ಕೋರಮಂಗಲ ಅಪಘಾತ ಕೇಸ್: ಅಚ್ಚರಿಗೆ ಕಾರಣವಾಯ್ತು ಅಂದು ನಡೆದ ಎರಡು ವಿಚಿತ್ರ ಘಟನೆಗಳು..!

ಕೋರಮಂಗಲ ಅಪಘಾತ ಕೇಸ್: ಅಚ್ಚರಿಗೆ ಕಾರಣವಾಯ್ತು ಅಂದು ನಡೆದ ಎರಡು ವಿಚಿತ್ರ ಘಟನೆಗಳು..!

ಬೆಂಗಳೂರು: ಸಿಲಿಕಾನ್​ ಸಿಟಿಯನ್ನ ಬೆಚ್ಚಿ ಬೀಳಿಸಿದ್ದ ಭೀಕರ ಆಡಿ ಕಾರು ಅಪಘಾತ ನಡೆದು 7 ದಿನಗಳೇ ಕಳೆದ್ರೂ ನಿಗೂಢತೆ ಮಾತ್ರ ಹಾಗೇ ಇದೆ. ಆದರೆ ಆ ದಿನ ನಡೆದ ಎರಡು ಅಚ್ಚರಿ ಸಂಗತಿಗಳು ಕೂತುಹಲಕ್ಕೆ ಎಡೆ ಮಾಡಿವೆ.

ಹೌದು ಕಳೆದ ಆಗಸ್ಟ್​ 31 ರಂದು ಕೋರಮಂಗಲದಲ್ಲಿ ನಡೆದ ಈ ಘಟನೆಯಲ್ಲಿ 7 ಜನ ಸಾವನ್ನಪ್ಪಿದ್ದರು, ಆದ್ರೆ ಆ ದಿನ ನಡೆದ  ಎರಡು ಅಚ್ಚರಿ ಸಂಗತಿಗಳು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಮೊದಲನೆಯದಾಗಿ ಅಪಘಾತ ಸ್ಥಳದಲ್ಲೇ ಪ್ರತಿನಿತ್ಯ ಮಲಗುತ್ತಿದ್ದ ವ್ಯಕ್ತಿ ಅಪಘಾತ ನಡೆದ ದಿನ ಮಾತ್ರ ಆ ಸ್ಥಳದಲ್ಲಿ ಇರಲಿಲ್ಲ, ಆತ  ಅಂದು ಆ ಸ್ಥಳದಲ್ಲಿ ಮಲಗದೇ ಇದ್ದರಿಂದ ಆತನ ಜೀವ ಉಳಿದಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಕಾರು ಅಪಘಾತ ನಡೆದ ಸ್ಥಳದಲ್ಲಿಯೇ ಆಂಜನೇಯ ಸ್ವಾಮಿ ದೇಗುಲವಿತ್ತು. ಆದ್ರೆ ಅಪಘಾತದಲ್ಲಿ ಆಂಜನೇಯನ ವಿಗ್ರಹಕ್ಕೆ ಸಣ್ಣ ಪೆಟ್ಟು ಕೂಡ ಬೀಳದೆ ಆಂಜನೇಯನ ವಿಗ್ರಹ ಪಾರಾಗಿರೋದು, ಸ್ಥಳೀಯರು ಅಚ್ಚರಿ ಪಡಲು ಕಾರಣವಾಗಿದೆ.

ಇದನ್ನೂ ಓದಿ: ಮಧ್ಯರಾತ್ರಿ ಬೆಂಗಳೂರಲ್ಲಿ ಭೀಕರ ಆ್ಯಕ್ಸಿಡೆಂಟ್.. 7 ಮಂದಿ ಸಾವು

Source: newsfirstlive.com Source link