‘ಡ್ರಗ್ಸ್​ ಕೇಸಲ್ಲಿ ನಿಯಮಗಳನ್ನು ಗಾಳಿಗೆ ತೂರಿದ ತನಿಖಾಧಿಕಾರಿಗಳು’- ಪ್ರಶಾಂತ್​​ ಸಂಬರಗಿ ಹೇಗೆ ಹೇಳಿದ್ದು ಯಾರಿಗೆ?

‘ಡ್ರಗ್ಸ್​ ಕೇಸಲ್ಲಿ ನಿಯಮಗಳನ್ನು ಗಾಳಿಗೆ ತೂರಿದ ತನಿಖಾಧಿಕಾರಿಗಳು’- ಪ್ರಶಾಂತ್​​ ಸಂಬರಗಿ ಹೇಗೆ ಹೇಳಿದ್ದು ಯಾರಿಗೆ?

ಬೆಂಗಳೂರು: ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಭಾಗಿಯಾಗಿರುವ ಆರೋಪದ ಕುರಿತು ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಪ್ರತಿಕ್ರಿಯೆ ನೀಡಿದ್ದು, ಈ ಕೇಸ್​ನ ತನಿಖೆಯ ಹಂತದಲ್ಲಿ ಆಗಿನ ಕ್ರೈಂ ಡಿಸಿಪಿ ಗಾಂವ್ಕರ್​  ಕೇಸ್​ನ್ನು ತಿಳಿ ಮಾಡಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು ಯಾಕೆ ಆರೋಪಿ ತರುಣ್​ ಹೆಸರನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಿಲ್ಲ. ಜೊತೆಗೆ ಅನುಶ್ರೀ ಹೆಸರು ಚಾರ್ಜ್​ಶೀಟ್​ನಲ್ಲಿ ಅವರ ಹೆಸರು ನೇರವಾಗಿ ಉಲ್ಲೇಖಿಸಿಲ್ಲ ಇದಕ್ಕೆ ಅವರೇ ಉತ್ತರ ಕೊಡ್ಬೇಕು ಎಂದಿದ್ದಾರೆ.

ಇದನ್ನೂ ಓದಿ:ಡ್ರಗ್​​ ಕೇಸ್​: ರಾಜಕೀಯ ಒತ್ತಡಕ್ಕೆ ಮಣಿದು ಅನುಶ್ರೀ ಹೆಸರು ಕೈಬಿಟ್ಟಿತ್ತಾ ಮಂಗಳೂರು ಸಿಸಿಬಿ..?

ವೈದ್ಯಕೀಯ ಪರಿಕ್ಷೇ ಮಾಡಲು ನಿಯಮಗಳಿವೆ ಅವುಗಳನ್ನು ಅಂದಿನ ತನಿಖಾಧಿಕಾರಿಗಳೇ ಗಾಳಿಗೆ ತೂರಿದ್ದಾರೆ. ನಟಿಯನ್ನು ಬಚಾವ್​ ಮಾಡಲು ಸಿಸಿಬಿ ಅಧಿಕಾರಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿಗಳು ಮಂಗಳೂರಿನ ಸಿಸಿಬಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಮರು ತನಿಖೆಗೆ ಸೂಚಿಸಬೇಕು ಎಂದಿದ್ದಾರೆ.

Source: newsfirstlive.com Source link