ಅತ್ಯಾಚಾರ ಕೇಸ್​: ಸತ್ಯ ಶೋಧನೆ ವರದಿ ರೆಡಿ; ಅಧಿವೇಶನದಲ್ಲಿ ಸರ್ಕಾರದ ತರಾಟೆಗೆ ಕಾಂಗ್ರೆಸ್ ನಿರ್ಧಾರ​​

ಅತ್ಯಾಚಾರ ಕೇಸ್​: ಸತ್ಯ ಶೋಧನೆ ವರದಿ ರೆಡಿ; ಅಧಿವೇಶನದಲ್ಲಿ ಸರ್ಕಾರದ ತರಾಟೆಗೆ ಕಾಂಗ್ರೆಸ್ ನಿರ್ಧಾರ​​

ಬೆಂಗಳೂರು: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧಿಸಿ ಕಾಂಗ್ರೆಸ್ ನಾಯಕರಿಂದ ಸತ್ಯ ಶೋಧನೆ ವರದಿ ರೆಡಿಯಾಗಿದೆ. ಈ ವರದಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಗೆ ಮತ್ತೊಂದು ಪ್ರಬಲಾಸ್ತ್ರವಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಕಾಂಗ್ರೆಸ್​ ನಾಯಕ ವಿ.ಎಸ್​. ಉಗ್ರಪ್ಪ ನೇತೃತ್ವದಲ್ಲಿ ರಚನೆಯಾಗಿದ್ದ ಸತ್ಯ ಶೋಧನ ಸಮಿತಿ, ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತಂತೆ  ವರದಿ ತಯಾರಿಸಿದ್ದು ಸತ್ಯ ಶೋಧನ ಸಮಿತಿಯ ವರದಿಯ ಅಂಶಗಳು ಈ ರೀತಿ ಇವೆ.

ಸತ್ಯ ಶೋಧನ ಸಮಿತಿ ವರದಿಯಲ್ಲಿನ ಅಂಶಗಳು

  • ಸಂತ್ರಸ್ತ ಯುವತಿಯ ಹೇಳಿಕೆ ಪಡೆಯಬೇಕು.
  • ತ್ವರಿತ ತನಿಖೆಯ ನಂತರ ಚಾರ್ಜ್​ಶೀಟ್​ ಹಾಕುವುದು.
  • ಮೈಸೂರು ಸೇರಿದಂತೆ ಎಲ್ಲಾ ನಗರಗಳಲ್ಲಿ ಪೋಲಿಸ್ ಗಸ್ತು ವ್ಯವಸ್ಥೆ.
  • DC, SPಗಳಿಗೆ ಮುಂಜಾಗ್ರತೆ ವಹಿಸುವಂತೆ ಸೂಚನೆ,  ಅವರನ್ನೇ ಹೊಣೆಗಾರರನ್ನಾಗಿ ಮಾಡುವುದು.
  • ಅತ್ಯಾಚಾರ ಸಂತ್ರಸ್ತ ಯುವತಿಯ ಹೇಳಿಕೆ ಏಕೆ ಪಡೆದಿಲ್ಲ?.
  • ಮೈಸೂರಿನಲ್ಲಿ ಫೋಲೀಸರ ಗಸ್ತು ವ್ಯವಸ್ಥೆ ಯಾಕಿಲ್ಲ?.
  • ಅನೇಕ ದಿನಗಳು ಕಳೆದರೂ ಫೋರೆನ್ಸಿಕ್​ ರಿಪೋರ್ಟ್ ಪಡೆಯದಿರಲು ಕಾರಣ ಏನು?
  • ಪ್ರಕರಣ ನಡೆದ ಜಾಗ ಯಾರಿಗೆ ಸೇರಿದ್ದು?  ಅರಣ್ಯ ಇಲಾಖೆಗೂ? ಮೂಡಾಗೋ?.

ಹೀಗೆ ಹತ್ತು ಹಲವು ಅಂಶಗಳು ಹಾಗೂ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿರುವ ಕಾಂಗ್ರೆಸ್ ಸತ್ಯ ಶೋಧನ ಸಮಿತಿ, ಪ್ರಕರಣದಲ್ಲಿ ಸರ್ಕಾರದ ವೈಫಲ್ಯದ ವಿಚಾರ ಪ್ರಸ್ತಾಪ ಮಾಡಿದ್ದು, ಮುಂಬರುವ ಅಧಿವೇಶನದಲ್ಲಿ ಈ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ಸಜ್ಜಾಗಿದೆ.

ಇದನ್ನೂ ಓದಿ:ಡ್ರಗ್ಸ್​ ಪ್ರಕರಣ; ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ -ಆರಗ ಜ್ಞಾನೇಂದ್ರ

Source: newsfirstlive.com Source link