ರಾಮ್​ ಚರಣ್​​ ಹೊಸ ಸಿನಿಮಾಗೆ ಮುಹೂರ್ತ; ಯಾಱರು ಭಾಗಿಯಾಗಿದ್ರು ಗೊತ್ತಾ?

ರಾಮ್​ ಚರಣ್​​ ಹೊಸ ಸಿನಿಮಾಗೆ ಮುಹೂರ್ತ; ಯಾಱರು ಭಾಗಿಯಾಗಿದ್ರು ಗೊತ್ತಾ?

ಇಂಡಿಯನ್ ಸಿನಿಮಾ ರಂಗದ ಫೇಮಸ್ ಸ್ಟಾರ್​​​​ ಡೈರೆಕ್ಟರ್ ಎಸ್​.ಶಂಕರ್ ನಿರ್ದೇಶಿಸಲಿರುವ ಮೆಗಾ ಪವರ್ ಸ್ಟಾರ್​​​ ರಾಮ್ ಚರಣ್ ನಟಿಸಲಿರುವ ‘‘ಆರ್​.ಸಿ-15’’ದ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ಎಸ್​​​​.ಶಂಕರ್-ರಾಮ್ ಚರಣ್ ಕನಸಿಗೆ ಎಸ್​.ಎಸ್​.ರಾಜಮೌಳಿ ಹಾಗೂ ರಣವೀರ್ ಸಿಂಗ್ ಸಾಥ್ ಕೊಟ್ಟಿದ್ದಾರೆ..

blank
ಒಂದು ಸಿನಿಮಾ ಮುಹೂರ್ತ ಇಬ್ಬರು ದೇಶ ಕಂಡ ಸ್ಟಾರ್ ಸಿನಿಮಾ ಮಾಂತ್ರಿಕ ಡೈರೆಕ್ಟರ್ಸ್​​​​​​​​​.. ಒಂದು ಸಿನಿಮಾ ಇಬ್ಬರು ಸೌಥ್ ಮತ್ತು ನಾರ್ಥ್​​ನ ಸ್ಟಾರ್ ಹೀರೋಸ್. ಈ ರೀತಿಯ ಅಪರೂಪದ ಭೇಟಿಗೆ ವೇದಿಕೆಯಾಗಿದ್ದು ಆರ್​​.ಸಿ. 15 ಸಿನಿಮಾದ ಮುಹೂರ್ತ..

blank

‘‘ಎಂದಿರನ್’’ ಖ್ಯಾತಿಯ ನಿರ್ದೇಶಕ ಎಸ್​.ಶಂಕರ್ ನಿರ್ದೇಶಿಸಲಿರುವ ಆರ್.ಸಿ 15 ಸಿನಿಮಾದ ಮುಹೂರ್ತದಲ್ಲಿ ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್.ಎಸ್​.ರಾಜಮೌಳಿ ಮುಖ್ಯ ಅತಿಥಿಯಾಗಿ ಬಂದಿದ್ರು. ರಾಮ್ ಚರಣ್ ನಟನೆಯ ಹೊಸ ಸಿನಿಮಾಕ್ಕೆ ಶುಭ ಹಾರೈಸಲು ಬಾಲಿವುಡ್ ಲೋಕದಿಂದ ಡಿಫರೆಂಟ್ ಹೇರ್ ಸ್ಟೈಲ್​​ನಲ್ಲಿ ದೀಪಿಕಾ ಪಡುಕೋಣೆ ಅವರ ಪತಿದೇವರು ರಣವೀರ್ ಸಿಂಗ್ ಕೂಡ ಬಂದಿದ್ರು.. ಒಟ್ಟಿನಲ್ಲಿ ಸೌಥ್ ಮತ್ತು ನಾರ್ಥ್ ಸ್ಟಾರ್ ಕಲಾವಿದರ ಸಮಾಗಮಕ್ಕೆ ಸಾಕ್ಷಿ ಆಗಿತ್ತು ಆರ್​.ಸಿ.15 ಸಿನಿಮಾ.

blank

ಟಾಲಿವುಡ್​​ನ ಸ್ಟಾರ್ ರಾಮ್ ಚರಣ್ ಜೊತೆ ಕಾಲಿವುಡ್​​ನ ಸ್ಟಾರ್ ಡೈರೆಕ್ಟರ್ ಎಸ್​.ಶಂಕರ್ ಸಿನಿಮಾ ಮಾಡ್ತಿದ್ದಾರೆ ಎಂದು ಕಳೆದ ಮೂರು ತಿಂಗಳಿಂದ ಸುದ್ದಿ ಸಂಭ್ರಮವಾಗುತ್ತಿದೆ. ದಿಲ್ ರಾಜು ನಿರ್ಮಾಣದಲ್ಲಿ ಬರೋಬ್ಬರಿ 150 ಕೋಟಿ ಬಜೇಟ್​​ನಲ್ಲಿ ಆರ್​​.ಸಿ 15 ಸಿನಿಮಾ ಪ್ಯಾನ್​ ಇಂಡಿಯ ಲೇವಲ್​​ನಲ್ಲಿ ಮೂಡಿಬರುತ್ತಿದೆ. ರಾಮ್ ಚರಣ್​​ಗೆ ಜೋಡಿಯಾಗಿ ಕಿಯಾರ ಅಡ್ವಾಣಿ ಕಂಗೊಳಿಸಲಿದ್ದಾರೆ.

blank

ಇನ್ನು ಚಿತ್ರದ ಮಹೂರ್ತದ ಮತ್ತೊಂದು ವಿಶೇಷ ಮೆಗಾ ಸ್ಟಾರ್ ಚಿರಂಜೀವಿ. ಆರ್​.ಸಿ 15 ಸಿನಿಮಾದ ಮುಹೂರ್ತಕ್ಕೆ ಕ್ಲಾಪ್ ಮಾಡಿ ಶುಭಾಶಯಗಳನ್ನ ತಿಳಿಸಿದ್ದಾರೆ ಚಿರಂಜೀವಿ. ಚಿರು ಜೊತೆ ಎಸ್​.ಎಸ್.ರಾಜಮೌಳಿ , ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಕೂಡ ಭಾಗಿಯಾಗಿದ್ದು ಮುಹೂರ್ತಕ್ಕೆ ಮತ್ತಷ್ಟು ಮೆರುಗನ್ನ ತಂದಿದೆ.

blank

Source: newsfirstlive.com Source link