ಕಚಗುಳಿ ಇಡುತ್ತಿದೆ ‘ಪುಕ್ಸಟ್ಟೆ ಲೈಫು’ ಲಿರಿಕಲ್ ಟೈಟಲ್ ವೀಡಿಯೋ ಸಾಂಗ್

ಟ್ರೇಲರ್ ಮೂಲಕ‌ ಪ್ರೇಕ್ಷಕರ ಮನದಲ್ಲಿ, ಸ್ಯಾಂಡಲ್ ವುಡ್ ಅಂಗಳದಲ್ಲಿ ಸಂಚಲನ‌ ಮೂಡಿಸಿರುವ ಚಿತ್ರ ‘ಪುಕ್ಸಟ್ಟೆ ಲೈಫು’. ಇದೀಗ ಚಿತ್ರದ ಇಂಟ್ರಸ್ಟಿಂಗ್ ಲಿರಿಕಲ್ ಟೈಟಲ್‌ ಸಾಂಗ್ ಬಿಡುಗಡೆ ಮಾಡಿದ್ದು. ಸಾಂಗ್ ಹಾಗೂ ಕ್ಯಾಚಿ ಲಿರಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಪ್ರಮೋದ್ ಮರವಂತೆ ಸಾಹಿತ್ಯ ಕೃಷಿಯಲ್ಲಿ ಅರಳಿರುವ ‘ಪುಗ್ಸಟ್ಟೆ ಲೈಫು’ ಚಿತ್ರದ ಲಿರಿಕಲ್ ಟೈಟಲ್ ಟ್ರ್ಯಾಕ್ ಕಚಗುಳಿ ಇಡುತ್ತಿದ್ದು, ವಾಸು ದೀಕ್ಷಿತ್ ಸಂಗೀತ ಹಾಗೂ ದನಿಯಲ್ಲಿ ಹಾಡು ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ. ಸದ್ಯಕ್ಕಂತು ಕಚಗುಳಿ ಇಡುತ್ತಿರುವ ಕ್ಯಾಚಿ ಹಾಡನ್ನು ರಿಪೀಟ್ ಮೂಡ್ ನಲ್ಲಿ ಎಲ್ಲರೂ ಕೇಳುತ್ತಿದ್ದಾರೆ. ಈ ಹಾಡಿನ ಜೊತೆಗೆ ಸೆಪ್ಟೆಂಬರ್ 17ಕ್ಕೆ ಚಿತ್ರ ಸಿನಿಪ್ರಿಯರನ್ನು ರಂಜಿಸಲು ಚಿತ್ರಮಂದಿರಕ್ಕೆ ಬರುತ್ತಿರೋದನ್ನು ಕನ್ಫರ್ಮ್ ಮಾಡಿದೆ ಚಿತ್ರತಂಡ.

ಸಂಚಾರಿ ವಿಜಯ್ ಮತ್ತೊಮ್ಮೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಅರವಿಂದ್ ಕುಪ್ಳಿಕರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಮುಸ್ಲಿಂ ಯುವಕನ ಪಾತ್ರದಲ್ಲಿ ವಿಜಯ್ ಅಭಿನಯಿಸಿದ್ದು‌, ಮಾತಂಗಿ ಪ್ರಸನಾ ನಾಯಕಿಯಾಗಿ ತೆರೆಹಂಚಿಕೊಂಡಿದ್ದಾರೆ. ಮಧ್ಯಮ ವರ್ಗದ ವ್ಯಕ್ತಿಯೊಬ್ಬ ಹಣದ ಹಿಂದೆ ಬಿದ್ದರೆ ಎದುರಾಗಬಹುದಾದ ಸಮಸ್ಯೆ ಗಳು ಹಾಗೂ ಉನ್ನತ ಹುದ್ದೆಯಲ್ಲಿರುವವರು ತಮ್ಮ‌ ದಾಳಕ್ಕೆ ತಕ್ಕ ಹಾಗೆ ಅಮಾಯಕರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವ ಅಂಶಗಳನ್ನಿಟ್ಟುಕೊಂಡು‌ ಕಥಾಹಂದರವನ್ನು ಹೆಣೆದಿದ್ದಾರೆ‌ ನಿರ್ದೇಶಕರು. ಡಾರ್ಕ್ ಹ್ಯೂಮರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ಬಂಡವಾಳ ಹಾಕಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಿಂದ ಬೆಂಗ್ಳೂರಿಗೆ ಬಂದು ಮಂಜನನ್ನು ಭೇಟಿಯಾದ ನಟಿ ನಿಧಿ 

ರಂಗಾಯಣ ರಘು, ಅಚ್ಯುತ್ ಕುಮಾರ್ ‘ಪುಕ್ಸಟ್ಟೆ ಲೈಫು’ ಚಿತ್ರದಲ್ಲಿ ವಿಭಿನ್ನ ಪಾತ್ರಗಳ ಮೂಲಕ ರಂಜಿಸಲಿದ್ದು, ಬಹುತೇಕ ರಂಗಭೂಮಿ‌ ಕಲಾವಿದರೇ ಚಿತ್ರದ ತಾರಾಗಣದಲ್ಲಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತಕ್ಕಿದೆ.  ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

ಸಾಂಗ್ಸ್, ಟ್ರೇಲರ್ ಸೂಪರ್ ಡೂಪರ್ ಹಿಟ್ ಆಗಿ ಬಹು ನಿರೀಕ್ಷೆ ಮೂಡಿಸಿರುವ ಈ ಚಿತ್ರ ಸೆಪ್ಟೆಂಬರ್ 17ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ.

Source: publictv.in Source link