ಡಿಫರೆಂಟ್​​​ ಲೈನ್ಸ್​ ಮತ್ತು ಮ್ಯೂಸಿಕ್​​ನಿಂದ ಸೌಂಡ್​​ ಮಾಡುತ್ತಿರುವ ‘ಪುಕ್ಸಟ್ಟೆ ಲೈಫು ಪುರ್​​​ಸೊತ್ತೇ ಇಲ್ಲ’ ಸಾಂಗ್​​..

ಡಿಫರೆಂಟ್​​​ ಲೈನ್ಸ್​ ಮತ್ತು ಮ್ಯೂಸಿಕ್​​ನಿಂದ ಸೌಂಡ್​​ ಮಾಡುತ್ತಿರುವ ‘ಪುಕ್ಸಟ್ಟೆ ಲೈಫು ಪುರ್​​​ಸೊತ್ತೇ ಇಲ್ಲ’ ಸಾಂಗ್​​..

ಪುಕ್ಸಟ್ಟೆ ಲೈಫು ಪುರ್​​ಸೊತ್ತೇ ಇಲ್ಲ.. ಇದು ಸಂಚಾರಿ ವಿಜಯ್ , ಅಚ್ಯುತ್ ಕುಮಾರ್, ರಂಗಾಯಣ ರಘು ನಟನೆಯ ಸಿನಿಮಾ.. ರಂಗಭೂಮಿಯ ಘಟ್ಟಿ-ಜಟ್ಟಿ ಕಲಾವಿದರ ಸಮಾಗಮವೇ ಈ ಚಿತ್ರದಲ್ಲಾಗಿದೆ. ಅರವಿಂದ್ ಕುಪ್ಳೀಕರ್ ನಿರ್ದೇಶನದಲ್ಲಿ ಪುಕ್ಸಟ್ಟೆ ಲೈಫು ಪುರ್​ಸೊತ್ತೇ ಇಲ್ಲ ಸಿನಿಮಾ ಮೂಡಿಬಂದಿದೆ..

ಟ್ರೈಲರ್ ಬಿಟ್ಟು ಸದ್ದು ಮಾಡಿದ್ದ ಪುಕ್ಸಟ್ಟೆ ಲೈಫು ಪುರ್​ಸೋತ್ತೆ ಇಲ್ಲ ಸಿನಿಮಾ ತಂಡ ಈಗ ಟೈಟಲ್ ಟ್ರ್ಯಾಕ್ ಒಂದನ್ನ ಹೊರ ಬಿಟ್ಟು ಕೇಳುಗರು ಮೆಚ್ಚುಗೆಯನ್ನ ಸಂಪಾದಿಸುತ್ತಿದೆ.. ರಘು ದೀಕ್ಷಿತ್ ಅವರ ಸಹೋದರ ವಸು ದಿಕ್ಷಿತ್ ಸಂಗೀತ ಸಂಯೋಜನೆಯಲ್ಲಿ ಪುಕ್ಸಟ್ಟೆ ಲೈಫು ಸಿನಿಮಾದ ಹಾಡುಗಳು ಮೂಡಿಬರುತ್ತಿವೆ. ಪ್ರಾಯೋಜಿತವಾಗಿ ಮೊದಲನೇ ಹಾಡು ಬಿಡುಗಡೆಯಾಗಿದ್ದು ಡಿಫರೆಂಟ್ ಲೈನ್ಸ್ ಆಂಡ್ ಟ್ಯೂನ್​ನಿಂದ ಮೇಳೈಸುತ್ತಿದೆ.

ಇದನ್ನೂ ಓದಿ: ಸಲಾರ್​ ಶೂಟಿಂಗ್​ ಬಿಟ್ಟು ಕ್ರಿಕೆಟ್​ ಆಡಿದ ಪ್ರಶಾಂತ್​​ ನೀಲ್​​​ ಅಂಡ್​​ ಟೀಮ್​​​..!

Source: newsfirstlive.com Source link