ಕಾಂಗ್ರೆಸ್​ ಶಾಸಕಾಂಗ ಸಭೆಯಿಂದ ದೂರ ಉಳಿದ ಪ್ರಮುಖ ಲಿಂಗಾಯತ ನಾಯಕರು; ಯಾಕೆ ಗೊತ್ತಾ?

ಕಾಂಗ್ರೆಸ್​ ಶಾಸಕಾಂಗ ಸಭೆಯಿಂದ ದೂರ ಉಳಿದ ಪ್ರಮುಖ ಲಿಂಗಾಯತ ನಾಯಕರು; ಯಾಕೆ ಗೊತ್ತಾ?

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ನಡೆಸಿದ್ದ ಜಾತಿ ಜನ ಗಣತಿ ವರದಿ ಬಿಡುಗಡೆಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಈ ಸಮೀಕ್ಷೆಯೂ ವೈಜ್ಞಾನಿಕವಾಗಿಲ್ಲ, ವೀರಶೈವ-ಲಿಂಗಾಯತರಿಂದ ಉಪಜಾತಿಗಳನ್ನು ಉದ್ದೇಶಪೂರ್ವಕವಾಗಿ ಬೇರ್ಪಡಿಸಲಾಗಿದೆ ಎಂಬ ಅನುಮಾನಗಳಿವೆ ಎಂದು ಮಹಾಸಭಾ ಹೇಳಿದೆ. ಈ ಬೆನ್ನಲ್ಲೇ ಮಾಜಿ ಸಚಿವ ಎಂ.ಬಿ ಪಾಟೀಲ್​​​, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್​ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಪಕ್ಷದ ಶಾಸಕಾಂಗ ಸಭೆಗೆ ಗೈರಾಗಿದ್ದಾರೆ.

ಮಂಗಳವಾರ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಗೆ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಕಾಂಗ್ರೆಸ್​ ನಾಯಕರಾದ ಈಶ್ವರ್​​ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ ಪಾಟೀಲ್​​​ ಗೈರಾಗಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಜಾತಿ ಜನ ಗಣತಿ ವರದಿ ಬಿಡುಗಡೆಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದ ಬೆನ್ನಲೇ ಈ ಮಹತ್ವದ ಬೆಳಗಣಿಗೆಗಳು ನಡೆದಿವೆ.

ಸಭೆ ಆರಂಭಕ್ಕೂ ಮುನ್ನವೇ ಮಾಜಿ ಸಚಿವ ಎಂ.ಬಿ ಪಾಟೀಲ್​​​​ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ವಿಜಯಪುರಕ್ಕೆ ಹೊರಟರು. ಶಾಮನೂರು ಶಿವಶಂಕರಪ್ಪ ಮತ್ತು ಈಶ್ವರ್​​ ಖಂಡ್ರೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮತ್ತು ಜಾತಿ ಜನ ಗಣತಿ ವರದಿ ಬಿಡುಗಡೆ ವಿಚಾರದಲ್ಲಿ ಒಂದು ನಿಲುವಿಗೆ ಬರಲಾಗದೆ ದೂರ ಉಳಿಸಿದರು.

ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

ಇದನ್ನೂ ಓದಿ: ಭ್ರಷ್ಟಚಾರ ಕೇಸಲ್ಲಿ ಸಿಕ್ಕಿಬಿದ್ದ ಅಧಿಕಾರಿ; ಎಸಿಬಿಗೆ ಮಾಹಿತಿ ನೀಡ್ತೀರಾ? ಎಂದು ಪಕ್ಕದ ಮನೆಯವ್ರ ಮೇಲೆ ಹಲ್ಲೆ

Source: newsfirstlive.com Source link