ಬೆಂಗಳೂರು: ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಭಾಗಿಯಾಗಿರುವ ಆರೋಪದ ಕುರಿತು ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಸಂಪೂರ್ಣ ಹಳ್ಳ ಹಿಡಿದಿದೆ ಎಂದಿದ್ದಾರೆ.

ಕಾನೂನಿನ ಚೌಕಟ್ಟಿನಲ್ಲಿ ವಕೀಲರು ಹೇಳಿ ಕೊಡುತ್ತಿರುವ ಸಿಹಿ ಸುಳ್ಳುಗಳನ್ನು ಕಿಶೋರ್​ ಹೇಳ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಹೇಳಿದ್ದಾರೆ. ಈ ಕೇಸ್​ನಲ್ಲಿ ಅನುಶ್ರೀಗೆ ಮೊದಲ ಸ್ನೇಹಿತನೇ ಕಿಶೋರ್​, ತರುಣ್​ ಹೇಳಿಕೆ ಕೊಟ್ಟರೆ ಅನುಶ್ರೀಗೆ ತೊಂದರೆಯಾಗುತ್ತೆ, ಪ್ರಕರಣದಲ್ಲಿ ಅನುಶ್ರೀ ಪ್ರಭಾವಿಯಾಗಿದ್ದಾರೆಯೇ ಹೊರತು, ಕಿಶೋರ್​ ಅಲ್ಲ ಎಂದರು.

ಇದನ್ನೂ ಓದಿ:ಡ್ರಗ್​​ ಕೇಸ್​: ಌಂಕರ್ ಅನುಶ್ರೀಗೆ ಮುಳವಾಗುತ್ತಾ ಈ ಪವರ್​ಪುಲ್​ ಸೆಕ್ಷನ್​ಗಳು?

ಇನ್ನು ನಟಿ ಡ್ರಗ್​ ಸೇವಿಸಿ ಪಾರ್ಟಿಯಲ್ಲಿ ಭಾಗಿಯಾಗಿರುವುದರ ಕುರಿತು ನಮ್ಮಲ್ಲಿ ಫೋಟೋ ಸಾಕ್ಷ್ಯಗಳಿದ್ದು, ಮಂದಿನ ದಿನಗಳಲ್ಲಿ 28 ಸೆಕೆಂಡ್​ಗಳ ಆಡಿಯೋ ಬಾಂಬ್​ನ್ನು ಬಿಡುಗಡೆಗೊಳಿಸಲಿದ್ದೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

Source: newsfirstlive.com Source link