‘ಅಂತಿಂತ ಗಂಡು ನಾನಲ್ಲ, ನನ್ನಂತ ಭಂಡ ಯಾರಿಲ್ಲ’ ಎನ್ನುತ್ತಿದ್ದಾರೆ ನಟ ಜಗ್ಗೇಶ್​​​..!

‘ಅಂತಿಂತ ಗಂಡು ನಾನಲ್ಲ, ನನ್ನಂತ ಭಂಡ ಯಾರಿಲ್ಲ’ ಎನ್ನುತ್ತಿದ್ದಾರೆ ನಟ ಜಗ್ಗೇಶ್​​​..!

ಅಂತಿಂತ ಗಂಡು ನಾನ್ ಅಲ್ಲ. ನನ್ನಂತ ಭಂಡಾ ಯಾರಿಲ್ಲ ಅಂತ ಹೇಳುತ್ತಾ ಕನ್ನಡಿಗರ ಮನೆ ಮಾತಾದವರು ನವರಸ ನಾಯಕ ಜಗ್ಗೇಶ್​​​. ಜಗ್ಗಣ್ಣನ ಸಿನಿ ಕರಿಯರ್​​ಗೆ ಬೆಳ್ಳಿ ಮಹೋತ್ಸವ ಮೀರಿದೆ. ಈ ರೈಟ್​​​ ಟೈಮ್​ನಲ್ಲೇ ತೋತಾಪುರಿ ತಿಂದು ರಂಗನಾಯಕನಾಗಿರೋ ಜಗ್ಗಣ್ಣ ಹಳೆ ದಿನಗಳನ್ನ ಮೆಲುಕು ಹಾಕಿದ್ದಾರೆ.

blank

ಅಂತಿಂತ ಗಂಡು ನಾನ್ ಅಲ್ಲ , ನನ್ನಂತ ಭಂಡ ಯಾರಿಲ್ಲ, ಕನ್ನಡ ಭಾಷೆಯೆ ನನ್ನ ಜೀವ, ಕಾವೇರಿ ತಾಯಿಯೇ ನಮ್ಮವ್ವ, ಈ ಮಣ್ಣಂದ್ರೆ ಚಿನ್ನ ,ಇಲ್ಲಿ ಹುಟ್ಟೋರು ರನ್ನ , ನುಡಿ ಚೆಂದ ನಡೆ ಚೆಂದ ಚೆಂದ ಚೆಂದ ಗೆಳೆಯ ಅನ್ನುತ್ತಾ ಕನ್ನಡಿಗರ ಮನೆ ಮಾತಾದವರು ನವರಸ ನಾಯಕ ಜಗ್ಗೇಶ್​..

ಈಗ್ಯಾಕೆ ಈ ಹಾಡಿನ ಲಿರಿಕ್ಸ್​​ ಅನ್ನ ನೆನಪು ಮಾಡಿಕೊಂಡ್ವಿ ಅನ್ನೋದಕ್ಕ ಕಾರಣ ರಂಗನಾಯಕ. ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಸಿನಿಮಾ ಕಾಂಬೋ ರಂಗನಾಯಕ ಚಿತ್ರಕ್ಕಾಗಿ ಒಂದಾಗಿ ಕೆಲಸ ಮಾಡ್ತಿದೆ.. ಕೆಲ ದಿನಗಳ ಹಿಂದೆ ರಾಜ ಮಹಾರಾಜರ ಕಾಲದ ಅರಮನೆಯನ್ನ ಸೃಷ್ಟಿ ಮಾಡಿ ಶೂಟಿಂಗ್​ಮಾಡಿತ್ತು ಚಿತ್ರತಂಡ.

blank

ಈಗ ರಂಗನಾಯಕ ಸಿನಿಮಾ ತಂಡ ಜಗ್ಗಣ್ಣನ ಫೇವರೆಟ್ ಗೆಟಪ್, ಭಂಡ ನನ್ನ ಗಂಡ ಸಿನಿಮಾ ಕೃಷ್ಣನ್​​ ಗೆಟಪ್ ಹಾಕಿಸಿ ಭಂಡ ನನ್ನ ಗಂಡ ಸಿನಿಮಾದ ಅಂತಿಂತ ಗಂಡು ನಾನ್ ಅಲ್ಲ ಹಾಡಿನ ಲೋಕೇಷನಲ್ಲಿ  ನಿಲ್ಲಿಸಿದೆ.

blank

ನವರಸ ನಾಯಕನಿಗೆ ರಾಜನ ಗೆಟಪ್ ಹಾಕಿಸಿದ ಗುರುಪ್ರಸಾದ್ ಇದೇನಿದು ಪಟ್ಟಾಪಟ್ಟಿ ಚಡ್ಡಿ ಹಾಕಿಸಿ ಹಳ್ಳಿ ಹೈದನಾಗಿ ಮಾಡಿದ್ದಾರೆ ಅನ್ನೋ ಕುತೂಹಲ ಈಗ ಚಿತ್ರಪ್ರೇಮಿಗಳಲ್ಲಿ ಎದ್ದಿದೆ. ಈ ವರ್ಷದ ಕೊನೆಯೊಳಗೆ ರಂಗನಾಯಕ ಸಿನಿಮಾದ ಶೂಟಿಂಗ್ ಮುಕ್ತಾಯವಾಗೋ ಸಾಧ್ಯತೆ ಇದ್ದು ಮುಂದಿನ ವರ್ಷ ಸಂಕ್ರಾಂತಿಗೆ ರಂಗನಾಯಕ ಸಿನಿಮಾ ಬಂದ್ರು ಬರಬಹುದು.

Source: newsfirstlive.com Source link