ಪ್ರಕೃತಿ ಮಡಿಲಲ್ಲಿ ಸ್ಕ್ರಿಪ್ಟ್​ ಬರಿಯೋಕೆ ಕೂತ ರಿಯಲ್​ ಸ್ಟಾರ್​​ ಉಪ್ಪಿ; ಹೋಗಿದ್ದು ಎಲ್ಲಿಗೆ ಗೊತ್ತಾ?

ಪ್ರಕೃತಿ ಮಡಿಲಲ್ಲಿ ಸ್ಕ್ರಿಪ್ಟ್​ ಬರಿಯೋಕೆ ಕೂತ ರಿಯಲ್​ ಸ್ಟಾರ್​​ ಉಪ್ಪಿ; ಹೋಗಿದ್ದು ಎಲ್ಲಿಗೆ ಗೊತ್ತಾ?

ಲಗಾಮ್, ‘ಕಬ್ಜ  ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇರೋ ರಿಯಲ್ ಸ್ಟಾರ್ ಏಕ್ ಧಮ್ ಯಾರಿಗೂ ಹೇಳದೆ ಕೇಳದೆ ಒಂದು ಊರಿಗೆ ಹೊರಟು ಹೋಗಿದ್ದಾರೆ.. ಯಾಕೆ ಹೋಗಿದ್ದಾರೆ ಅನ್ನೋದನ್ನ ಪತ್ತೆ ಹಚ್ಚಿದಾಗ ಸಿಕ್ಕ ಉತ್ತರ ಉಪೇಂದ್ರ ಡೈರೆಕ್ಷನ್​​.. ಹೌದು ಬುದ್ಧವಂತ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ. ಸಿನಿಮಾ ಡೈರೆಕ್ಷನ್​​ಗಾಗಿ ಸ್ಕ್ರಿಪ್ಟ್ ಬರೆಯಲು ಆ ಊರಿಗೆ ಹೋಗಿದ್ದಾರೆ.. ಹಾಗಾದ್ರೆ ಯಾವ ಊರು ? ಏನ್ ಸಮಾಚಾರ..?

ಒಬ್ಬ ನಿರ್ದೇಶಕನಿಗೆ, ಕಥೆಗಾರನಿಗೆ, ಸಾಹಿತ್ಯ ಬರಹಗಾರನಿಗೆ ಹೊಸ ಹೊಸ ಕಲ್ಪನೆಗಳು ಹುಟ್ಟಿಕೊಳೋದೆ ಪ್ರಕೃತಿಯ ಮಡಿಲಿನಲ್ಲಿ. ಹಸಿರು ಜೀವಿಯ ಉಸಿರು ಎಂಬ ಗಾದೆಯಂತೆ ಪ್ರಕೃತಿಯ ಹಸಿರು ಸೃಜನಾತ್ಮಕ ಕಲೆಗೆ ಸ್ಫೂರ್ತಿ ಎನ್ನಬಹುದು.

blank

ಸಿನಿಮಾ ಲೋಕ ಸೃಷ್ಟಿಯಾದಾಗಿಂದ ಕೆಲ ಸಂಪ್ರದಾಯ ನಡೆದುಕೊಂಡು ಬಂದಿದೆ. ಸಿನಿಮಾ ಶೂಟಿಂಗ್ ಆಗೋ ಮುನ್ನ ಸ್ಕ್ರಿಪ್ಟ್ ಪ್ರಕ್ರಿಯೆ ಎರಡು ರೀತಿ ಆಗುತ್ತೆ. ಒಂದು ಪ್ರೊಡ್ಯೂಸರ್ಸ್, ಡೈರೆಕ್ಟರ್ ಮತ್ತು ಅವರ ತಂಡವರಿಗೆ ಹೋಟೆಲ್​​ನಲ್ಲಿ ರೂಮ್ ಮಾಡಿಸಿ ಸ್ಕ್ರಿಪ್ಟ್ ಬರಿಯಲು ವ್ಯವಸ್ಥೆ ಮಾಡ್ತಾರೆ. ಅದೇ ಸಿನಿಮಾ ಮಂದಿ ಹೇಳ್ತಾರಲ್ಲ ನಮ್ಮ ಪ್ರೋಡ್ಯೂಸರು ಗಾಂಧಿನಗರದಲ್ಲಿ ರೂಮ್ ಮಾಡ್ಕೊಟ್ಟಿದ್ದಾರೆ ಅಂತರಲ್ಲ ಹಂಗೆ. ಮತ್ತೊಂದು ಸ್ಕ್ರಿಪ್ಟ್ ಮಾಡಲು ಒಳ್ಳೆಯ ಮೂಡ್ ಬರೋದಕ್ಕಾಗಿ ಪ್ರಕೃತಿಯ ಮಡಿಲಿನಲ್ಲಿ ತಂಪಾದ ಗಾಳಿ ಬೆಳಕು ವಾತವಾರಣದಲ್ಲಿ ರೂಮ್ ಮಾಡಿಕೊಡ್ತಾರೆ. ಈ ಎರಡು ದಾರಿಯಲ್ಲಿ ಎರಡನೇ ದಾರಿಯನ್ನ ಅಂದ್ರೆ ಪ್ರಕೃತಿಯ ಮಡಿಲಿನಲ್ಲಿ ಸ್ಕ್ರಿಪ್ಟ್ ಕಾರ್ಯಕ್ಕೆ ಮುಂದಾಗಿದ್ದಾರೆ ಬುದ್ಧಿವಂತ ಉಪೇಂದ್ರ..

blank

ಸರ್ ಯಾವಾಗ ನೀವು ಮತ್ತೆ ಡೈರೆಕ್ಷನ್ ಮಾಡ್ತಿರಾ ಅಂತ ಕಳೆದ ಹತ್ತು ವರ್ಷದಿಂದ ಉಪ್ಪಿಗೆ ಅಭಿಮಾನಿಗಳು ಕೇಳ್ತಾನೇ ಇದ್ದಾರೆ. ಅಭಿಮಾನಿಗಳಂತೆ ಇಡೀ ದಕ್ಷಿಣ ಚಿತ್ರರಂಗವೇ ಬುದ್ಧಿವಂತನ ಡೈರೆಕ್ಷನ್ ಎದುರು ನೋಡ್ತಿದೆ. ಆದ್ರೆ ಉಪ್ಪಿ‘ ಮಾತ್ರ ಮಾಡ್ತಿನಿ, ಒಳ್ಳೆ ಸಬ್ಜೆಕ್ಟ್ ರೆಡಿಯಾಗ್ತಿದೆ, ಶೀಘ್ರದಲ್ಲೇ ಹೇಳ್ತಿನಿ’ ಅಂತ ಹೇಳುತ್ತಾ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿ ಬಿಟ್ರು. ಉಪ್ಪಿ ಅಕೌಂಟ್​ನಲ್ಲಿ ಈಗಾಗಲೇ ಮೂರ್ನಾಲ್ಕು ಸಿನಿಮಾಗಳು ರಿಲೀಸ್​​ಗೆ ಸಿದ್ಧವಾಗಿವೆ. ಕಬ್ಜ ಮತ್ತು ಲಗಾಮ್ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ.. ಸಿನಿಮಾಗಳ ನಡುವೆ ಪ್ರಜಾಕೀಯ ಪಕ್ಷದ ಸಂಘಟನೆಯೂ ಆಗುತ್ತಿದೆ. ಇಷ್ಟೆಲ್ಲ ಬ್ಯುಸಿ ಇದ್ರು ಬುದ್ಧಿವಂತ ಸೀಕ್ರೆಟ್ ಆಗಿ  ಊರು ಸೇರಿದ್ದಾರೆ ಕಾರಣ ಹೊಸ ಸಿನಿಮಾ ಸ್ಕ್ರಿಪ್ಟ್ ವರ್ಕ್​​​..

ಯಾವ ಊರಿನಲ್ಲಿ ಬುದ್ಧಿವಂತ ಕಥೆ ಬರೆಯುತ್ತಿದ್ದಾರೆ..?

ಯಾವುದೇ ಕಾರಣಕ್ಕೂ ಈ ಬಾರಿ ಮಿಸ್ ಆಗೋದಿಲ್ಲ.  ಈ ಬಾರಿ ಉಪೇಂದ್ರ ಡೈರೆಕ್ಷನ್ ಸಿನಿಮಾ ಅನೌನ್ಸ್ ಮಾಡೇ ಮಾಡ್ತಾರೆ ಅನ್ನೋದು ಉಪೇಂದ್ರ ಅವರ ಆತ್ಮೀಯ ಬಳಗದ ಕಾನ್​​​ಫಿಡೆಂಟ್ ಇನ್ಫರ್ಮೆಷನ್​​. ಈ ಬಾರಿ ಉಪೇಂದ್ರ ಅವರ ಬರ್ತ್​ಡೇ ದಿನ ಅಂದ್ರೆ ಸೆಪ್ಟೆಂಬರ್ 18ನೇ ತಾರೀಖ್ ತಮ್ಮ ಹೊಸ ಸಿನಿಮಾದ ಡೈರೆಕ್ಷನ್ ವಿಚಾರವನ್ನ ಘೋಷಣೆ ಮಾಡಲಿದ್ದಾರೆ ಉಪ್ಪಿ. ಮಲೆನಾಡು ಚಿಕ್ಕಮಗಳೂರಿನಲ್ಲಿ ಉಪೇಂದ್ರ ಕಳೆದ ಎರಡು ದಿನದಿಂದ ಸ್ಕ್ರಿಪ್ಟ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದಾರೆ.

blank

ಚಿಕ್ಕಮಗಳೂರಿನ ಹಚ್ಚ ಹಸಿರನ ಪ್ರಕೃತಿಯ ಮಡಿಲಿನಲ್ಲಿ ಸ್ಕ್ರಿಪ್ಟ್ ಬರೆಯೋ ಕೆಲಸ ಮಾಡ್ತಿದ್ದಾರೆ ಉಪ್ಪಿ.  ಕಥೆ ಬರೆಯೋದಕ್ಕೆ ಈ ರೀತಿ ಪ್ರಕೃತಿಯ ಮಡಿಲಿನ ಊರಿಗೆ ಬಂದು ಉಪೇಂದ್ರ ಉಳಿಯುತ್ತಾರೆ. ಒಳ್ಳೆ ಮೂಡ್​​ನಲ್ಲಿ ಒಳ್ಳೆಯ ವಾತಾವರಣದಲ್ಲಿ ಸ್ಕ್ರಿಪ್ಟ್ ಬರೆಯೋ ಅಭ್ಯಾಸವನ್ನ ಹಿಂದಿನಿಂದಲು ಉಪ್ಪಿ ಮಾಡಿಕೊಂಡು ಬಂದಿದ್ದಾರೆ. ಸೂಪರ್ ಸಿನಿಮಾದ ಕಥೆಯನ್ನ ತನ್ನ ಸಹಾಯಕ ನಿರ್ದೇಶಕರೊಂದಿಗೆ ಒಂದು ಲಾಂಗ್ ಜರ್ನಿ ಹೋಗಿ ಬರೆದಿದ್ರು ಉಪ್ಪಿ. ಈಗ ಮತ್ತೊಮ್ಮೆ ತನ್ನ ಅಸಿಸ್ಟೆಂಟ್ ನಿರ್ದೇಶಕರೊಂದಿಗೆ ಸ್ಕ್ರಿಪ್ಟ್ ಬರೆಯಲು ಬುದ್ಧಿವಂತ ಹೋಗಿದ್ದಾರೆ..

ಭಾರತೀಯ ಚಿತ್ರರಂಗದ ಟಾಪ್ 20 ನಿರ್ದೇಶಕರಲ್ಲೊಬ್ಬರು ಉಪೇಂದ್ರ. ಕನ್ನಡದ ಸಿನಿಮಾಗಳನ್ನ ದೇಶಿಯ ಮಟ್ಟದಲ್ಲಿ ಸೌಂಡ್ ಮಾಡುವಂತೆ ಮಾಡಿದ ನಿರ್ದೇಶಕರು ಉಪೇಂದ್ರ. ಈಗ ಉಪ್ಪಿ ಡೈರೆಕ್ಷನ್ ಮಾಡ್ತಿರೋದು ಚಿತ್ರಪ್ರೇಮಿಗಳ ಎದೆಯಲ್ಲಿ ಥ್ರಿಲ್ಲಿಂಗ್ ಬಿರುಗಾಳಿ ಎಬ್ಬಿಸಿದೆ.

Source: newsfirstlive.com Source link