ಸಲಾರ್​ ಶೂಟಿಂಗ್​ ಬಿಟ್ಟು ಕ್ರಿಕೆಟ್​ ಆಡಿದ ಪ್ರಶಾಂತ್​​ ನೀಲ್​​​ ಅಂಡ್​​ ಟೀಮ್​​​..!

ಸಲಾರ್​ ಶೂಟಿಂಗ್​ ಬಿಟ್ಟು ಕ್ರಿಕೆಟ್​ ಆಡಿದ ಪ್ರಶಾಂತ್​​ ನೀಲ್​​​ ಅಂಡ್​​ ಟೀಮ್​​​..!

ಆಸ್ಟ್ರೇಲಿಯಾದಲ್ಲೊಂದು ಗ್ರೌಂಡ್ ಬಿಟ್ಟು ವಿಶ್ವದಲ್ಲಿ ಯಾವುದೇ ಕ್ರಿಕೆಟ್ ಗ್ರೌಂಡ್​​ನಲ್ಲಿ ಕ್ರಿಕೆಟ್ ಆಡುವಾಗ ಮಳೆ ಬಂದ್ರೆ ಕ್ರಿಕೆಟ್ ಪಂದ್ಯ ರದ್ದಾಗುತ್ತೆ. ಆದ್ರೆ ಮಳೆ ಇರ್ಲಿ, ಬಿಸಿಲಿರಲಿ, ಮಂದ ಬೆಳಕೇ ಇರ್ಲಿ , ಪ್ರಶಾಂತ್ ನೀಲ್ ಅವರ ಕ್ರಿಕೆಟ್ ಪಂದ್ಯ ಸರಾಗವಾಗಿ ನಡೆಯುತ್ತೆ.. ಕೆಜಿಎಫ್ ಸೃಷ್ಟಿಕರ್ತ ಸಲಾರ್ ಸೆಟ್​ನಲ್ಲೂ ತಮ್ಮ ಕ್ರಿಕೆಟ್ ಟೂರ್ನಿಯನ್ನ ಮುಂದು ವರೆಸಿದ್ದಾರೆ.

blank

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹಾಗೂ ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ, ಸಲಾರ್ ಸಿನಿಮಾವನ್ನ ತನ್ನ ಹೆಗಲ ಮೇಲೇರಿಸಿಕೊಂಡು ಕೆಲಸ ಮಾಡ್ತಿರೋರು ಡೈರೆಕ್ಟರ್ ಪ್ರಶಾಂತ್ ನೀಲ್​​..

ಎರಡನೇ ಕೆಜಿಎಫ್​ನಲ್ಲಿ ಏನೇನು ಮಾಡಿದ್ದಾರೆ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಅವರನ್ನ ಹೆಂಗ್ ತೋರಿಸಿದ್ದಾರೆ ಅನ್ನೋ ಕುತೂಹಲ ಸಮಸ್ತ ಚಿತ್ರಪ್ರೇಮಿಗಳಲ್ಲಿದೆ. ಅಂದುಕೊಂಡಂಗೆ ಪ್ರೇಕ್ಷಕ ಎಕ್ಸ್​ಪೆಕ್ಟ್ ಮಾಡಿದಕ್ಕಿಂತ ಹೆಚ್ಚಾಗಿ ಏನಾದ್ರು ಮಾಡಿ ತೋರಿಸ ಬೇಕು ಅನ್ನೋ ತಲೆಬಿಸಿಯ ಜವಾಬ್ದಾರಿಯೂ ನೀಲ್ ಮೇಲಿದೆ. ಆದ್ರೆ ನರಾಚಿ ಸೃಷ್ಟಿಕರ್ತ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ್ದಾರೆ. ಮಳೆ ಬಂದ್ರು ಬಿಟ್ಟಿಲ್ಲ.!

ಮಳೆಯ ಜೊತೆಯಲ್ಲಿ ಪ್ರಶಾಂತ್ ನೀಲ್ ಕ್ರಿಕೆಟ್

ಸಲಾರ್ ಸೆಟ್​​​ನಲ್ಲಿ ಕ್ರಿಕೆಟ್ ಆಡಿದ ನೀಲ್ ಬಳಗ

blank

ಪ್ರಶಾಂತ್ ನೀಲ್ ಎಷ್ಟು ಮೌನಿಯೋ ಅಷ್ಟೇ ಖುಷ್ ಖುಷಿಯ ಮನುಷ್ಯ. ತನ್ನವರ ಜೊತೆ ಫ್ರೀ ಇದ್ದಾಗೆಲ್ಲ ಆರಾಮ್ಸೆ ಕಾಲ ಕಳೆದು ಫನ್ ಮಾಡ್ಕೊಂಡು ಇರ್ತಾರೆ. ಶೂಟಿಂಗ್ ಬಿಡುವಿದ್ದಾಗ ಕ್ರಿಕೆಟು ಆಡ್ತಾರೆ. ಕೆಜಿಎಫ್ ಸಿನಿಮಾ ಶೂಟಿಂಗ್ ಟೈಮ್​​ನಲ್ಲಿ ನೀಲ್ ತನ್ನ ಬಳಗದ ಜೊತೆ ಕ್ರಿಕೆಟ್ ಆಡಿದ್ರು. ಈಗ ಸಲಾರ್ ಸಿನಿಮಾ ಸೆಟ್​ನಲ್ಲೂ ಕ್ರಿಕೆಟ್ ಆಟವನ್ನ ಮುಂದುವರೆಸಿದ್ದಾರೆ..

ಸಿನಿಮಾ ಮೇಕಿಂಗ್ ಅನ್ನೋದು ಒಂದು ತಪಸ್ಸು ಮತ್ತು ತಲೆಬಿಸಿಯ ಕೆಲಸ. ಆದ್ರೆ ಕ್ರಿಯೇಟಿವ್ ಡಿಪಾರ್ಟ್​ಮೆಂಟ್ ನವರು ಎಷ್ಟು ಕೂಲ ಆಗಿ ಕಾಮ್ ಆಗಿ ಇರ್ತಾರೋ ಅಷ್ಟು ಅದ್ಭುತವಾಗಿ ಕಲಾವಿದರದಿಂದ ಕೆಲಸ ತೆಗಿಸಿಬಹುದು. ಈ ಥಿಯರಿ ಪ್ರಶಾಂತ್ ನೀಲ್ ಅವರಿಗೆ ಗೊತ್ತಿದೆ. ಹಂಗಾಗಿ ಆಗಾಗ ಶೂಟಿಂಗ್ ಫ್ರೀ ಟೈಮ್​ನಲ್ಲಿ ಕ್ರಿಕೆಟ್ ಆಡಿ ತಾನು ಖುಷಿ ಪಟ್ಟು ತನ್ನ ಬಳಗದವರು ಖುಷಿ ಪಡೋ ಹಂಗೆ ಮಾಡ್ತಾರೆ. ಒಟ್ಟಿನಲ್ಲಿ ಸಲಾರ್ ಸಿನಿಮಾ ಸೆಟ್​ನಲ್ಲಿ ಜೋರಾಗಿಯೇ ಪ್ರಶಾಂತ್ ನೀಲ್ ಕ್ರಿಕೆಟ್ ಆಡಿದ್ದಾರೆ ಎನ್ನಬಹುದು.

Source: newsfirstlive.com Source link