ಚಳಿಗಾಲದ ಅಧಿವೇಶನ ಬೆಳಗಾವಿದಲ್ಲಿ ನಡೆಯುತ್ತದೆ: ಹೊರಟ್ಟಿ

ಧಾರವಾಡ: ಚಳಿಗಾಲದ ಅಧಿವೇಶನ ಬೆಳಗಾವಿದಲ್ಲಿ ನಡೆಯುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸಿಎಂ ಇದ್ದಾಗಲೂ ನಾನು ಬೆಳಗಾವಿ ಅಧಿವೇಶನದ ಬಗ್ಗೆ ಪತ್ರ ಬರೆದಿದ್ದೆ, ತೀರ್ಮಾನ ಮಾಡುವಂತೆ ಒತ್ತಾಯ ಮಾಡಿದ್ದೆ. ಆದರೆ ಒಟ್ಟು 900 ಅಧಿಕಾರಿಗಳು, ಶಾಸಕರು ಸೇರಿ ಬಹಳ ಜನ ಆಗುತ್ತಾರೆ. ಈಗ ಮಳೆಗಾಲ ಇದೆ, ಕೋವಿಡ್ ಕೂಡ ಇದೆ ಎಂದು ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸಿದರು ಎಂದರು.

ಈ ಬಾರಿ ಸಿಎಂ ನಮ್ಮ ಕಡೆಯವರಿದ್ದಾರೆ, ಸಭಾಪತಿ ಸಹ ನಮ್ಮ ಕಡೆಯವರು. ನವೆಂಬರ್, ಡಿಸೆಂಬರ್ ನಲ್ಲಿ ಸಂಪೂರ್ಣ ಬೆಳಗಾವಿಯಲ್ಲೇ ಅಧಿವೇಶನ ಆಗುತ್ತದೆ. ಬೆಳಗಾವಿಯಲ್ಲಿ ಅಧಿವೇಶನ ಮಾಡಿಯೇ ತಿರುತ್ತೇವೆ ಎಂದು ಸಭಾಪತಿ ಹೊರಟ್ಟಿ ಹೇಳಿದರು. ಇದನ್ನೂ ಓದಿ: ನಟ ಅಕ್ಷಯ್​ ಕುಮಾರ್​ಗೆ ಮಾತೃವಿಯೋಗ

ಈಗಾಗಲೇ ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಸಹ ಮಾಡಿದ್ದಾರೆ, 9 ಕಚೇರಿ ಸ್ಥಳಾಂತರ ಮಾಡಲು ನಾನು ಕೇಳಿದ್ದೆ. ಅದರಲ್ಲಿ ಈಗ ಮೂರು ಕಚೇರಿ ಸ್ಥಳಾಂತರ ಆಗಿವೆ ಎಂದರು.

Source: publictv.in Source link