ತೀರದ ಜನ

ಚಿಕ್ಕೋಡಿ: ಹೀರಣ್ಯಕೇಶಿ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ನದಿ ತೀರದಲ್ಲಿರುವ ಜನರಲ್ಲಿ ಆತಂಕ ಹೆಚ್ಚಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದ ಬಳಿ ಹಿರಣ್ಯಕೇಶಿ ನದಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ: ನಟ ಅಕ್ಷಯ್​ ಕುಮಾರ್​ಗೆ ಮಾತೃವಿಯೋಗ

ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾದ ನಂತರ ಮೊಸಳೆ ಕಾಣಿಸಿಕೊಂಡಿದ್ದು, ಈ ಪರಿಣಾಮ ನದಿ ದಡದಲ್ಲಿನ ಹೊಲಗದ್ದೆಯ ಜನರಿಗೆ ಭಯ ಎದುರಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿದು ನಮ್ಮ ಆತಂಕ ದೂರ ಮಾಡಬೇಕೆಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಪೊಲೀಸ್ ಜೇಬಿನಲ್ಲಿದ್ದ 4 ಲಕ್ಷ ಮೌಲ್ಯದ ಚಿನ್ನದ ಬಳೆಗಳು ಕಳವು

ಮೊಸಳೆ ಸೆರೆ ಹಿಡಿಯುವರೆಗೂ ಗ್ರಾಮಸ್ಥರು ನದಿಗೆ ಇಳಿಯದಂತೆ ಗೋಟುರ ಗ್ರಾಮದಲ್ಲಿ ಧ್ವನಿವರ್ಧಕ ಬಳಸಿ ಎಚ್ಚರಿಕೆ ನೀಡಲಾಗುತ್ತಿದೆ.

Source: publictv.in Source link