ಧವನ್​-ಆಯೇಷಾ ದಾಂಪತ್ಯಕ್ಕೆ ಬ್ರೇಕ್​.. ಇಬ್ಬರನ್ನು ಮೊದಲು ಭೇಟಿ ಮಾಡಿಸಿದ್ದು ಯಾರು ಗೊತ್ತಾ?

ಧವನ್​-ಆಯೇಷಾ ದಾಂಪತ್ಯಕ್ಕೆ ಬ್ರೇಕ್​.. ಇಬ್ಬರನ್ನು ಮೊದಲು ಭೇಟಿ ಮಾಡಿಸಿದ್ದು ಯಾರು ಗೊತ್ತಾ?

ಧವನ್​ – ಆಯೇಷಾ ವಿಚ್ಛೇದನ ಕ್ರಿಕೆಟ್​ ಲೋಕದಲ್ಲಿ, ಬಿರುಗಾಳಿ ಎಬ್ಬಿಸಿರೋದು ಸುಳ್ಳಲ್ಲ! ಅದಕ್ಕಿಂತ ಹೆಚ್ಚಾಗಿ ಆಯೇಷಾ ಮುಖರ್ಜಿ ಯಾರು.? ಆಕೆ ಎಲ್ಲಿಯವಳು.? ಇಬ್ಬರೂ ಮೊದಲು ಭೇಟಿಯಾಗಿದ್ದು ಎಲ್ಲಿ.? ಧವನ್​ ಮತ್ತು ಆಯೇಷಾ ನಡುವೆ ಪ್ರೀತಿ ಹುಟ್ಟಿದ್ದೇಗೆ.? ಹೀಗೆ ಹಲವು ಪ್ರಶ್ನೆಗಳು, ಎಲ್ಲರನ್ನೂ ಕಾಡ್ತಿವೆ.

ಶಿಖರ್​ ಧವನ್​ ಮತ್ತು ಆಯೇಷಾ ಮುಖರ್ಜಿ ವಿಚ್ಛೇದನ, ಕ್ರಿಕೆಟ್​ ಅಭಿಮಾನಿಗಳಿಗೆ ಹೃದಯವಿದ್ರಾವಕ ಸುದ್ದಿಯಾಗಿದೆ. 9​​​ ವರ್ಷಗಳಿಂದ ಅನ್ಯೋನ್ಯವಾಗಿದ್ದ ಈ ದಂಪತಿ ಡಿವೋರ್ಸ್​​ ಪಡೆಯೋದಕ್ಕೆ ಕಾರಣ ಏನು.? ದಿಢೀರ್​ ನಿರ್ಧಾರ ಯಾಕೆ ಅನ್ನೋದ್ರ ಬಗ್ಗೆ, ಎಲ್ರೂ ಗೂಗಲ್​​​ನಲ್ಲಿ ಸರ್ಚ್​ ಮಾಡ್ತಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ಕೂಲ್​​ ಆ್ಯಂಡ್​ ಕಾಮ್​ ಧವನ್​​ ಜೊತೆ ಡಿವೋರ್ಸ್​ ಪಡೆದ ಆಯೇಷಾ ಬ್ಯಾಕ್​​​​ಗ್ರೌಂಡ್ ಏನು.? ಇಬ್ಬರ ಲವ್​​ಸ್ಟೋರಿ ಹೇಗೆ ಹುಟ್ಟಿತ್ತು ಅನ್ನೋದನ್ನ ಹುಡುಕಾಟ ನಡೆಸ್ತಿದ್ದಾರೆ.

blank

ಶಿಖರ್ ಧವನ್, ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ ಆಯೇಷಾ ಮುಖರ್ಜಿ ಅವರನ್ನ ಪ್ರೀತಿಸಿ ಮದುವೆಯಾಗಿದ್ದು, ಗೊತ್ತೇ ಇದೆ. ಆದರೆ ಇವರ ಪ್ರೇಮ ಪಯಣ ತುಂಬಾ ಥ್ರಿಲ್ಲಿಂಗ್​ ಆಗಿದೆ. 2012ರಲ್ಲಿ ತನಗಿಂತ 10 ವರ್ಷ ಹಿರಿಯಳೊಂದಿಗೆ ಧವನ್​ ದಾಂಪತ್ಯ ಜೀವನ ಆರಂಭಿಸಿದ್ರು. ದಾಂಪತ್ಯ ಜೀವನದ ಆರಂಭದಲ್ಲಿ ತುಂಬಾ ಚೆನ್ನಾಗಿಯೇ ಇದ್ದ ಇಬ್ಬರ ನಡುವೆ, ಕಳೆದ ಒಂದು ವರ್ಷದಿಂದ ಬಿರುಕು ಏರ್ಪಟ್ಟಿತ್ತಂತೆ.! ಆದರೆ ಕಳೆದೊಂದು ವರ್ಷದಿಂದ ದೂರವಾಗಿದ್ದ ಧವನ್ ಜೋಡಿ, ಇದೀಗ ಡಿವೋರ್ಸ್​  ಪಡೆಯೋಕೆ ತೀರ್ಮಾನಿಸಿದ್ದಾರೆ.

ಭಾರತದ ಆಯೇಷಾ, ನೆಲೆಸಿದ್ದು ಆಸ್ಟ್ರೇಲಿಯಾದಲ್ಲಿ.!

ಆಯೇಷಾ ಮುಖರ್ಜಿ ಯಾರು? ಇದು ಸದ್ಯ ಎಲ್ಲರಿಗೂ ಕಾಡ್ತಿರುವ ದೊಡ್ಡ ಪ್ರಶ್ನೆ.! ಹೌದು.! ಆಯೇಷಾ ಮೂಲತಃ ಪಶ್ಚಿಮ ಬಂಗಾಳದವರು. ಬಂಗಾಳದಲ್ಲಿ ಜನಿಸಿದ ಆಯೇಷಾ, ತಮ್ಮ 8ನೇ ವಯಸ್ಸಿನವರೆಗೂ ಭಾರತದಲ್ಲೇ ನೆಲೆಸಿದ್ರು. ಅಪ್ಪ ಬಂಗಾಳಿಯವರಾದ್ರೆ, ತಾಯಿ ಬ್ರಿಟಿಷ್ ಮೂಲದವರು.  ಹಾಗಾಗಿ ಆಯೇಷಾ, ತಮ್ಮ 8ನೇ ವಯಸ್ಸಿನಲ್ಲಿ ಪೋಷಕರೊಂದಿಗೆ ಆಸ್ಟ್ರೇಲಿಯಾದಲ್ಲೇ ನೆಲೆಸಲು ನಿರ್ಧರಿಸಿದ್ರು. ಆಸ್ಟ್ರೇಲಿಯಾದಲ್ಲೇ ನೆಲೆಸಿ ವಿದ್ಯಾಭ್ಯಾಸ ಮುಗಿಸಿರುವ ಅಯೇಷಾ, ಆಸ್ಟ್ರೇಲಿಯಾ ಪೌರತ್ವವನ್ನೂ ಪಡೆದಿದ್ದಾರೆ.

blank

ಚಿಕ್ಕಂದಿನಿಂದಲೇ ಕಿಕ್​​​ ಬಾಕ್ಸಿಂಗ್​ ಹುಚ್ಚು ಬೆಳೆಸಿಕೊಂಡಿದ್ದ ಆಯೇಷಾ.!

ಓದಿನಲ್ಲಿ ತುಂಬಾನೇ ಬುದ್ದಿವಂತಳಾಗಿದ್ದ ಆಯೇಷಾ, ಶಿಕ್ಷಕರ ನೆಚ್ಚಿನ ವಿದ್ಯಾರ್ಥಿನಿ. ಶಿಕ್ಷಕರು ಹೇಳಿದ ಕೆಲಸವನ್ನ ಚಾಚೂ ತಪ್ಪದೆ ಮಾಡುತ್ತಿದ್ದಳು. ಜೊತೆಗೆ ಪಠ್ಯದ ಹೊರತಾಗಿ, ಕ್ರೀಡೆಗಳಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಳು. ಅದರಲ್ಲೂ ಅಯೇಷಾ ಹೆಚ್ಚಾಗಿ ಇಷ್ಟಪಡುತ್ತಿದ್ದದ್ದು ಅಂದರೆ, ಕಿಕ್​ ಬಾಕ್ಸಿಂಗ್​. ಚಿಕ್ಕಂದಿನಿಂದಲೇ ಕಿಕ್​ ಬಾಕ್ಸಿಂಗ್​​​​​ ಮೇಲೆ ಹುಚ್ಚು ಬೆಳೆಸಿಕೊಂಡಿದ್ದ ಆಯೇಷಾ, ಮೆಲ್ಬರ್ನ್​ನಲ್ಲಿ ತರಬೇತಿ ಕೂಡ ಪಡೆದಳು. ಬಳಿಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ, ಮೋಸ್ಟ್​ ಸಕ್ಸಸ್​​ಫುಲ್​​ ಬಾಕ್ಸರ್ ಅಂತ ಕೂಡ​ ಎನಿಸಿಕೊಂಡಿದ್ರು. ಹೀಗಾಗಿ ನೂರಾರು ಪ್ರಶಸ್ತಿಗಳನ್ನ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ರು.

ಆಸಿಸ್ ಬ್ಯುಸಿನೆಸ್​ಮ್ಯಾನ್​​​ನನ್ನ ಮದುವೆಯಾಗಿದ್ದ ಅಯೇಷಾ.!

ಶಿಖರ್ ಧವನ್ ಅವರನ್ನು ಮದುವೆಯಾಗುವ ಮೊದಲು ಆಯೇಷಾ ಆಸ್ಟ್ರೇಲಿಯಾದ ಉದ್ಯಮಿಯೊಬ್ಬರನ್ನ ಮದುವೆಯಾಗಿದ್ರು. 1998-1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ, ತುಂಬಾನೇ ಅನ್ಯೋನ್ಯವಾಗಿದ್ರು. ಈ ದಂಪತಿಗೆ 2000ರಲ್ಲಿ ಹುಟ್ಟಿದ ಮೊದಲ ಮಗು ಜನಿಸಿತ್ತು. ಆ ಬಳಿಕ 2005ರಲ್ಲಿ ಮತ್ತೊಂದು ಮಗಳು ಹುಟ್ಟಿದಳು. ಮೊದಲ ಮಗುವಿಗೆ ಆಲಿಯಾ ಮತ್ತು ಎರಡನೇ ಮಗುವಿಗೆ ರಿಯಾ ಎಂದು ಹೆಸರಿಟ್ಟಿದ್ರು. ದಿನಗಳು ಉರುಳಿದಂತೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತಲೆದೋರಿದವು. ಹಾಗಾಗಿ ಆಯೇಷಾ ವಿಚ್ಛೇದನ ಪಡೆದಿದ್ರು. ಮೊದಲ ಪತಿಯೊಂದಿಗೆ ವಿಚ್ಛೇದನದ ಬಳಿಕ ಪರಿಚಯವಾಗಿದ್ದು ಶಿಖರ್​ ಧವನ್​.

ಫೇಸ್​​ಬುಕ್​​ನಲ್ಲಿ ಆಯೇಷಾಳನ್ನ ನೋಡಿ ಫಿದಾ ಆಗಿದ್ದ ಗಬ್ಬರ್​.!

ಅಚ್ಚರಿ ವಿಷಯ ಅಂದರೆ, ಶಿಖರ್​​ ಮತ್ತು ಆಯೇಷಾ ಒಬ್ಬರಿಗೊಬ್ಬರೂ ಪರಿಚಯವೇ ಇರಲಿಲ್ಲ ಅನ್ನೋದು.! ಆದರೆ ಹೇಗೆ ಇಬ್ಬರ ನಡುವೆ ಪ್ರೀತಿ ಹುಟ್ಟಿತು ಅನ್ನೋ ವಿಚಾರ, ಎಲ್ಲರನ್ನ ಆಶ್ಚರ್ಯ ಹುಟ್ಟಿಸಿದೆ. ಒಂದು ದಿನ ಫೇಸ್​​ಬುಕ್​ ಸ್ಕ್ರೋಲ್​ ಮಾಡ್ತಿದ್ದಾಗ, ಆಯೇಷಾಳ ಪೋಟೋಗಳನ್ನ ನೋಡಿ ಧವನ್,​​ ಬೆರಗಾದ್ರು. ಅವರ ನೋಟಕ್ಕೆ ಫಿದಾ ಆಗಿದ್ದ ಗಬ್ಬರ್​​, ಏಕ್​​​ದಮ್​ ಫ್ರೆಂಡ್​ ರಿಕ್ವೆಸ್​ ಕಳುಹಿಸಿಯೇ ಬಿಟ್ಟಿದ್ರು. ಅದರಲ್ಲಿ ಈಗಾಗಲೇ ಟೀಮ್​ ಇಂಡಿಯಾ ಗ್ರೇಟ್​​ ಸ್ಪಿನ್ನರ್​​​ ಹರ್ಭಜನ್​ ಸಿಂಗ್​​ ಮತ್ತು ಆಯೇಷಾ ಮ್ಯೂಚುವಲ್​ ಫ್ರೆಂಡ್ಸ್​ ಆಗಿರೋದು ಗೊತ್ತಾಯ್ತು.! ಶಿಖರ್ ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್, ಆಯೇಷಾ ಪುರಸ್ಕರಿಸಿದ್ದಳು. ಆ ಬಳಿಕ ಫೇಸ್​​ಬುಕ್​​​ನಲ್ಲೇ ಸುದೀರ್ಘ ಚಾಟಿಂಗ್​ ನಡೆಸಿದ್ರು. ಹೀಗೆ ಪರಿಚಯ ಸ್ನೇಹವಾಯ್ತು. ಸ್ನೇಹ ಪ್ರೇಮಕ್ಕೆ ತಿರುಗಿತು.

blank

ಧವನ್​-ಆಯೇಷಾ ಮೊದಲು ಭೇಟಿಯಾಗಿದ್ದು ಆಸ್ಟ್ರೇಲಿಯಾದಲ್ಲಿ.!

ಆಯೇಷಾ ಬಗ್ಗೆ ತನ್ನಲ್ಲಿನ ಮನದಾಳದ ಭಾವನೆಗಳನ್ನ ಹರ್ಭಜನ್​​ಗೆ, ಧವನ್ ಇಂಚಿಂಚಾಗಿ ಬಹಿರಂಗಪಡಿಸಿದ್ದರು. ಆಗ ಆಯೇಷಾ ಜೀನವದಲ್ಲಿ ನಡೆದ ವಿಚ್ಛೇದನದ ಕುರಿತು ಭಜ್ಜಿ ವಿವರಣೆ ನೀಡಿದ್ರು. ಆದರೂ ಇದೆಲ್ಲದರ ಹೊರತಾಗಿಯೂ ಶಿಖರ್‌ಗೆ ಈ ಬಂಗಾಳಿ ಸೌಂದರ್ಯದ ಮೇಲಿನ ಪ್ರೀತಿಯನ್ನ, ತಡೆಯಲು ಸಾಧ್ಯವಾಗಲಿಲ್ಲ. ಹರ್ಭಜನ್​ ಮತ್ತು ಆಯೇಷಾ ಸ್ನೇಹಿತರಾಗಿದ್ದ ಕಾರಣ, ಭೇಟಿ ಮಾಡಿಸುವಂತೆ ಭಜ್ಜಿಗೆ ಧವನ್​ ಪಟ್ಟು ಹಿಡಿದ್ದಿದ್ದರಂತೆ. ಹಾಗಾಗಿ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ, ಆಯೇಷಾಳನ್ನ ಹರ್ಭಜನ್​, ಧವನ್​ಗೆ ಪರಿಚಯ ಮಾಡಿಸಿಕೊಟ್ಟಿದ್ದರು.

ನೇರ ಮುಖಾಮುಖಿ ಭೇಟಿ ಬಳಿಕ ಇಬ್ಬರೂ ಕೂಡ ಉತ್ತಮ ಸ್ನೇಹಿತರಾದ್ರು. ನಂತರ ಧವನ್​ಗೆ ಆಯೇಷಾ, ತನಗಿಂತ 10 ವರ್ಷ ಹಿರಿಯಳೆಂದು ಗೊತ್ತಾಗಿದೆ. ಆದರೂ ಶಿಖರ್‌, ಆಯೇಶಾರನ್ನ ವಿವಾಹವಾಗಲು ಹೆಚ್ಚು ಉತ್ಸಾಹ ತೋರಿದ್ರು. ಹೆಚ್ಚು ದಿನ ಕಾಯಲಾರದ ಧವನ್​, ತನ್ನ ಮನಸಿನ ಮಾತುಗಳ ಮೂಲಕ ಆಯೇಷಾಗೆ ಪ್ರಪೋಸ್​ ಮಾಡಿದ್ರು. ಅಚ್ಚರಿ ಅಂದರೆ ಆಯೇಷಾ ಕೂಡ ಧವನ್​ಗೆ ಗ್ರೀನ್​ ಸಿಗ್ನಲ್​ ನೀಡಿದ್ದಳಂತೆ. ಆದರೆ ನಿನಗಿಂತ 10 ವರ್ಷ ದೊಡ್ಡವಳಾಗಿರೋ ಕಾರಣ, ನನ್ನನ್ನು ನಿಮ್ಮ ಮನೆಯಲ್ಲಿ ಒಪ್ಪುತ್ತಾರಾ ಎಂದು ಪ್ರಶ್ನಿಸಿದ್ದಳಂತೆ. ಆಗ ಧವನ್​, ಮನೆಯಲ್ಲಿ ಒಪ್ಪಿಸುವುದಾಗಿ ಹೇಳಿದ್ದರಂತೆ.

Source: newsfirstlive.com Source link