ಸಿಎಂ ಬೇರೆ ಬೇರೆ ಕೆಲಸಗಳಿಗಾಗಿ ದೆಹಲಿಗೆ ಹೋಗ್ತಾರೆ: ಅರಗ ಜ್ಞಾನೇಂದ್ರ

– ಸರ್ಕಾರದಲ್ಲಿ ಏನೂ ವೈಮನಸ್ಸಿಲ್ಲ

ಧಾರವಾಡ: ಸಿಎಂ ಬೇರೆ ಬೇರೆ ಕೆಲಸಗಳಿಗಾಗಿ ದೆಹಲಿಗೆ ಹೋಗುತ್ತಾರೆ. ಕೆಲವು ಪೆಂಡಿಂಗ್ ಫೈಲ್ ಇರುತ್ತವೆ, ಅವನ್ನು ಮೂವ್ ಮಾಡಿಸಬೇಕಾಗುತ್ತೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇತ್ತೀಚಿನ ದಿನಗಳಲ್ಲಿ ದೆಹಲಿಗೆ ಹೋಗಿದ್ದಾರೆ, ಮೊದಲು ಯಾವಾಗಲೂ ಹೋಗಿಲ್ಲ ಎಂದರು. ಯಡಿಯೂರಪ್ಪನವರು ಹೋಗಿ ಎಷ್ಟೋ ದಿನ ಆಯ್ತು. ಸರ್ಕಾರದಲ್ಲಿ ಏನೂ ವೈಮನಸ್ಸಿಲ್ಲ, ತುಂಬಾ ಚೆನ್ನಾಗಿದೆ. ಇತ್ತೀಚೆಗೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದಾಗ ಅವರೊಂದಿಗೆ ಮಾತನಾಡಿದ್ದಾರೆ. ಅತ್ಯಂತ ಒಳ್ಳೆಯ ಸಿಎಂ, ಸಭ್ಯ ಸಿಎಂ ಎಂದಿದ್ದಾರೆ. ರಾಜ್ಯ ಅವರ ನೇತೃತ್ವದಲ್ಲಿ ಚನ್ನಾಗಿ ನಡೆಯುತ್ತಿದೆ ಎಂದು ಶಾ ಅವರೇ ಹೇಳಿದ್ದಾರೆ, ಸಿಎಂ ಅಭಿವೃದ್ಧಿ ಕೆಲಸಗಳಿಗಾಗಿ ದೆಹಲಿಗೆ ಹೋಗುತ್ತಾರೆ ಎಂದು ಗೃಹ ಮಂತ್ರಿ ಹೇಳಿದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾರನ್ನೂ ಎಲ್ಲಿಯೂ ಹೋಗಬಾರದು ಎಂದು ಹೇಳಲು ಸಾಧ್ಯವಿಲ್ಲ. ಅವರೇ ಎಚ್ಚರಿಕೆ ವಹಿಸಬೇಕು, ಪೊಲೀಸರಿಗೆ ಹೇಳಿದರೆ ಗಸ್ತು ಜಾಸ್ತಿ ಮಾಡ್ತಾರೆ. ಅಪಾಯದ ಸ್ಥಳ ಹೇಳಿದರೆ ಪೊಲೀಸ್ ಗಸ್ತು ಹೆಚ್ಚು ಮಾಡಬಹುದು. ಸದ್ಯ ಪೊಲೀಸ್ ಠಾಣೆಗೆ ಹೋಗುವ ಹಾಗೆಯೇ ಇಲ್ಲ, ತೊಂದರೆಯಾದರೆ 112 ಗೆ ಕರೆ ಮಾಡಬಹುದು ಎಂದರು.

ರಾಜ್ಯದಲ್ಲಿ ನಡೆದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣೆಯಾಗಿದೆ. ಕೊರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಏನಾದರೂ ಇದ್ದರೆ ತನಿಖೆಯಾಗುತ್ತದೆ ಎಂದು ತಿಳಿಸಿದರು.

Source: publictv.in Source link