ಕೊನೆಗೂ ಈಡೇರಲಿಲ್ಲ ಶಿಖರ್ ಧವನ್ ಕಂಡಿದ್ದ ಆ ಒಂದು ಕನಸು

ಕೊನೆಗೂ ಈಡೇರಲಿಲ್ಲ ಶಿಖರ್ ಧವನ್ ಕಂಡಿದ್ದ ಆ ಒಂದು ಕನಸು

ಮೈದಾನದಲ್ಲಿ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಿ ಸುದ್ದಿಯಾಗ್ತಿದ್ದ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​​​ ಶಿಖರ್​ ಧವನ್​ ದಾಂಪತ್ಯದಲ್ಲೀಗ ಬಿರುಗಾಳಿ ಎದ್ದಿದೆ. ಈ ಬಿರುಗಾಳಿ ಇದೀಗ 9 ವರ್ಷಗಳ ದಾಂಪತ್ಯ ಜೀವನಕ್ಕೆ, ತೆರೆ​ ಬೀಳುವಂತೆ ಮಾಡಿದೆ. ಯಶಸ್ವಿ ಜೋಡಿ ಎನಿಸಿಕೊಂಡಿದ್ದ ಈ ಲವ್ಲಿ ಪೇರ್​ ಸಂಬಂಧ ಇದೀಗ ಮುರಿದು ಬಿದ್ದಿದೆ.

ಶಿಖರ್ ಧವನ್. ಈ ಕ್ರಿಕೆಟಿಗನ ಬಗ್ಗೆ ಇಂಟ್ರಡಕ್ಷನೇ ಬೇಡ.! ಆನ್​ಫೀಲ್ಡ್​​ನಲ್ಲಿ ಧವನ್, ತನ್ನ ಸ್ಟೈಲಿಶ್​ ಬ್ಯಾಟಿಂಗ್​​​​ ಮತ್ತು ಡಿಫೆರೆಂಟ್ ಸೆಲಿಬ್ರೇಷನ್ಸ್​ನಿಂದ, ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅದ್ರಲ್ಲೂ ಕ್ಯಾಚ್​​​ ಹಿಡಿದು ತೊಡೆ ತಟ್ಟಿ, ಮೀಸೆ ತಿರುವೋ ಧವನ್​​​​​​​​​​​​​​​​​​​​​​​​​​​​​​​​​​​, ಸೆಂಚೂರಿ ಸಿಡಿಸಿ ಸಂಭ್ರಮಿಸುವ ಸ್ಟೈಲೇ ಬೇರೆ.! ಅಭಿಮಾನಿ ಪ್ರಿಯ ಗಬ್ಬರ್​ ಸಿಂಗ್ ಜೀವನದಲ್ಲಿ, ಇದೀಗ ಬಿರುಗಾಳಿ ಸೃಷ್ಟಿಯಾಗಿದೆ.

ಮುರಿದು ಬಿತ್ತು ಶಿಖರ್ ಧವನ್ ದಾಂಪತ್ಯ ಜೀವನ..!

9 ವರ್ಷಗಳ ವೈವಾಹಿಕ ಜೀವನಕ್ಕೆ ಬಿತ್ತು ಬ್ರೇಕ್ ​..!

ಯೆಸ್.! ಡೆಲ್ಲಿ ಡ್ಯಾಶರ್​​ ಶಿಖರ್ ಧವನ್ ದಾಂಪತ್ಯದಲ್ಲಿ, ಬಿರುಗಾಳಿ ಎದ್ದಿದೆ. ಪ್ರೀತಿಸಿ ಮದುವೆಯಾಗಿದ್ದ ಶಿಖರ್​-ಆಯೇಷಾ ಜೊತೆಯಾಟಕ್ಕೆ, ಡೀವೋರ್ಸ್ ಎಂಬ ಬ್ರೇಕ್ ಬಿದ್ದಿದೆ. 9 ವರ್ಷಗಳ ದಾಂಪತ್ಯ ಜೀವನವನ್ನ ಅಂತ್ಯಗೊಳಿಸುವ ಬಗ್ಗೆ, ಸ್ವತಃ ಅಯೇಷಾ ಮುಖರ್ಜಿ ದೃಢಪಡಿಸಿದ್ದಾರೆ.

ವಿಚ್ಛೇದನ ಎಂಬುದು, ಬಹಳ ಕೆಟ್ಟ ಪದ ಎಂದು ನಾನು ಭಾವಿಸಿದ್ದೆ. ಆದ್ರೆ ನನ್ನ ಜೀವನದಲ್ಲಿ ಎರಡು ಬಾರಿ ವಿಚ್ಛೇದನ ಪಡೆಯುವಂತಾಗಿದೆ. ಈ ಪದಗಳು ಬಲಿಷ್ಠ ಮತ್ತು ನಮ್ಮ ಜೀವನದ ಭಾಗವಾಗಿರುತ್ತವೆ ಎಂಬುದು ತಮಾಷೆಯೇ ಸರಿ.! ಮೊದಲ ಬಾರಿ ವಿಚ್ಛೇದನ ಪಡೆದಾಗ,  ನಾನು ಬಹಳಾ ಹೆದರಿದ್ದೆ. ಸೋತ ಅನುಭವವಾಗಿತ್ತು. ನಾನೇನೋ ತಪ್ಪು ಮಾಡಿದ್ದೇನೆ ಎಂದನ್ನಿಸಿತ್ತು. ವಿಚ್ಛೇದನ ನಿಜಕ್ಕೂ ಕೆಟ್ಟ ಪದ. ಈಗ ಎರಡನೇ ಬಾರಿ ಇವೆಲ್ಲವನ್ನೂ ಅನುಭವಿಸುವಂತಾಗಿದೆ. ವಾವ್.  ಇದು ನಿಜಕ್ಕೂ ಭಯಾನಕ.! ಈಗಾಗಲೇ ವಿಚ್ಛೇದನ ಪಡೆದಾಗಿದೆ. ಎರಡನೇ ಬಾರಿ ಮತ್ತಷ್ಟು ಸವಾಲುಗಳಿವೆ  ಎಂಬುದು ಗೊತ್ತಿದೆ. ಎರಡನೇ ಮದುವೆ ಮುರಿದು ಬಿದ್ದಾಗಲೂ ಬಹಳಾ ಭಯವಾಗುತ್ತಿದೆ. ಮೊದಲ ಬಾರಿಯ ವಿಚ್ಛೇದನ ಸಮಯದಲ್ಲಿ ಅನುಭವಿಸಿದ್ದ ಎಲ್ಲಾ ನೋವುಗಳು ಮತ್ತೆ ಆವರಿಸಿದೆ. ಭಯ, ವೈಫಲ್ಯ ಮತ್ತು ನಿರಾಶೆ ನೂರು ಪಟ್ಟು ಎದುರಾಗಿದೆ.

                                                                                                -ಆಯೇಷಾ ಮುಖರ್ಜಿ, ಧವನ್ ಮಾಜಿ ಪತ್ನಿ

ಡಿವೋರ್ಸ್ ವಿಚಾರವನ್ನ ಇನ್​ಸ್ಟಾಗ್ರಾಂನಲ್ಲಿ ದೃಢಪಡಿಸಿರುವ ಆಯೇಷಾ, ಇತ್ತೀಚಿನ ಬೆಳವಣಿಗೆಗಳಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ, ಪೊಸ್ಟ್​ನಲ್ಲಿ ಸ್ಪಷ್ಟವಾಗಿದೆ. ತಾನು ಆಘಾತದಲ್ಲಿ ಇರುವುದಾಗಿಯೂ ಭಾವನಾತ್ಮಕ ಬರಹದಲ್ಲಿ ಹೇಳಿಕೊಂಡಿದ್ದಾರೆ. ಆ ಮೂಲಕ 9 ವರ್ಷಗಳ ವಿವಾಹ ಬಾಂಧವ್ಯಕ್ಕೆ ಅಂತ್ಯವ ಹಾಡಿದ್ದಾರೆ.. ಅಷ್ಟೇ ಅಲ್ಲ..! ಅಭಿಮಾನಿಗಳಿಗೂ ಶಾಕ್ ನೀಡಿದ್ದಾರೆ.

blank

ಕೆಲ ವರ್ಷಗಳಿಂದ ಇಬ್ಬರಲ್ಲಿ ಮೂಡಿತ್ತು ಬಿರುಕು..!

ಹೌದು.! ಕೆಲ ವರ್ಷಗಳಿಂದ ಗಬ್ಬರ್ ಸಿಂಗ್ ದಾಂಪತ್ಯ ಜೀವನದಲ್ಲಿ, ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಪುಷ್ಠಿಕರಿಸುವಂತೆ, ಪತ್ನಿ ಜೊತೆ ಧವನ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇತ್ತೀಚಿಗಷ್ಟೆ ಜಮ್ಮು-ಕಾಶ್ಮೀರದ ಕಾತ್ರದಲ್ಲಿರುವ ವೈಷ್ಣೋ ದೇವಿ ದರ್ಶನಕ್ಕೆ ಶಿಖರ್ ಧವನ್, ತೆರಳಿದ್ದರು. ಈ ವೇಳೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಕೂಡ ಸಲ್ಲಿಸಿದ್ದರು. ಆದ್ರೆ ಪತ್ನಿ ಆಯೇಷಾ ಮುಖರ್ಜಿ ಮಾತ್ರ, ಧವನ್ ಜೊತೆ ಕಾಣಲಿಲ್ಲ.

ಅಷ್ಟೇ ಅಲ್ಲ.! ಪದೇ ಪದೇ ಸೋಷಿಯಲ್‌ ಮೀಡಿಯಾಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ, ಇತ್ತೀಚಿನ ದಿನಗಳಲ್ಲಿ, ಕಾಣಿಸಿಕೊಂಡಿದ್ದೇ ಇಲ್ಲ.! ಸಾರ್ವಜನಿಕವಾಗಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ..! ಸಾಮಾನ್ಯವಾಗಿ ಧವನ್ ಆಡುವ ಐಪಿಎಲ್‌ ಪಂದ್ಯಗಳ ವೇಳೆ, ಆಯೇಷಾ ಡಗೌಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆಗಾಗ ಅಂತರಾಷ್ಟ್ರೀಯ ಪಂದ್ಯಗಳ ವೇಳೆಯೂ, ಮೈದಾನದಲ್ಲಿ ಪತಿಗೆ ಚಿಯರ್ ಅಪ್​ ಮಾಡುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಆಯೇಷಾ ಉಪಸ್ಥಿತಿಯೇ ಇರಲಿಲ್ಲ. ಇತ್ತೀಚಿಗೆ ಲಂಕಾ ಸರಣಿ ವೇಳೆ ನಾಯಕತ್ವ ಜವಾಬ್ದಾರಿ ವಹಿಸಿದ್ದಾಗಲೂ ಶಿಖರ್, ಒಬ್ಬಂಟಿಯಾಗಿಯೇ ದ್ವೀಪರಾಷ್ಟ್ರಕ್ಕೆ ತೆರಳಿದ್ದರು. ಇದು ಎಲ್ಲವೂ ಸರಿಯಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕಿತ್ತು.

ಅನ್ಯೋನ್ಯವಾಗಿದ್ದ ಇವರಿಬ್ಬರ ಬಾಳಲ್ಲಿ ಏನಾಯ್ತು..?

ದೀರ್ಘಕಾಲದಿಂದ ಇಬ್ಬರ ನಡುವಿನ ಬಿರುಕಿನ ಬಗ್ಗೆ ಸುದ್ದಿ ಹರಿದಾಡುತ್ತಿದ್ದರೂ, ಅದು ಕೇವಲ ವದಂತಿಗೆ ಮಾತ್ರವೇ ಸೀಮಿತವಾಗಿತ್ತು. ಯಾಕಂದ್ರೆ ಶಿಖರ್​, ಆಯೇಷಾ ನಡುವಿನ ಅನ್ಯೋನ್ಯತೆ ಅಷ್ಟರ ಮಟ್ಟಿಗಿತ್ತು. ಶಿಖರ್ ಭಾರತದಲ್ಲೇ ವಾಸಿಸುತ್ತಿದ್ದರೂ, ಆಯೇಷಾ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಇಬ್ಬರ ನಡುವೆ ವಿಶೇಷ ಬಾಂಧವ್ಯವೇ ಇತ್ತು. ಪ್ರೀತಿ, ನಂಬಿಕೆ ಇತ್ತು. ಇದಕ್ಕೆ ಸಾಕ್ಷಿ ಲಾಕ್​ಡೌನ್​ ವೇಳೆ ಇವರಿಬ್ಬರ ಜೊತೆಯಲ್ಲಿರೋ, ಈ ಫೊಟೋ, ವಿಡಿಯೋಗಳು.! ಪತ್ನಿ ಜೊತೆಗಿನ ಸುಮಧುರ ಕ್ಷಣಗಳನ್ನೆಲ್ಲಾ ಹಂಚಿಕೊಳ್ಳುತ್ತಿದ್ದ ಈ ಫ್ಯಾಮಿಲಿಮ್ಯಾನ್, ಮಾದರಿ ಪತಿ ಕೂಡ ಆಗಿದ್ದರು. ಆದ್ರೀಗ ವಿಚ್ಚೇದನದ ಹಾದಿ ತುಳಿದಿದ್ದು, ಅಚ್ಚರಿಯ ಜೊತೆಗೆ ಯಕ್ಷ ಪ್ರಶ್ನೆ ಮೂಡುವಂತೆ ಮಾಡಿದೆ.

ಕೊನೆಗೂ ಈಡೇರಲಿಲ್ಲ ಶಿಖರ್ ಧವನ್ ಕಂಡಿದ್ದ ಕನಸು..!

ಹೌದು.! ವೈಯಕ್ತಿಕ ಜೀವನದ ಜೊತೆಗೆ ವೃತ್ತಿ ಜೀವನದಲ್ಲೂ ಅಂತ್ರತ್ರಕ್ಕೆ ಸಿಲುಕಿರುವ ಶಿಖರ್, ವೃದ್ಧಾಪ್ಯದ ಬಹುದೊಡ್ಡ ಕನಸು ಕಂಡಿದ್ದರು. ವೃದ್ಧಾಪ್ಯದಲ್ಲಿ ಪತ್ನಿ ಆಯೇಷಾ ಜೊತೆಗೆ ಪ್ರಪಂಚ ಸುತ್ತುವ ಕನಸು ಹೊತ್ತಿದ್ದರು. ಆದ್ರೆ ಇಬ್ಬರ ನಡುವಿನ ಬಿರುಕೆಂಬ ಬೆಂಕಿ, ಕನಸನ್ನೆ ಭಗ್ನಗೊಳಿಸಿದೆ. ಅಷ್ಟೇ ಅಲ್ಲ.! ಕೊನೆಯವರೆಗೂ ಜೊತೆಯಾಗಿಯೇ ಇರಬೇಕು, ನಮ್ಮ ಫ್ಯಾಮಿಲಿ ಸಂತೋಷವಾಗಿರಬೇಕೆಂದು ಪ್ರಾರ್ಥಿಸಿದ್ದರು ಕೂಡ.! ಆದ್ರೆ ಇದೆಲ್ಲವೂ ಈಗ ಛಿದ್ರವಾಗಿದೆ.

ಮೂರು ವರ್ಷಗಳ ಹಿಂದೆ, ಶಿಖರ್ ಧವನ್​​ರ ಮನದಾಳದ ಪ್ರೀತಿಯ ಮಾತುಗಳನ್ನ. ಆದ್ರೆ ಎಷ್ಟೆಲ್ಲಾ ಕನಸು ಕಂಡಿದ್ದ  ಧವನ್‌ ಹಾಗೂ ಆಯೇಷಾ ಮುಖರ್ಜಿ, ವೈವಾಹಿಕ ಜೀವನಕ್ಕೆ ತೆರೆಬಿದ್ದಿದೆ. ಕಳೆದ 9 ವರ್ಷಗಳಿಂದ ಸಂಸಾರ ನಡೆಸಿದ್ದ ಈ ಜೋಡಿ ಇದೀಗ ಡಿವೋರ್ಸ್​ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮೈದಾನದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ, ಇದೀಗ ಬೇರೆ-ಬೇರೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ನಿಜಕ್ಕೂ ಇದು, ನಂಬಲಾಗದ ಸಂಗತಿಯೇ ಆಗಿದೆ.

Source: newsfirstlive.com Source link