ಟಿ-20 ವಿಶ್ವಕಪ್: ಟೀಮ್​​ ಇಂಡಿಯಾಗೆ ಭಾರತ ತಂಡದ ಮಾಜಿ ನಾಯಕ ಧೋನಿ ಮೆಂಟರ್​​​​ ಆಗಿ ಆಯ್ಕೆ​

ಟಿ-20 ವಿಶ್ವಕಪ್: ಟೀಮ್​​ ಇಂಡಿಯಾಗೆ ಭಾರತ ತಂಡದ ಮಾಜಿ ನಾಯಕ ಧೋನಿ ಮೆಂಟರ್​​​​ ಆಗಿ ಆಯ್ಕೆ​

ಮುಂಬರುವ ಟಿ-20 ವಿಶ್ವಕಪ್​ಗೆ ಬಿಸಿಸಿಐ ಆಟಗಾರರ ಹೆಸರನ್ನು ಘೋಷಿಸಿದೆ. ಈ ತಂಡಕ್ಕೆ ಭಾರತ ತಂಡದ ಮಾಜಿ ನಾಯಕ ಎಂ.ಎಸ್.​ಧೋನಿ ಅವರನ್ನು ಮೆಂಟರ್​ ಆಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ಬಿಸಿಸಿಐನ ಕಾರ್ಯದರ್ಶಿ ಜೈಶಾ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗುತ್ತಿರುವ ಕಾರಣದಿಂದಾಗಿ ಟೀಮ್ ಇಂಡಿಯಾದ ಸದಸ್ಯರ ತಂಡವನ್ನು ಬಿಸಿಸಿಐ ಇಂದೇ ಘೋಷಣೆ ಮಾಡಿದೆ. ಬಿಸಿಸಿಐ ಆಯೋಜನೆ ಮಾಡುತ್ತಿರುವ ಈ ಬಾರಿಯ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಬೇಕಾಗಿತ್ತು. ಆದರೆ ಭಾರತದಲ್ಲಿ ಕೊರೊನಾ ವೈರಸ್‌ ಆತಂಕ ಇರುವ ಕಾರಣ ಯುಎಇ ಹಾಗೂ ಒಮಾನ್‌ಗೆ ವಿಶ್ವಕಪ್‌ ಪಂದ್ಯಗಳನ್ನು ಸ್ಥಾಳಾಂತರ ಮಾಡಲಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಈ ಟಿ20 ವಿಶ್ವಕಪ್‌ನ ಪಂದ್ಯಗಳು ನಡೆಯಲಿದೆ.

ಇದನ್ನೂ ಓದಿ: BREAKING: ಟಿ20 ವಿಶ್ವಕಪ್‌; ಭಾರತ ತಂಡ ಘೋಷಿಸಿದ ಬಿಸಿಸಿಐ, ಯಾರಿಗೆಲ್ಲಾ ಅವಕಾಶ?

Source: newsfirstlive.com Source link