‘ನಿವೃತ್ತ ಐಪಿಎಸ್ ಅಧಿಕಾರಿಯಿಂದ ಹಳ್ಳ ಹಿಡಿದ ಡ್ರಗ್ ಕೇಸ್’- ಪ್ರಶಾಂತ್ ಸಂಬರಗಿ ಕಿಡಿ

‘ನಿವೃತ್ತ ಐಪಿಎಸ್ ಅಧಿಕಾರಿಯಿಂದ ಹಳ್ಳ ಹಿಡಿದ ಡ್ರಗ್ ಕೇಸ್’- ಪ್ರಶಾಂತ್ ಸಂಬರಗಿ ಕಿಡಿ

ಬೆಂಗಳೂರು: ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಭಾಗಿಯಾಗಿರುವ ಆರೋಪದ ಕುರಿತು ಸಾಮಾಜಿಕ ಹೋರಾಟಗಾರ ಪ್ರಶಾಂತ್​ ಸಂಬರಗಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಸಂಪೂರ್ಣ ಹಳ್ಳ ಹಿಡಿದಿದೆ ಎಂದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನುಶ್ರೀಯನ್ನ ಸಿಸಿಬಿ ಅಧಿಕಾರಿಗಳು ಯಾಕೆ ಅಷ್ಟು ಹಗುರವಾಗಿ ಪರಿಗಣಿಸಿದ್ದಾರೆ. ಪೊಲೀಸರು ಫ್ಯಾಷನ್​ ಪರೇಡ್​ ರೀತಿಯಲ್ಲಿ ಅವರನ್ನು ವಿಚಾರಣೆ ನಡೆಸಿದ್ದಾರೆ. ಆರೋಪಿ ತರುಣನ ಹೇಳಿಕೆ ಪಡೆದ ನಂತರ ಆತನ ಹೇಳಿಕೆಗಳನ್ನು ಚಾರ್ಜ್​ಶೀಟ್​ನಲ್ಲಿ ಯಾಕೆ ಹಾಕಿಲ್ಲ ಎಂದು ಪ್ರಶಾಂತ್​ ಸಂಬರಗಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಅನುಶ್ರೀ ಮುಖವಾಡ ಕಳಚಿ ಬಿದ್ದಿದ್ದೆ, ಜೈಲಿಗೆ ಹೋಗೋದು ಪಕ್ಕ -ಪ್ರಶಾಂತ್ ಸಂಬರಗಿ

ಒಬ್ಬ ನಿವೃತ್ತ ಐಪಿಎಸ್​ ಅಧಿಕಾರಿಯ ಪ್ರಭಾವದಿಂದ ಈ ಪ್ರಕರಣ ಸಂಪೂರ್ಣ ಹಳ್ಳ ಹಿಡಿದಿದೆ. ಹೀಗಾಗಿ ಸರ್ಕಾರ ಮತ್ತೇ ಅನುಶ್ರೀ ಅವರನ್ನ ತನಿಖೆಗೆ ಒಳಪಡಿಸಿ ಸತ್ಯಾ ಸತ್ಯತೆಯನ್ನು ಹೊರಗೆಳಿಯಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

Source: newsfirstlive.com Source link