ಮುಳುಗುವ ಹಡಗು ಎಂದ ಮೇಲೆ ಜೆಡಿಎಸ್​​​ ಜತೆ ಹೊಂದಾಣಿಕೆ ಯಾಕೆ?- ಬಿಜೆಪಿಗೆ ಎಚ್​.ಡಿ ರೇವಣ್ಣ ಟಾಂಗ್​​​

ಮುಳುಗುವ ಹಡಗು ಎಂದ ಮೇಲೆ ಜೆಡಿಎಸ್​​​ ಜತೆ ಹೊಂದಾಣಿಕೆ ಯಾಕೆ?- ಬಿಜೆಪಿಗೆ ಎಚ್​.ಡಿ ರೇವಣ್ಣ ಟಾಂಗ್​​​

ಹಾಸನ: ಜೆಡಿಎಸ್​​​ ಮುಳುಗುವ ಹಡಗು ಎಂದ ಮೇಲೆ ಬಿಜೆಪಿಯೊಂದಿಗೆ ಹೊಂದಾಣಿಕೆ ಯಾಕೆ? ಎಂದು ಮಾಜಿ ಸಚಿವ ಎಚ್​.ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಮಾತಾಡಿದ ಎಚ್​.ಡಿ ರೇವಣ್ಣ, ಮಾಧ್ಯದವರು ಕೇಳಿದ ಎರಡು ಮಹಾನಗರ ಪಾಲಿಕೆಗಳಲ್ಲಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದರು.

ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದು ಬೇಡ. ನಿಮ್ಮ ಸಿಎಂ‌ ಕುರ್ಚಿಗೆ ಧಕ್ಕೆ ಬರುತ್ತೆ. ಮುಖ್ಯಮಂತ್ರಿಗಳೇ ಇಂತಹ ಸಾಹಸಕ್ಕೆ‌ ಕೈ ಹಾಕಿ ನಿಮ್ಮ ಕುರ್ಚಿಗೆ ಕುತ್ತು ತಂದುಕೊಳ್ಳಬೇಡಿ ಎಂದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​​ ಸಿಂಗ್​​​ ಜೆಡಿಎಸ್​ ಮುಳುಗುವ ಹಡಗು ಎಂದಿದ್ದಾರೆ. ಹಾಗಾಗಿ ಮುಳುಗುವ ಹಡಗಿನ ಜೊತೆ ಬಿಜೆಪಿ ಹೊಂದಾಣಿಕೆ ಬೇಡ. ಇನ್ನೂ ಎರಡು ವರ್ಷ ನೀವೆ ಸಿಎಂ ಆಗಿರಿ. ಆದರೆ, ಜೆಡಿಎಸ್​ ಜತೆ ಹೊಂದಾಣಿಕೆ ಮಾಡಿಕೊಂಡು ತೊಂದರೆ ಅನುಭವಿಸಬೇಡಿ ಎಂದು ಟಾಂಗ್​​ ಕೊಟ್ಟರು.

ಇದನ್ನೂ ಓದಿ: ರಾಜೀವ್ ಗಾಂಧಿ ನ್ಯಾಷನಲ್ ‘ಪಾರ್ಕ್’ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರು; ಪ್ರತಾಪ್​​ ಸಿಂಹ​

Source: newsfirstlive.com Source link