ಯೆಮೆನ್​​​ನ ಮಾರಿಬ್​​ ನಗರಕ್ಕಾಗಿ ಹೋರಾಟ; 78 ಬಂಡುಕೋರರು, 18 ಸೈನಿಕರು ಹತ

ಯೆಮೆನ್​​​ನ ಮಾರಿಬ್​​ ನಗರಕ್ಕಾಗಿ ಹೋರಾಟ; 78 ಬಂಡುಕೋರರು, 18 ಸೈನಿಕರು ಹತ

ದುಬೈ: ಮಾರಿಬ್​​ ನಗರಕ್ಕಾಗಿ ನಡೆದ ಹೋರಾಟದಲ್ಲಿ ಯೆಮೆನ್​​​ ಸೈನಿಕರು 78 ಮಂದಿ ಹುತಿ ಬಂಡುಕೋರರನ್ನು ಹತ್ಯೆಗೈದಿದೆ. ಅಲ್ಲದೇ ಹುತಿ ಬಂಡುಕೋರರ ಪ್ರತಿದಾಳಿಯಲ್ಲಿ 18 ಮಂದಿ ಯೆಮೆನ್​​ ಸೈನಿಕರು ಹತರಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ನಮ್ಮ ಮತ್ತು ಹುತಿ ಬಂಡುಕೋರರ ನಡುವೆ 48 ಗಂಟೆಗಳ ಕಾಲ ಭೀಕರ ಸಂಘರ್ಷ ನಡೆಯಿತು. ಈ ಸಂಘರ್ಷದಲ್ಲಿ 78 ಮಂದಿ ಬಂಡುಕೋರರು, 18 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ ಎರಡು ಕಡೆಯವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಯೆಮೆನ್​​ ಸರ್ಕಾರಿ ಮಿಲಿಟರಿ ಅಧಿಕಾರಿ ತಿಳಿಸಿದ್ದಾರೆ.

ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ಬೆಂಬಲವಿರುವ ಯೆಮೆನ್ ಸರ್ಕಾರದ ಮೇಲೆ ಇರಾನ್ ಮಿತ್ರಪಡೆ ಹುತಿ ಬಂಡುಕೋರರು ದಾಳಿ ನಡೆಸುತ್ತಲೇ ಇದ್ದಾರೆ. ಮರೀಬ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಹುತಿ ಬಂಡುಕೋರರು ಸಾಕಷ್ಟು ಪ್ರಯತ್ನಗಳು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅಫ್ಘಾನ್​​ನಲ್ಲಿ ರಕ್ತ ಮೆತ್ತಿದ ಕೈಗೆ ಅಧಿಕಾರ -ತಾಲಿಬಾನ್ ಸರ್ಕಾರದ ಸ್ಟ್ರಕ್ಚರ್ ಹೇಗಿದೆ..?

Source: newsfirstlive.com Source link