ಕಲಬುರಗಿ ಪಾಲಿಕೆ; ಮೇಯರ್​ ಸ್ಥಾನ ಬಿಟ್ಟುಕೊಟ್ಟವರಿಗೆ ಜೆಡಿಎಸ್​ ಬೆಂಬಲ

ಕಲಬುರಗಿ ಪಾಲಿಕೆ; ಮೇಯರ್​ ಸ್ಥಾನ ಬಿಟ್ಟುಕೊಟ್ಟವರಿಗೆ ಜೆಡಿಎಸ್​ ಬೆಂಬಲ

ಕಲಬುರಗಿ: ಯಾರು ನಮಗೆ ಮೇಯರ ಸ್ಥಾನ ಬಿಟ್ಟುಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಕಲಬುರಗಿ ಜೆಡಿಎಸ್ ನಾಸೀರ್​​ ಹುಸೇನ್​​​ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್​​.ಡಿ ದೇವೇಗೌಡರ ಭೇಟಿ ಬಳಿಕ ಮಾತಾಡಿದ ನಾಸೀರ್​​ ಹುಸೇನ್​​​, ಕಲಬುರಗಿ ಪಾಲಿಕೆ ಜೆಡಿಎಸ್​ ಸದಸ್ಯರು ನಮಗೆ ಮೇಯರ್​​ ಸ್ಥಾನ ನೀಡಿದವರಿಗೆ ಬೆಂಬಲ ನೀಡುತ್ತೇವೆ ಎಂದರು.

ನಮ್ಮದು ಏನು ಇಲ್ಲ. ಕಾಂಗ್ರೆಸ್​, ಬಿಜೆಪಿ ನಾಯಕರು ತೀರ್ಮಾನ ತೆಗೆದುಕೊಳ್ಳಬೇಕಷ್ಟೇ. ನಾವೆಲ್ಲರೂ ದೇವೇಗೌಡರು ಹಾಗೂ ಕುಮಾರಸ್ವಾಮಿ ಜೊತೆ ಚರ್ಚಿಸಿದ್ದೇವೆ. ನಮ್ಮ ನಿಲುವು ಏನು ಎಂಬುದನ್ನ ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.

ವರಿಷ್ಠರು ನಮ್ಮ ಅಭಿಪ್ರಾಯವನ್ನ ಆಲಿಸಿದ್ದಾರೆ. ಮೈತ್ರಿಗೆ ನಮ್ಮ ಪಕ್ಷ ಒಪ್ಪಿದೆ. ಮೊದಲ ಅವಧಿಗೆ ನಮಗೆ ಮೇಯರ್ ಸ್ಥಾನ ಕೇಳಲು ನಿರ್ಧರಿಸಿದ್ದೇವೆ ಎಂದು ನಾಸೀರ್​​ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಭಾರತಕ್ಕಿಂತಲೂ ಪಾಕಿಸ್ತಾನದಲ್ಲಿ ಪೆಟ್ರೋಲ್​​ ಬೆಲೆ ಕಡಿಮೆ- ಮಾಜಿ ಸಚಿವ ಕೃಷ್ಣಭೈರೇಗೌಡ

Source: newsfirstlive.com Source link