ಇಂದು 13ನೇ ಬ್ರಿಕ್ಸ್ ಶೃಂಗಸಭೆ; 10 ತಿಂಗಳ ಬಳಿಕ ಚೀನಾದ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್, ಮೋದಿ ಮುಖಾಮುಖಿ

ಇಂದು 13ನೇ ಬ್ರಿಕ್ಸ್ ಶೃಂಗಸಭೆ; 10 ತಿಂಗಳ ಬಳಿಕ ಚೀನಾದ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್, ಮೋದಿ ಮುಖಾಮುಖಿ

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 13ನೇ ಬ್ರಿಕ್ಸ್ ದೇಶಗಳ ವರ್ಚುವಲ್ ಶೃಂಗಸಭೆ ನಡೆಯಲಿದೆ. ಈ ಸಭೆಯಲ್ಲಿ ಸದ್ಯ ಇಡೀ ಜಗತ್ತು ಎದುರಿಸುತ್ತಿರುವ ಭಯೋತ್ಪಾದನೆ, ಆರ್ಥಿಕ ಬಿಕ್ಕಟ್ಟು, ಡಿಜಿಟಲ್ ಮತ್ತು ತಂತ್ರಜ್ಞಾನ ಬಳಕೆ ಕುರಿತು ಚರ್ಚೆ ನಡೆಸಲಾಗುತ್ತದೆ. ಅಲ್ಲದೇ ಮಾರಕ ಕೊರೊನಾ ಮೂರನೇ ಅಲೆ ಬಗ್ಗೆಯೂ ಬ್ರಿಕ್ಸ್ ಶೃಂಗಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ.

ಇನ್ನು, ಬ್ರಿಕ್ಸ್ ದೇಶಗಳ ವರ್ಚುವಲ್ ಶೃಂಗಸಭೆಯಲ್ಲಿ 10 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಚೀನಾದ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮುಖಾಮುಖಿ ಎದುರಾಗಲಿದ್ದಾರೆ. ಅಲ್ಲದೇ ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸನಾರೊ, ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಪಾಲ್ಗೊಳ್ಳಲಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಪರಿಣಾಮಗಳು ಮತ್ತು ಸಮಕಾಲೀನ ಜಾಗತಿಕ ಸಮಸ್ಯೆಗಳ ಬಗ್ಗೆ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಾಯಕರು ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2ನೇ ಬಾರಿ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಇದನ್ನೂ ಓದಿ: BREAKING: ಟಿ20 ವಿಶ್ವಕಪ್‌; ಭಾರತ ತಂಡ ಘೋಷಿಸಿದ ಬಿಸಿಸಿಐ, ಯಾರಿಗೆಲ್ಲಾ ಅವಕಾಶ?

Source: newsfirstlive.com Source link