ಸಿಲಿಕಾನ್​ ಸಿಟಿಗೂ ನಿಫಾ ಆತಂಕ; ಬಿಬಿಎಂಪಿ ಸಿದ್ಧತೆ ಹೇಗಿದೆ..?

ಸಿಲಿಕಾನ್​ ಸಿಟಿಗೂ ನಿಫಾ ಆತಂಕ; ಬಿಬಿಎಂಪಿ ಸಿದ್ಧತೆ ಹೇಗಿದೆ..?

ಬೆಂಗಳೂರು: ಕೇರಳ ಬೆನ್ನಲ್ಲೇ ಸಿಲಿಕಾನ್​ ಸಿಟಿಗೂ ನಿಫಾ ವೈರಸ್ ಆತಂಕ ಎದುರಾಗಿದ್ದು, ಪ್ರತ್ಯೇಕ ಮುನ್ನೆಚ್ಚರಿಕಾ ಕ್ರಮಗಳ ಜಾರಿಗೆ ಬಿಬಿಎಂಪಿ ತಯಾರಿ ನಡೆಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಕೇರಳದಲ್ಲಿ ನಿಫಾ ಕಂಟಕ ಬೆನ್ನಲ್ಲೇ ಅಲರ್ಟ್ ಆದ ಪಾಲಿಕೆ ನಗರವ್ಯಾಪಿ ಕಟ್ಟೆಚ್ಚರ ವಹಿಸಲು ಮುಂದಾಗಿದೆ. ಕೇರಳದಲ್ಲಿ ಅಬ್ಬರಿಸ್ತಿರೊ ಮಾರಕ ನಿಫಾ ವೈರಸ್​ ರಾಜ್ಯಕ್ಕೂ ಕಾಲಿಡುವ ಭೀತಿಯಿಂದ ಕೇರಳ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿ ಜಿಲ್ಲೆಗಳಂತೆ ಬೆಂಗಳೂರಲ್ಲೂ ನಿಫಾ ಸೋಂಕು ತಡೆಗೆ  ಪಾಲಿಕೆ ಹದ್ದಿನ ಕಣ್ಣು ಇಟ್ಟಿದೆ.

ಕೇರಳದಿಂದ ಬೆಂಗಳೂರಿಗೆ ಬರುವ ಹೆಚ್ಚಿನ ಪ್ರಯಾಣಿಕರೇ ನಿಫಾ ಕ್ಯಾರಿಯರ್ಸ್ ಎನ್ನಲಾಗ್ತಿದೆ. ಕೇರಳ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ಬಿಬಿಎಂಪಿ  ಸೂಚನೆ ನೀಡಿದೆ. ಕೇರಳದಿಂದ ಬಂದವರಲ್ಲಿ ಯಾವುದೇ ರೋಗಲಕ್ಷಣ ಕಂಡುಬಂದ್ರೂ ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್​ ಮಾಡಿಸಲು ನಿರ್ಧಾರ ಮಾಡಲಾಗಿದೆ.

ಸ್ಯಾಂಪಲ್ ಪಡೆದು ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಮಾಡುವಂತೆ ಸೂಚಿಸಲಾಗಿದೆ. ಇನ್ನು ಸದ್ಯದಲ್ಲೇ ರಾಜ್ಯ ಸರ್ಕಾರದ ಜತೆ ನಿಫಾ ತಡೆಗೆ ಬಿಬಿಎಂಪಿ ಅಧಿಕಾರಿಗಳು ಸಭೆ ನಡೆಸಲಿದ್ದು, ನಿಫಾ ವೈರಸ್ ತಡೆಗೆ ಶೀಘ್ರವೇ ಹೊಸ ಮಾರ್ಗಸೂಚಿ ಬಿಡುಗಡೆಗೆ ಪಾಲಿಕೆ ತಯಾರಿ ನಡೆಸಿದೆ. ಸಿಎಂ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆ ನಿಫಾ ವೈರಸ್ ತಡೆಗೆ ಪ್ರತ್ಯೇಕ ಸಭೆ ನಡೆಸುವುದಾಗಿ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಎಣ್ಣೆಪ್ರಿಯರಿಗೆ ಹೊಡೆತ ಕೊಟ್ಟ ನಿಫಾ ವೈರಸ್​; ಮಂಗಳೂರಲ್ಲಿ 31 ಮದ್ಯದಂಗಡಿ ಬಂದ್

Source: newsfirstlive.com Source link