ಭಾರತಕ್ಕಿಂತಲೂ ಪಾಕಿಸ್ತಾನದಲ್ಲಿ ಪೆಟ್ರೋಲ್​​ ಬೆಲೆ ಕಡಿಮೆ- ಮಾಜಿ ಸಚಿವ ಕೃಷ್ಣಭೈರೇಗೌಡ

ಭಾರತಕ್ಕಿಂತಲೂ ಪಾಕಿಸ್ತಾನದಲ್ಲಿ ಪೆಟ್ರೋಲ್​​ ಬೆಲೆ ಕಡಿಮೆ- ಮಾಜಿ ಸಚಿವ ಕೃಷ್ಣಭೈರೇಗೌಡ

ಬೆಂಗಳೂರು: ಕಾಂಗ್ರೆಸ್​​ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್​​ ಬೆಲೆ 60 ರೂಪಾಯಿ ಇದ್ದಾಗ ದೇಶ ಹಾಳಾಗೋಯ್ತು ಎಂದ ಬಿಜೆಪಿಯೀಗ 105 ರೂಪಾಯಿ ಆದರೂ ಬಾಯಿ ಬಿಚ್ಚುತ್ತಿಲ್ಲ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ. ಈ ಸಂಬಂಧ ಮಾತಾಡಿದ ಕೃಷ್ಣಭೈರೇಗೌಡ, ನಮ್ಮ ಸರ್ಕಾರದಲ್ಲಿ ಪೆಟ್ರೋಲ್​​ ಬೆಲೆ 60 ರೂಪಾಯಿ ಇತ್ತು. ಆಗ ಬಿಜೆಪಿ ದೇಶಾದ್ಯಂತ ಪ್ರತಿಭಟಿಸಿ ವಿರೋಧ ಮಾಡಿತ್ತು. ಈಗ ಪೆಟ್ರೋಲ್​​ ಬೆಲೆ 105ಕ್ಕೇರಿದೆ, ಇನ್ನೂ ಯಾಕೆ ವಿರೋಧ ಮಾಡಿಲ್ಲ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಪೆಟ್ರೋಲ್​​ ದರ 100 ರೂಪಾಯಿ ಇಂದ 105 ರೂಪಾಯಿ ಆಗಿದೆ. ಹೀಗಿರುವಾಗ ಬಿಜೆಪಿ ಮಾತ್ರ ತುಟಿ ಬಿಚ್ಚುತ್ತಿಲ್ಲ, ಬದಲಿಗೆ ಸುಳ್ಳು ಹೇಳಿ ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಇಷ್ಟೊಂದು ಸುಳ್ಳು ಯಾಕೆ ಹೇಳುತ್ತಾರೆ ಎಂದು ಗೊತ್ತಿಲ್ಲ. ಪೆಟ್ರೋಲ್​​ ಬಾಂಡ್​​ ವಿಚಾರವಾಗಿ ಸಾಲ ತೀರಿಸಲಾಗಿದೆ ಎಂದರು. ಹತ್ತು ಸಾವಿರ ಕೋಟಿ ಸಾಲ ತೀರಿಸೋಕೆ 4 ಲಕ್ಷ ಕೋಟಿ ರೂಪಾಯಿ ಟ್ಯಾಕ್ಸ್​​ ವಸೂಲಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಭಾರತಕ್ಕಿಂತಲೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಯಾಕೆ ಪೆಟ್ರೋಲ್​​ ಕಡಿಮೆ ಆಗಿದೆ ಎಂದರು.

ಇದನ್ನೂ ಓದಿ: ‘ನಾನು ಎರಡು ಬಾರಿ ಡ್ರಗ್ಸ್​ ತೆಗೆದುಕೊಂಡಿದ್ದೇನೆ, ಆದರೆ ಅನುಶ್ರೀ..’

Source: newsfirstlive.com Source link