TTDಯಿಂದ ಅಸಂಖ್ಯ ಭಕ್ತಸಾಗರಕ್ಕೆ ಸಿಹಿಸುದ್ದಿ.. ಇಂದಿನಿಂದ ತಿರುಮಲದಲ್ಲಿ ‘ಸರ್ವದರ್ಶನಂ’ ಆರಂಭ

TTDಯಿಂದ ಅಸಂಖ್ಯ ಭಕ್ತಸಾಗರಕ್ಕೆ ಸಿಹಿಸುದ್ದಿ.. ಇಂದಿನಿಂದ ತಿರುಮಲದಲ್ಲಿ ‘ಸರ್ವದರ್ಶನಂ’ ಆರಂಭ

ಕೋವಿಡ್​ ಹೆಸರಿನಷ್ಟೇ ಭಯ, ಆತಂಕ ಹುಟ್ಟಿಸೋದು ಲಾಕ್​ಡೌನ್​.. ಈ ನಿರ್ಬಂಧ ಜನರಿಗಷ್ಟೇ ಸೀಮಿತವಾಗಿಲ್ಲ. ದೇವರಿಗೂ ದಿಗ್ಭಂಧನ ಬಿದ್ದಿತ್ತು. ದೇವಸ್ಥಾನಗಳೂ ಬಂದ್​ ಆಗಿದ್ದವು. ಈಗ ಮೂರನೇ ಅಲೆ ಆತಂಕ ಕಣ್ಮುಂದೆಯೇ ಇದೆ. ಈ ಆತಂಕದ ನಡುವೆಯೂ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ಸಿದ್ಧನಾಗಿದ್ದಾನೆ. ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಸಿಹಿಸುದ್ದಿ ನೀಡಿದೆ. ಇದೀಗ ಕೆಲವೆಡೆ ಕೆಲವು ದೇಗುಲಗಳು ಓಪನ್​ ಆಗಿವೆ.. ಈ ಸರದಿಗೆ ಇದೀಗ ತಿರುಪತಿ ತಿಮ್ಮಪ್ಪನ ಸನ್ನಿಧಾನವೂ ಸೇರ್ಪಡೆಗೊಳ್ಳಲಿದೆ.

ಕೋವಿಡ್​ ಎರಡನೇ ಅಲೆ ಬಳಿಕ ತಿರುಪತಿಯ ತಿರುಮಲ ದೇಗುಲದಲ್ಲಿ ಭಕ್ತರಿಗೆ ಉಚಿತ ದರ್ಶನ ವ್ಯವಸ್ಥೆ ನಿರ್ಬಂಧಗೊಳಿಸಲಾಗಿತ್ತು. ಅಲ್ಲದೇ ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉಚಿತ ದರ್ಶನ ರದ್ದಾದ ಹಿನ್ನಲೆ ತಿರುಪತಿ ತಿಮ್ಮಪ್ಪನ ನೋಡಲು ಬರೋ ಜನಸಾಮಾನ್ಯರ ಸಂಖ್ಯೆ ಕೂಡ ಕುಸಿದ್ದಿತು. ಆದರೆ, ಈಗ ಎಲ್ಲಾ ಭಕ್ತರಿಗೂ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮರಳಿ ಭಕ್ತ ಸಾಗರವನ್ನ ಸ್ವಾಗತಿಸೋದಕ್ಕೆ ತಿಮ್ಮಪ್ಪನ ಸನ್ನಿಧಾನ ಸಜ್ಜಾಗಿದೆ.

blank

ತಿರುಪತಿಯಲ್ಲಿ ಉಚಿತ ದರ್ಶನ..
ಇಷ್ಟು ದಿನ ವಿಶೇಷ ದರ್ಶನಕ್ಕೆ ಮಾತ್ರ ಇದ್ದ ಅವಕಾಶ

ಇಂದಿನಿಂದ ಎಲ್ಲಾ ಭಕ್ತರಿಗೂ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲಿಗೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜನರಿಗೆ ಮಾತ್ರ ಈ ಪ್ರವೇಶ ಉಚಿತವಾಗಿರಲಿದೆ. ತಿರುಮಲ ತಿರುಪತಿ ಇದೇ ಚಿತ್ತೂರು ಜಿಲ್ಲೆಯಲ್ಲಿದ್ದು, ಈ ಜಿಲ್ಲೆಯ ಜನರು ತಿಮ್ಮಪ್ಪನ ದರ್ಶನ ಪಡೆಯಬಹುದು.

ಇನ್ನು, ಕೋವಿಡ್​ ನಿಯಮಗಳ ಅನ್ವಯ ದಿನಕ್ಕೆ 2 ಸಾವಿರ ಟೋಕನ್​ ವಿತರಿಸುವ ಮೂಲಕ ಉಚಿತ ದರ್ಶನಕ್ಕೆ ಅವಕಾಶ ನೀಡಲಾಗ್ತಿದೆ. ನಿನ್ನೆ ಬೆಳಗ್ಗೆ 6 ಗಂಟೆಯಿಂದಲೇ ಟೋಕನ್ ವಿತರಣೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವುದಾಗಿ ತಿರುಮಲ ದೇಗುಲ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಶೀಘ್ರದಲ್ಲಿಯೇ ಎಲ್ಲಾ ಭಕ್ತರಿಗೂ ತಿಮ್ಮಪ್ಪನ ಉಚಿತ ದರ್ಶನ ಸಿಗುವಂತೆ ಮಾಡೋದಕ್ಕೂ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

ಮುಂದಿನ ದಿನಗಳಲ್ಲಿ ಟೋಕನ್​ ಸಂಖ್ಯೆ ಹೆಚ್ಚಳದ ಬಗ್ಗೆ ಟಿಟಿಡಿ ಮಾಹಿತಿ

ಇದೇ ವೇಳೆ ವಿಶೇಷ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಟಿಕೆಟ್​ಗೆ 300 ರೂಪಾಯಿ ವಿಧಿಸಲಾಗಿದೆ. ಪ್ರತಿ ದಿನ ಇಂಥ 3 ಸಾವಿರ ಟಿಕೆಟ್​ಗಳನ್ನು ತಿರುಪತಿ ತಿರುಮಲ ದೇವಾಲಯದ ಆಡಳಿತ ಮಂಡಳಿ ವಿತರಣೆ ಮಾಡುತ್ತಿದೆ.

ಒಟ್ಟಿನಲ್ಲಿ ತಿರುಮಲನ ದರ್ಶನ ಪಡೆಯೋದಕ್ಕೆ ಸಾವಿರಾರು ಭಕ್ತರು ಆಗಮಿಸ್ತಿದ್ದಾರೆ. ಎಲ್ಲಾ ಭಕ್ತರಿಗೂ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿರೋದ್ರಿಂದ ತಿಮ್ಮಪ್ಪನನ್ನ ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಹರಿದುಬರೋ ನಿರೀಕ್ಷೆ ಇದೆ.

Source: newsfirstlive.com Source link