ಪೊಲೀಸ್​​ ಅಧಿಕಾರಿಯನ್ನೇ ಯಾಮಾರಿಸಿದ ಖತರ್ನಾಕ್​​ ಕಳ್ಳರ ಐಡಿಯಾ ಹೇಗಿತ್ತು..?

ಪೊಲೀಸ್​​ ಅಧಿಕಾರಿಯನ್ನೇ ಯಾಮಾರಿಸಿದ ಖತರ್ನಾಕ್​​ ಕಳ್ಳರ ಐಡಿಯಾ ಹೇಗಿತ್ತು..?

ಚಿಕ್ಕಮಗಳೂರು: ಇಬ್ಬರು ಖತರ್ನಾಕ್​​ ಕಳ್ಳರು ಪೊಲೀಸ್​​ ಅಧಿಕಾರಿಯನ್ನೇ ಯಾಮಾರಿಸಿ ಚಿನ್ನಾಭರಣ ಎಗರಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿನ್ನದ ಅಂಗಡಿಯಲ್ಲೇ ಎಎಸ್​ಐ ರಾಮಕೃಷ್ಣಾ ಎಂಬುವರನ್ನು ಯಾಮಾರಿಸಿ ಸುಮಾರು 80 ಗ್ರಾಂ ಚಿನ್ನ ಎಗರಿಸಿದ್ದಾರೆ.

ಚಿಂತಾಮಣಿ ನಗರದ ವೈಷ್ಣವಿ ಜ್ಯೂವೆಲ್ಲರ್ಸ್ ಚಿನ್ನದ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಇನ್ನು, ಕಳ್ಳರು ಚಿನ್ನ ಎಗರಿಸಿದ ಕೃತ್ಯ ಈಗ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ‌ ಪೊಲೀಸ್ ಠಾಣೆಯ ಎಎಸ್ಐ ರಾಮಕೃಷ್ಣ ಅವರನ್ನೇ ಯಾಮಾರಿಸಿ ಈ ಕೃತ್ಯ ಎಸಗಲಾಗಿದೆ.

ಶುಭಕಾರ್ಯದ ಅಂಗವಾಗಿ 80 ಗ್ರಾಂ ಚಿನ್ನದ ಬಳೆ ಖರೀದಿಸಿ ಬಿಲ್​​ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ‘ನಾನು ಎರಡು ಬಾರಿ ಡ್ರಗ್ಸ್​ ತೆಗೆದುಕೊಂಡಿದ್ದೇನೆ, ಆದರೆ ಅನುಶ್ರೀ..’

Source: newsfirstlive.com Source link