‘ಬೆದರಿಕೆ ಕರೆ ಬರ್ತಿದೆ ಎಂದು ನಂಂಬರ್​​ ಚೇಂಜ್​​ ಮಾಡೋದು ಗಂಡಸ್ತನ ಅಲ್ಲ’- ಪ್ರಶಾಂತ್​​​ ಸಂಬರಗಿ ಹೀಗಂದಿದ್ಯಾಕೆ?

‘ಬೆದರಿಕೆ ಕರೆ ಬರ್ತಿದೆ ಎಂದು ನಂಂಬರ್​​ ಚೇಂಜ್​​ ಮಾಡೋದು ಗಂಡಸ್ತನ ಅಲ್ಲ’- ಪ್ರಶಾಂತ್​​​ ಸಂಬರಗಿ ಹೀಗಂದಿದ್ಯಾಕೆ?

ಬೆಂಗಳೂರು: ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ಕಿಶೋರ್ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ಚಾರ್ಜ್​ ಶೀಟ್​​ ಸಲ್ಲಿಕೆ ಮಾಡಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸರು ಸಲ್ಲಿಕೆ ಮಾಡಿದ ಚಾರ್ಜ್​ಶೀಟ್​ ವಿರುದ್ಧ ಕಿಡಿ ಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕೇಸ್​ನಲ್ಲಿ ಮಂಗಳೂರು ಸಿಸಿಬಿ ಅಧಿಕಾರಿಗಳ ಲೋಪದೋಷ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳು ಈ ಕೇಸ್​ನಲ್ಲಿ ಹೇಗೆ ಭಾಗಿಯಾದ್ರೂ ಎಂಬುದನ್ನು ತಿಳಿಸ್ತೇನೆ. ಈ ಕೇಸ್​ನಲ್ಲಿ ರಾಜಕೀಯ ವ್ಯಕ್ತಿಗಳು ಹೇಗೆ ಭಾಗಿಯಾದ್ರೂ, ಹೇಗೆ ಒತ್ತಡ ಹೇರಿದ್ರು ಎಂಬುದರ ಕುರಿತು ನನ್ನ ಬಳಿ ಮಾಹಿತಿ ಇದ್ದು ಸಾಕ್ಷ್ಯ ಸಮೇತ ದಾಖಲಿಸುತ್ತೇನೆ ಎಂದಿದ್ದಾರೆ.

ಇನ್ನು ಆರೋಪಿ ತರುಣ ಬಗ್ಗೆ ನನಗೆ ಈ ಹಿಂದೆಯೇ ಮಾಹಿತಿ ಇದೆ. ಆ ಕುರಿತು ಮಾತನಾಡುತ್ತೇನೆ. ಸೋಮವಾರ ಹಬ್ಬದ ನಂತರ ಈ ಕೇಸ್​ಗೆ ಹೊಸಬರನ್ನು ನೇಮಿಸಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯ ಮಾಡುತ್ತೇನೆ ಎಂದಿರುವ ಅವರು, ನಟಿಯ ಯಾವುದೇ ಹೇಳಿಕೆಗಳು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ.

ಈ ತರಹದ ಕೇಸ್​ಗಳ ವಿರುದ್ಧ ಧ್ವನಿ ಎತ್ತುವುದು,ರಾಷ್ಟ್ರೀಯ ಚಿಂತನೆ ಮಾಡುವ, ಒಬ್ಬ ರಾಷ್ಟ್ರೀಯವಾದಿ ಮಾಡುವ ಕೆಲಸ ಎಂದಿದ್ದು, ಹಾಗಾಗಿ ನಾನು ಈ ತರಹದ ಕೇಸ್​ಗಳ ವಿರುದ್ಧ ಧ್ವನಿ ಎತ್ತುತ್ತೇನೆ ಎಂದರು. ಇನ್ನು ಈ ಕೇಸ್​ಗಳ ಹಿಂದೆ ವ್ಯವಸ್ಥಿತ ಜಾಲವಿದ್ದು, ನನಗೆ ಬಿಹಾರ, ಉತ್ತರ ಪ್ರದೇಶಗಳಿಂದ ಬೆದರಿಕೆ ಕರೆಗಳು ಬರ್ತಿವೆ, ಅದು ಗಂಡಸ್ಥನ ಅಲ್ಲ,  ಕೆಲವೊಬ್ಬರು ನನಗೆ ಫೋನ್​ ನಂಬರ್​ ಚೇಂಜ್​ ಮಾಡು ಅಂತ ಹೇಳಿದ್ರೂ, ನಾನ್ಯಾಕೆ ಮಾಡಲಿ ಎಂದಿದ್ದಾರೆ.

 

Source: newsfirstlive.com Source link