ಆಯೇಶಾನ ಮದುವೆಯಾಗಲು ತಂದೆಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದ ಧವನ್​​​​; ಮುಂದಾಗಿದ್ದೇನು?

ಆಯೇಶಾನ ಮದುವೆಯಾಗಲು ತಂದೆಯನ್ನು ಪರಿಪರಿಯಾಗಿ ಬೇಡಿಕೊಂಡಿದ್ದ ಧವನ್​​​​; ಮುಂದಾಗಿದ್ದೇನು?

ಫೇಸ್​​​​​ಬುಕ್​​​​ನಲ್ಲಿ ಪ್ರೀತಿಸಿದ ಧವನ್​-ಆಯೇಶ ಮನೆಯ ಒಪ್ಪಿಗೆ ಪಡೆದು ಮದುವೆಯಾಗೋ ನಿರ್ಧಾರವನ್ನೇನೋ ತೆಗೆದುಕೊಂಡ್ರು. ಆದರೆ ತನ್ನ ಹೆತ್ತವರನ್ನು ಮನವೊಲಿಸುವುದು ಶಿಖರ್‌ ಪಾಲಿಗೆ ಕಷ್ಟದ ಕೆಲಸವಾಗಿತ್ತು. ಪೋಷಕರನ್ನ ಧವನ್​ ಮದುವೆಗೆ ಒಪ್ಪಿಸಿದ್ದು, ಸಿನಿಮಾದಷ್ಟೇ ರೋಚಕವಾಗಿತ್ತು.

ವಿವಾಹಕ್ಕೆ ಪೋಷಕರು ಒಪ್ಪುತ್ತಾರೋ ಇಲ್ಲವೋ ಅನ್ನೋ ದುಗುಡ ಧವನ್​ ರನ್ನ ಬಿಟ್ಟು ಬಿಡದೇ ಕಾಡುತ್ತಿತ್ತು. ಇದರ ನಡುವೆಯೋ ಧೈರ್ಯ ಮಾಡಿದ್ದ ಗಬ್ಬರ್​, ಹೆತ್ತವರೊಂದಿಗೆ ಮಾತುಕತೆಯನ್ನ ನಡೆಸೇ ಬಿಟ್ಟಿದ್ರು. ಆದರೆ ಇಬ್ಬರ ಮದುವೆ ನಿರ್ಧಾರವನ್ನ ತಂದೆ ಮಹೇಂದ್ರ ಪಾಲ್​ ಧವನ್ ಸಾರಸಗಟಾಗಿಯೇ ನಿರಾಕರಿಸಿಬಿಟ್ಟಿದ್ರು. ತಂದೆಯ ಜೊತೆಗೆ ಕುಟುಂಬ ಸದಸ್ಯರು ಕೂಡ ಅತೃಪ್ತ ಭಾವ ಹೊರ ಹಾಕಿದ್ರು. ಈಗಾಗಲೇ ಆಸ್ಟ್ರೇಲಿಯಾದ ಬ್ಯುಸಿನೆಸ್​ಮನ್​ ಜೊತೆ ಆಯೇಶಾಗೆ ಮದುವೆಯಾಗಿ ಡಿವೋರ್ಸ್​ ಆಗಿದೆ. ಇಬ್ಬರು ಮಕ್ಕಳು ಕೂಡ ಇದ್ದಾರೆ. ಅದರಲ್ಲೂ ನಿನಗಿಂತ 10 ವರ್ಷ ದೊಡ್ಡವಳು.. ಹೀಗೆ ನಾನಾ ಕಾರಣ ಹೇಳಿ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಲ್ಲ ಎಂದು​ ತಂದೆ ಕಡ್ಡಿತಂಡಾದಂತೆ ಹೇಳಿದ್ರು.

ತಂದೆ ವಿರೋಧದ ನಡುವೆಯೂ ಶಿಖರ್​ಗೆ ಬೆಂಬಲ ನೀಡಿದ್ದ ತಾಯಿ.!

ಮದುವೆಗೆ ಒಪ್ಪಿಗೆ ನೀಡುವಂತೆ ಧವನ್​ ಪರಿಪರಿಯಾಗಿ ತಂದೆಯೊಂದಿಗೆ ಬೇಡಿಕೊಂಡಿದ್ರು. ಆದರೆ ನಲ್ಮೆಯ ಪ್ರೇಮಿಗಳ ವಿವಾಹಕ್ಕೆ ತಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ರು. ತಂದೆಯ ವಿರೋಧ ಹೆಚ್ಚಾದರೂ ತಾಯಿ ಸುನೈನಾ ಧವನ್, ಮಗನಿಗೆ ಬೆಂಬಲ ಸೂಚಿಸಿದ್ರು. ತಾಯಿಯ ಬೆಂಬಲ ಲಾಭ ಮಾಡಿಕೊಂಡ ಶಿಖರ್​, ತಾಯಿ ಮೂಲಕ ತಂದೆಯನ್ನ ಒಪ್ಪಿಸಲು ಹರಸಾಹಸವನ್ನೇ ಪಟ್ಟಿದ್ರು. ಕೊನೆಗೂ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ತಂದೆ, ತನ್ನ ಹೆಂಡತಿಗೆ ಮಾತಿಗೆ ಓಗೊಟ್ಟು ಮದುವೆಗೆ ಗ್ರೀನ್​​ ಸಿಗ್ನಲ್​ ನೀಡಿದ್ರು.

2009ರಲ್ಲಿ ಎಂಗೇಜ್​ಮೆಂಟ್ – 2012ರಲ್ಲಿ ಅದ್ಧೂರಿ ಮದುವೆ.!

ತಂದೆಯ ಮನವೊಲಿಸಿ ವಿವಾಹಕ್ಕೆ ಸಜ್ಜಾದ ಶಿಖರ್ ಮತ್ತು ಆಯೇಶಾ ಜೋಡಿ 2009ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ್ರು. ಆದರೆ ಮದುವೆ ನಿರ್ಧಾರ ಮಾತ್ರ ಪೋಷಕರು ಸೂಚಿನೆ ಮೇರೆಗೆ ಮುಂದೆ ಹೋಗಿತ್ತು. ನಿಶ್ಚಿತಾರ್ಥ ಮುಗಿದು ಮೂರು ವರ್ಷಗಳ ಬಳಿಕ ಮದುವೆಗೂ ಪೋಷಕರು ಒಪ್ಪಿಗೆ ಸಿಕ್ತು. ಸಿಖ್​ ಸಂಪ್ರದಾಯದಂತೆ 2012ರ ಅಕ್ಟೋಬರ್ 30ರಂದು ತುಂಬಾ ಅದ್ಧೂರಿಯಾಗಿ ಡೆಲ್ಲಿ ಶಿಖರ್​ ಆಯೇಶಾ ಜೋಡಿ ಹಸೆಮಣೆ ಏರಿದ್ರು.

ಕಂಪ್ಲೀಟ್​ ಫ್ಯಾಮಿಲಿ ಮ್ಯಾನ್​​ ಆಗಿದ್ದ ಗಬ್ಬರ್​​.!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರಂಭದಲ್ಲಿ ಎಲ್ಲವೂ ಚೆನ್ನಾಗೇ ಇತ್ತು. ಆಯೇಷಾಗೆ ಮೊದಲೇ ಇದ್ದ ಮಕ್ಕಳಾದ ಆಲಿಯಾ ಮತ್ತು ರಿಯಾಳನ್ನ ತನ್ನೊಟ್ಟಿಗೆ ಇಟ್ಟುಕೊಂಡು ಶಿಖರ್​ ಧವನ್​ ಸಹೃದಯತೆಯನ್ನ ಮೆರೆದಿದ್ರು. ಅತ್ತ ಕ್ರಿಕೆಟ್​​ನಲ್ಲೂ ಮಿಂಚುತ್ತಿದ್ದ ಧವನ್​, ತಂಡದಲ್ಲಿ ಸೆಟಲ್ ಆಗಿದ್ರು. ಮದುವೆಯಾದ ಬಳಿಕ, ಕಂಪ್ಲೀಟ್​ ಫ್ಯಾಮಿಲಿ ಮ್ಯಾನ್​ ಆಗಿದ್ದ ಧವನ್​, ಕ್ರಿಕೆಟ್​​ ಮತ್ತು ಕುಟುಂಬ ಎರಡಕ್ಕೆ ಸೀಮಿತವಾಗಿದ್ರು. ಬಿಡುವು ಸಿಕ್ಕಾಗಲೆಲ್ಲಾ, ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದ ಧವನ್​, ತಂದೆ ಎನ್ನುವುದಕ್ಕಿಂತ ಸ್ನೇಹಿತನಾಗಿದ್ದರು.

2014ರಲ್ಲಿ ಜನಿಸಿದ ಜರೋವರ್​ಗೆ ಜನ್ಮ ನೀಡಿದ ಆಯೇಶಾ​​​.!

2012ರಲ್ಲಿ ಮದುವೆಯಾದ ಧವನ್​ ಮತ್ತು ಆಯೇಶಾ ದಂಪತಿಗೆ 2014ರಲ್ಲಿ ಸಿಹಿ ಸುದ್ದಿ ಸಿಕ್ತು. ಜರೋವರ್ ಎಂಬ ಮಗನಿಗೆ ಆಯೇಶಾ ಜನ್ಮ ನೀಡಿದ್ರು. ಆಲಿಯಾ ಮತ್ತು ರಿಯಾ ಜೊತೆಗೆ ಮತ್ತೊಂದು ಮಗುವಿನ ಎಂಟ್ರಿಯಿಂದ ಕುಟುಂಬದ ಸಂತೋಷ ದುಪ್ಪಟ್ಟಾಗಿತ್ತು.
ಇಷ್ಟು ಸಂತೋಷದಿಂದ ಇದ್ದ ಶಿಖರ್​​ ಧವನ್​ ಕುಟುಂಬದಲ್ಲಿ ಅದ್ಯಾವ ಮಾರಿ ವಕ್ಕರಿಸಿತೋ ಗೊತ್ತಿಲ್ಲ. ಸುಖ ಸಂತೋಷದಿಂದ ಸಾಗಿಸುತ್ತಿದ್ದ ಇಬ್ಬರ ಬಾಳಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಎದ್ದಿತು. ತುಂಬಾನೇ ಅನೋನ್ಯವಾಗಿದ್ದ ದಂಪತಿ ಬಾಳಲ್ಲಿ ವಿಚ್ಛೇದನ ಎಂಬ ದೊಡ್ಡ ನಿರ್ಧಾರ ಯಾಕಾಗಿ ಬಂತು ಅನ್ನೋ ಪ್ರಶ್ನೆ ಈಗ ಬಹುವಾಗಿ ಚರ್ಚೆಯಾಗ್ತಿದೆ.

ಇದನ್ನೂ ಓದಿ: ಧವನ್​ ಬಾಳಿನಲ್ಲಿ ವಿಚ್ಛೇದನ ಶಾಕ್​​.. ಆಯೆಶಾ ಮುಖರ್ಜಿ ಮೊದಲ ಪತಿ ಯಾರು ಗೊತ್ತಾ?

Source: newsfirstlive.com Source link