ರೈತರಿಗೆ ಸಿಹಿಸುದ್ದಿ ನೀಡಿದ ಮೋದಿ ಸರ್ಕಾರ; ಗೋಧಿ, ಸಾಸಿವೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ರೈತರಿಗೆ ಸಿಹಿಸುದ್ದಿ ನೀಡಿದ ಮೋದಿ ಸರ್ಕಾರ; ಗೋಧಿ, ಸಾಸಿವೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ಗೋಧಿ ಮತ್ತು ಸಾಸಿವೆ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನ ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಗೋಧಿ 40 ರೂಪಾಯಿಯಷ್ಟು ಹೆಚ್ಚಳ ಮಾಡಿದ್ದು, ಕ್ವಿಂಟಾಲ್‌ಗೆ 2,015 ನಿಗದಿಪಡಿಸಿದೆ. ಸಾಸಿವೆ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು 400 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಕ್ವಿಂಟಲ್‌ಗೆ 5,050 ರೂಪಾಯಿ ನಿಗದಿಪಡಿಸಲಾಗಿದೆ.

ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಮುಂಗಾರು ಮತ್ತು ಹಿಂಗಾರು ಅವಧಿಯ 23 ಬೆಳೆಗಳಿಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಅಕ್ಟೋಬರ್‌ನಿಂದ ಹಿಂಗಾರು ಬೆಳೆ ಅವಧಿ ಆರಂಭವಾಗಲಿದ್ದು, ಗೋಧಿ ಹಾಗೂ ಸಾಸಿವೆ ಪ್ರಮುಖ ಹಿಂಗಾರು ಬೆಳೆಗಳಾಗಿವೆ.

ಇದನ್ನೂ ಓದಿ: 2022ರಲ್ಲಿ ಉತ್ತರಖಂಡ್ ಎಲೆಕ್ಷನ್; ರಾಜ್ಯದ ಪ್ರಹ್ಲಾದ್ ಜೋಶಿ ಬಿಜೆಪಿಯ ಸಾರಥಿ..!

Source: newsfirstlive.com Source link