ರಾಜೀವ್ ಗಾಂಧಿ ನ್ಯಾಷನಲ್ ‘ಪಾರ್ಕ್’ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರು; ಪ್ರತಾಪ್​​ ಸಿಂಹ​

ರಾಜೀವ್ ಗಾಂಧಿ ನ್ಯಾಷನಲ್ ‘ಪಾರ್ಕ್’ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರು; ಪ್ರತಾಪ್​​ ಸಿಂಹ​

ಮೈಸೂರು: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಹೆಸರು ಬದಲಾವಣೆಯನ್ನು ಬಿಜೆಪಿ ಸಂಸದ ಪ್ರತಾಪ್​​ ಸಿಂಹ ಸಮರ್ಥಿಸಿಕೊಂಡಿದ್ದಾರೆ. ಈ ಸಂಬಂಧ ಮಾತಾಡಿದ ಪ್ರತಾಪ್​​ ಸಿಂಹ, ರಾಜೀವ್ ಗಾಂಧಿಗೂ ರಾಷ್ಟ್ರೀಯ ಉದ್ಯಾನವನಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.

ಸಂಬಂಧವೇ ಇಲ್ಲದವರನ್ನು ಅನೇಕ ಕೇಂದ್ರ ಹಾಗೂ ಸಂಸ್ಥೆಗಳಿಗೆ ಹೆಸರಿಡಲಾಗಿದೆ. ಹೀಗಾಗಿ ಇದನ್ನ ಬದಲಾಯಿಸಲು ಮುಂದಾಗಿದ್ದೇವೆ. ಫಿಲ್ಡ್ ಮಾರ್ಷಲ್ ಕಾರ್ಯಪ್ಪ, ‌ಭಾರತದ ಮೊದಲ ಲೆ.ಜನರಲ್. ಇವರ ಹೆಸರನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಇಡುವುದು ಸೂಕ್ತ ಎಂದರು.

ಸ್ಥಳೀಯವಾಗಿಯು ಮಾರ್ಷಲ್ ಕಾರ್ಯಪ್ಪ ಹೆಸರು ಸೂಕ್ತ. ಮಾರ್ಷಲ್ ಕಾರ್ಯಪ್ಪಗೆ ಗೌರವ ಸೂಚಿಸುವ ಭಾಗವಾಗಿ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದೇವೆ. ಕಾಂಗ್ರೆಸ್‌ನವರಂತೆ ನಾವು ನಮ್ಮ ಪಕ್ಷದವರ ಹೆಸರನ್ನ ಇಡುತ್ತಿಲ್ಲ ಎಂದು ಟಾಂಗ್​​ ಕೊಟ್ಟರು ಪ್ರತಾಪ್​​ ಸಿಂಹ.

ಇದನ್ನೂ ಓದಿ: ಕಾಂಗ್ರೆಸ್​ ಶಾಸಕಾಂಗ ಸಭೆಯಿಂದ ದೂರ ಉಳಿದ ಪ್ರಮುಖ ಲಿಂಗಾಯತ ನಾಯಕರು; ಯಾಕೆ ಗೊತ್ತಾ?

ಕಾಂಗ್ರೆಸ್ ಎಲ್ಲದಕ್ಕೂ ರಾಜೀವ್ ಗಾಂಧಿ ಹೆಸರು ಬಳಸಿತ್ತು. ನಮಗೆ ಆ ರೀತಿ ಅನಿವಾರ್ಯತೆ ಏನು ಇಲ್ಲ. ಮೈಸೂರು ವಿಮಾನ ನಿಲ್ದಾಣಕ್ಕೆ ಜಯಚಾಮರಾಜೇಂದ್ರ ಒಡೆಯರ್ ಹೆಸರು ಇಡುತ್ತಿದ್ದೇವೆ. ರೈಲ್ವೆ ನಿಲ್ದಾಣಕ್ಕು ರಾಜ ಮನೆತನದವರ ಹೆಸರು ಇಡುತ್ತಿದ್ದೇವೆ. ನಾವು ಸಕಾರಣದೊಂದಿಗೆ ಹೆಸರು ಇಡುತ್ತೇವೆ ವಿನಹ, ಯಾರನ್ನೋ ಓಲೈಸಲು ಅಲ್ಲ ಎಂದು ಹೇಳಿದರು.

Source: newsfirstlive.com Source link