ಚೀನಾ, ಪಾಕ್‌, ತಾಲಿಬಾನ್‌ ಉಗ್ರರಿಂದ ‘ದುಷ್ಟರ ಕೂಟ’ ರಚನೆ; ಭಾರತದ ವಿರುದ್ಧ ನಡೀತಿದೆ ಪಿತೂರಿ..!

ಚೀನಾ, ಪಾಕ್‌, ತಾಲಿಬಾನ್‌ ಉಗ್ರರಿಂದ ‘ದುಷ್ಟರ ಕೂಟ’ ರಚನೆ; ಭಾರತದ ವಿರುದ್ಧ ನಡೀತಿದೆ ಪಿತೂರಿ..!

ಅಫ್ಘಾನ್‌ನಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಉರುಳಿಸಿ ತಾಲಿಬಾನ್‌ ಉಗ್ರರು ಅಧಿಕಾರಕ್ಕೇರಿದ್ದಾರೆ. ಇದರಿಂದ ತಾಲಿಬಾನ್‌, ಪಾಕಿಸ್ತಾನ, ಚೀನಾದಿಂದ ದುಷ್ಟರ ಕೂಟವೊಂದು ಒಳಗೊಳಗೆ ಆರಂಭವಾಗಿದೆ. ಹಾಗಂತ ಭಾರತವೇನು ಸುಮ್ಮನೆ ಕುಳಿತಿಲ್ಲ. ಏಟಿಗೆ ಎದುರೇಟು ನೀಡಲು ಸಿದ್ಧ ಅನ್ನೋ ಸಂದೇಶವನ್ನು ಸಾರಿದೆ. ಹಾಗಾದ್ರೆ ಚೀನಾ, ಪಾಕಿಸ್ತಾನ, ಅಫ್ಘಾನ್‌ ತಂತ್ರ ಏನು?

ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠವಾದ ಸೇನೆ ಅಂದ್ರೆ, ಅದು ಅಮೆರಿಕ ಸೇನೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ರೆ, 20 ವರ್ಷಗಳ ಕಾಲ ಅಮೆರಿಕ ಸೇನೆ ಅಫ್ಘಾನ್‌ನಲ್ಲಿ ಭಯೋತ್ಪಾದಕರ ಬೇಟೆಗಾಗಿ ಬೀಡು ಬಿಟ್ಟಿತ್ತು. ಇಷ್ಟೊಂದು ದೀರ್ಘ ಅವಧಿಯಲ್ಲಿ ಅದೆಷ್ಟೋ ಭಯೋತ್ಪಾದಕರ ಶಿಬಿರವನ್ನು ನಾಶ ಮಾಡಿದೆ. ಅದೆಷ್ಟೋ ಮೋಸ್ಟ್‌ ವಾಂಟೆಡ್‌ ಉಗ್ರರ ಕಥೆ ಮುಗಿಸಿದೆ. ಆದ್ರೆ, ಸಂಪೂರ್ಣವಾಗಿ ತಾಲಿಬಾನ್‌ ಉಗ್ರಗಾಮಿ ಸಂಘಟನೆಯನ್ನು ನಾಶ ಮಾಡಲು ಸಾಧ್ಯವಾಗಿಲ್ಲ. ಉಗ್ರರು ಕೂಡ ಅಮೆರಿಕ ಸೇನೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಅಮೆರಿಕ ಸೇನೆ ವಾಪಸ್‌ ಆಗುತ್ತಲೇ ಅಫ್ಘಾನ್‌ ಅನ್ನು ತಾಲಿಬಾನ್‌ ಉಗ್ರರು ವಶಪಡಿಸಿಕೊಡ್ರು. ಹಾಗಾದ್ರೆ ತಾಲಿಬಾನ್‌ ಉಗ್ರರಿಗೆ ಅಷ್ಟೊಂದು ಶಕ್ತಿ ತುಂಬಿದವರು ಯಾರು? ಶಸ್ತ್ರಾಸ್ತ್ರ ಪೂರೈಸಿದವರು ಯಾರು? ಅಷ್ಟೊಂದು ಶಸ್ತ್ರಾಸ್ತ್ರ ತಾಲಿಬಾನಿಗಳ ಕೈಗೆ ಸಿಕ್ಕಿದ್ದು ಹೇಗೆ? ಇಂತಹ ಹತ್ತಾರು ಪ್ರಶ್ನೆಗಳಿಗೆ ಸಿಗೋ ಉತ್ತರ ಪಾಕಿಸ್ತಾನ ಮತ್ತು ಚೀನಾ.

ಭಾರತದ ವಿರುದ್ಧ ನಡೆಯುತ್ತಿದೆ ಸಂಚು
ಚೀನಾ, ಪಾಕ್‌, ತಾಲಿಬಾನ್‌ ಉಗ್ರರಿಂದ ದುಷ್ಟರ ಕೂಟ ರಚನೆ

ಅಫ್ಘಾನ್‌ನಲ್ಲಿ ತಾಲಿಬಾನ್‌ ಉಗ್ರರು ಆಡಳಿತ ಸರ್ಕಾರವನ್ನು ಕೆಣುಕಿದ್ದೇ ತಡ. ಪಾಕಿಸ್ತಾನ ಮತ್ತು ಚೀನಾಗಳು ಒಳಗೊಳಗೆ ಹಬ್ಬವನ್ನು ಆಚರಿಸಿಕೊಂಡು ಬಿಟ್ಟಿವೆ. ಯಾಕಂದ್ರೆ ಚೀನಾಗೆ ಒಂದು ಕಡೆ ಅಫ್ಘಾನ್‌ನಲ್ಲಿರೋ 75 ಲಕ್ಷ ಕೋಟಿ ಮೌಲ್ಯದ ಗಣಿ ಮೇಲೆ ಕಣ್ಣು, ಮತ್ತೊಂದು ಭಾರತದ ವಿರುದ್ಧ ಅಫ್ಘಾನ್‌ನಲ್ಲಿ ಭಯೋತ್ಪಾದಕರನ್ನು ಪ್ರೇರೇಪಿಸುವುದು. ಇನ್ನು ಪಾಕಿಸ್ತಾನ ವಿಚಾರಕ್ಕೆ ಬರೋದಾದ್ರೆ ಅದಕ್ಕೆ ಕಾಶ್ಮೀರ ವಿಚಾರ ಎತ್ತಿಕೊಂಡು ಭಾರತದ ವಿರುದ್ಧ ತಾಲಿಬಾನ್‌ ಭಯೋತ್ಪಾದಕರನ್ನು ಬೆಳೆಸುವುದು. ಇದೇ ಉದ್ದೇಶಕ್ಕೆ ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳು ಸಮಯ ಸಾಧಿಸುತ್ತಿವೆ. ದುಷ್ಟರ ಕೂಟವನ್ನೇ ರಚಿಸಿಕೊಂಡಿದ್ದಾರೆ.

ಅವರ ಮುಖ್ಯ ಉದ್ದೇಶ ಅಂದ್ರೆ ಕಾಶ್ಮೀರದಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅಲ್ಲಿಯ ಮುಸ್ಲಿಮರಿಗೆ ನ್ಯಾಯ ಒದಗಿಸಬೇಕು ಅಂತ ತಾಲಿಬಾನ್‌ ಉಗ್ರರಿಗೆ ಹಚ್ಚಿಕೊಡುವುದು. ಆ ಮೂಲಕ ತಾಲಿಬಾನ್‌ ಉಗ್ರರನ್ನು ಭಾರತದಲ್ಲಿ ಭಯೋತ್ಪಾದನೆ ಚಟುಟಿಕೆಗೆ ಪ್ರೇರೇಪಿಸುವುದು. ಈ ಮೂಲಕ ಭಾರತದಲ್ಲಿ ಅರಾಜಕತೆ ಸೃಷ್ಟಿಸುವುದು. ಹಾಗಂತ ಭಾರತವೇನು ಸುಮ್ಮನೇ ಕುಳಿತಿಲ್ಲ. ತಾನು ಯಾವುದೇ ಸವಾಲನ್ನು ಎದುರಿಸಲು ಸಿದ್ಧ ಅನ್ನೋ ಸಂದೇಶವನ್ನು ಸಾರುತ್ತಿದೆ. ಇದರ ಪ್ರಾಥಮಿಕ ಹಂತವಾಗಿ ದೇಶದಲ್ಲಿ ಒಳಗೆ ಸೇನೆಯನ್ನು ಸಿದ್ಧಪಡಿಸಿದೆ. ಜೊತೆಗೆ ಅತಿರಥ ಮಹಾರಾಷ್ಟ್ರಗಳ ಜೊತೆ ರಾಜತಾಂತ್ರಿಕ ಮಾತುಕತೆಯನ್ನು ನಡೆಸುತ್ತಿದೆ.

ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆ ಮಾತನಾಡಿದ ಮೋದಿ
ಭಾರತ-ರಷ್ಯಾ ಭದ್ರತಾ ಸಲಹೆಗಾರರಿಂದಲೂ ಮಾತುಕತೆ

ಅಫ್ಘಾನ್‌ನಲ್ಲಿ ತಾಲಿಬಾನ್‌ ಉಗ್ರರಿಂದ ಏನು ನಡೆಯುತ್ತಿದೆ. ಪಾಕಿಸ್ತಾನ ಮತ್ತು ಚೀನಾ ಉರಿಯುವ ಬೆಂಕಿಯಲ್ಲಿ ಹೇಗೆ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆ. ಭಾರತದ ವಿರುದ್ಧ ದುಷ್ಟರ ಕೂಟದ ಸಂಚು ಏನಾಗಿದೆ. ಇದೆಲ್ಲವನ್ನು ಭಾರತ ತುಂಬಾ ಸೂಕ್ಮವಾಗಿ ಗಮನಿಸುತ್ತಿದೆ. ಆದ್ರೆ, ಇಲ್ಲಿಯವರೆಗೂ ಭಾರತ ಯಾವುದೇ ದೊಡ್ಡ ಮಟ್ಟದ ಅಭಿಪ್ರಾಯವನ್ನು ನೀಡಿಲ್ಲ. ಅಫ್ಘಾನ್‌ ಗಲಭೆಯಿಂದ ಅಂತರವನ್ನು ಕಾಯ್ದುಕೊಂಡಿದೆ. ಆದ್ರೆ, ಹಾಗಂತ ಸುಮ್ಮನೆ ಕುಳಿತಿಲ್ಲ. ರಾಜತಾಂತ್ರಿಕವಾಗಿ ಏನೇನು ಕೆಲಸ ಮಾಡಬೇಕೋ ಅದೆಲ್ಲವನ್ನು ಮಾಡುತ್ತಿದೆ.

blank

ಇದರ ಭಾಗವಾಗಿಯೇ ಭಾರತದ ಪ್ರಧಾನಿ ನರೇಂದ್ರ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಮಾತುಕತೆ ನಡೆಸಿದ್ದಾರೆ. ಅಫ್ಘಾನ್‌ನಲ್ಲಿ ತಾಲಿಬಾನ್‌ ಸರ್ಕಾರದಿಂದ ಆಗುವಂತಹ ಸಮಸ್ಯೆಗಳ ಬಗ್ಗೆ, ಭಾರತ, ರಷ್ಯಾ ಎದುರಿಸಬೇಕಾದ ಸವಾಲುಗಳ ಬಗ್ಗೆ  ಚರ್ಚೆ ನಡೆಸಿದ್ದಾರೆ. ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ಚರ್ಚಿಸಿದ್ದಾರೆ. ಇದರ ಬೆನ್ನಲ್ಲಿಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ರಷ್ಯಾದ ಭದ್ರತಾ ಮುಖ್ಯಸ್ಥ ನಿಕೋಲಾಯ್‌ ಪತ್ರುಶೇವ್‌ ಕೂಡ ಮಾತುಕತೆ ನಡೆಸಿದ್ದಾರೆ. ತಾಲಿಬಾನ್‌ ಉಗ್ರರಿಂದ ಎಚ್ಚೆತ್ತುಕೊಳ್ಳಬೇಕಾದ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕಾಶ್ಮೀರದ ಬಗ್ಗೆ ತಾಲಿಬಾನ್‌ ವಕ್ತಾರಾ ಹೇಳಿದ್ದೇನು ಗೊತ್ತಾ?
ಅಂದೇ ಎಚ್ಚೆತ್ತುಕೊಂಡು ತಂತ್ರ ರೂಪಿಸುತ್ತಿದೆ ಭಾರತ

ಆರಂಭದಲ್ಲಿ ತಾಲಿಬಾನಿಗಳು ತಮಗೂ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಚಾರಕ್ಕೂ ಸಬಂಧವಿಲ್ಲ. ಕಾಶ್ಮೀರ ವಿಚಾರದಲ್ಲಿ ತಾವು ತಲೆ ಹಾಕುವುದಿಲ್ಲ ಅಂತ ಹೇಳಿದ್ರು. ಆದ್ರೆ, ತಾಲಿಬಾನ್‌ ವಕ್ತಾರಾ ಸುಹೈನ್‌ ಶಹೀನ್‌ ಮಾತನಾಡಿ, ನಾವು ಜಗತ್ತಿನಲ್ಲಿರುವ ಯಾವುದೇ ಮುಸ್ಲಿಮರ ಪರ ಧ್ವನಿ ಎತ್ತಬಹುದು. ಇದಕ್ಕೆ ಭಾರತದಲ್ಲಿರೋ ಮುಸ್ಲಿಮರು ಹೊತರಲ್ಲ. ಮುಸ್ಲಿಮರಿಗೆ ಕಾನೂನಿನ ಅಡಿಯಲ್ಲಿ ಸಮಾನ ಹಕ್ಕು ನೀಡಬೇಕು ಎಂದು ಮಾತನಾಡಿದ್ದ. ಆವಾಗಲೇ ಅರ್ಥವಾಗಿತ್ತು. ಈ ತಾಲಿಬಾನಿಗಳು ಎರಡು ತಲೆಯ ಹಾವುಗಳಂತೆ ಅನ್ನೋದು. ಆದ್ರೆ, ಇವರಿಂದ ಭಾರತಕ್ಕೆ ಅಪಾಯ ಇರೋದು ಗ್ಯಾರಂಟಿಯಾಗಿತ್ತು. ಹೀಗಾಗಿ ಭಾರತ ಏನು ಎಚ್ಚರಿಕೆ ತೆಗೆದುಕೊಳ್ಳಬೇಕಿತ್ತು ಆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿವಿಧ ದೇಶಗಳ ಜೊತೆ ರಾಜತಾಂತ್ರಿಕವಾಗಿ ಮಾತುಕತೆ ನಡೆಸುತ್ತಿದೆ. ಯಾವುದೇ ಸಂದರ್ಭದಲ್ಲಿ ಆಗಲಿ ಯುದ್ಧಕ್ಕೆ ಸಿದ್ಧರಾಗಿ ಅನ್ನೋ ಸಂದೇಶವನ್ನು ಸೇನೆಗೆ ನೀಡಿದೆ.

blank

 

ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಾ?
ಈ ಹಿಂದೆ ತಾಲಿಬಾನ್‌ ಆಡಳಿತದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು

ಕಳೆದ 10 ವರ್ಷಗಳಲ್ಲಿ ಕಾಶ್ಮೀರದಲ್ಲಿ ಭಾರತ ಭಾರೀ ಪ್ರಮಾಣದಲ್ಲಿ ಭಯೋತ್ಪಾದಕರ ಹೆಡೆಮುರಿ ಕಟ್ಟಿದೆ. ಅದರಲ್ಲಿಯೂ ಆರ್ಟಿಕಲ್‌ 370 ಕಾಯ್ದೆಯನ್ನು ರದ್ದುಪಡಿಸಿದ ಬಳಿಕ ಭಯೋತ್ಪಾದಕರು ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಹೀಗಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ತೀರಾ ಕಮ್ಮಿಯಾಗಿ ಬಿಟ್ಟಿವೆ. ಆದ್ರೆ, ತಾಲಿಬಾನ್‌ಗಳಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗಬಹುದು ಅನ್ನೋ ಸೂಚನೆ ಬರುತ್ತಿದೆ. ಯಾಕಂದ್ರೆ, ತಾಲಿಬಾನ್‌ ಉಗ್ರರಿಗೆ ಪಾಕಿಸ್ತಾನ ಮತ್ತು ಚೀನಾ ಪ್ರೇರಣೆ ನೀಡುವ ಎಲ್ಲಾ ಸಾಧ್ಯತೆಯೂ ಇದೆ. ಅಫ್ಘಾನ್‌ನಲ್ಲಿ 1996ರಿಂದ 2001ರ ವರೆಗೆ ತಾಲಿಬಾನ್‌ಗಳು ಅಧಿಕಾರದಲ್ಲಿ ಇದ್ದಾಗ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗಿಯೇ ಇತ್ತು. ಇದೇ ಕಾರಣಕ್ಕೆ ಮತ್ತೆ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತದೆ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಆದ್ರೆ, ಭಾರತ ಮೊದಲಿನಂತಿಲ್ಲ. ಯಾವುದೇ ಸವಾಲನ್ನು ಎದುರಿಸಲು ಸಿದ್ಧವಿದೆ. ಇದಕ್ಕೆ ತಾಜಾ ಉದಾಹಣೆ ಅಂದ್ರೆ 2019ರಲ್ಲಿ ನಡೆದ ಬಾಲಕೋಟ್‌ ಅಟ್ಯಾಕ್‌.

ಅಮೆರಿಕದ ಜೊತೆಗೂ ಚರ್ಚೆ ನಡೆಸಲಿದ್ದಾರೆ ಮೋದಿ
ಇಲ್ಲಿಯವರೆಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ತಾಲಿಬಾನ್‌ ಉಗ್ಗೆ ಹೇಳಿಕೆ ನೀಡಿಲ್ಲ. ಆದ್ರೆ, ಅದೇ ವಿಚಾರವಾಗಿ ಅನೇಕ ರೀತಿಯ ಸಂಭೆಗಳನ್ನು ನಡೆಸಿದ್ದಾರೆ. ಭಾರತದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಹೇಗಿರಬೇಕು ಅನ್ನೋದನ್ನು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಾಯುದಳ, ನೌಕಾದಳ, ಭೂಪಡೆ ಮುಖ್ಯಸ್ಥರ ಜೊತೆ ಮೋದಿ ಚರ್ಚೆ ನಡೆಸಿದ್ದಾರೆ. ಹಾಗೇ ಇದೇ ತಿಂಗಳ ಅಂತ್ಯಕ್ಕೆ ಅಂದ್ರೆ, ಸೆಪ್ಟೆಂಬರ್‌ ಅಂತ್ಯಕ್ಕೆ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದೊಂದು ಮಹತ್ವದ ಭೇಟಿಯಾಗಲಿದೆ. ಜೋ ಬೇಡನ್‌ ಅಮೆರಿಕ ಅಧ್ಯಕ್ಷರಾದ ಮೇಲೆ ಮೋದಿ ಅಮೆರಿಕ ಪ್ರವಾಸಕ್ಕೆ ಹೋಗುತ್ತಿರುವುದು ಇದೆ ಮೊದಲಾಗಿರುತ್ತೆ. ಉಭಯ ನಾಯಕರು ತಾಲಿಬಾನ್‌ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಭದ್ರತೆ ವಿಚಾರದಲ್ಲಿ ಚರ್ಚೆ ನಡೆಸಲಿದ್ದಾರೆ. ಎರಡೂ ರಾಷ್ಟ್ರಗಳು ಜೊತೆಯಾಗಿ ಇವೆ ಅನ್ನೋ ಸಂದೇಶವನ್ನು ಸಾರಲಿದ್ದಾರೆ.

ಚೀನಾ, ಪಾಕ್‌, ರಷ್ಯಾ ಬಗ್ಗೆ ಅಮೆರಿಕ ಹೇಳಿದ್ದೇನು?
ಪಾಕ್‌ ಬಗ್ಗೆ ಅಮೆರಿಕಾಗೆ ಈಗಲಾದ್ರೂ ಅರಿವಿಗೆ ಬಂತಾ?

blank

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಬುಧವಾರ ನೀಡಿರೋ ಹೇಳಿಕೆಯೊಂದು ಭಾರೀ ವೈರಲ್‌ ಆಗಿದೆ. ಅಷ್ಟೇ ಅರ್ಥ ಗರ್ಭಿತವಾಗಿಯೂ ಇದೆ. ಬೈಡನ್‌ ಹೇಳಿದ್ದೇನಂದ್ರೆ, ತಾಲಿಬಾನ್‌ ಜೊತೆ ಮುಂದೇನು ಅನ್ನೋ ವಿಚಾರದಲ್ಲಿ ಪಾಕಿಸ್ತಾನ, ಚೀನಾ, ರಷ್ಯಾಗಳು ತಲೆಕೆಡಿಸಿಕೊಂಡಿವೆ ಅಂದಿದ್ದಾರೆ. ಈ ಮಾತಿನ ಅರ್ಥ ತಾಲಿಬಾನ್‌ಗಳಿಗೆ ಪಾಕಿಸ್ತಾನ, ಚೀನಾ, ರಷ್ಯಾಗಳು ಸಪೋರ್ಟ್‌ ಮಾಡಿವೆ. ಈಗ ಅವೇ ರಾಷ್ಟ್ರಗಳು ತಾಲಿಬಾನ್‌ ಜೊತೆ ಮುಂದೇನು ಅನ್ನೋ ಯೋಚನೆಗೆ ಬಿದ್ದಿವೆ ಅಂತ ಆಗಿದೆ. ಹೌದು ಇದರಲ್ಲಿ ಪಾಕಿಸ್ತಾನ ಮತ್ತು ಚೀನಾ ತಾಲಿಬಾನ್‌ ಉಗ್ರರಿಗೆ ನೆರವು ನೀಡುತ್ತಿದ್ದಾರೆ ಅನ್ನೋದನ್ನು ಭಾರತ ಎಚ್ಚರಿಸುತ್ತಲೇ ಬರುತ್ತಿತ್ತು. ಆದರೆ ಪಾಕಿಸ್ತಾನಕ್ಕೆ ಅಮೆರಿಕ ಯುದ್ಧಾಸ್ತ್ರಗಳನ್ನು ಪೂರೈಸುತ್ತಲೇ ಇತ್ತು. ಆರ್ಥಿಕ ನೆರವನ್ನು ನೀಡುತ್ತಲೇ ಇತ್ತು. ಬಹುಶಃ ಭಾರತ ಹೇಳಿದ್ದು, ಈಗ ದೊಡ್ಡಣ್ಣ ಅಮೆರಿಕಾಗೆ ಅರಿವಿಗೆ ಬಂದಂತಿದೆ.

ತಾಬಿಬಾನ್‌ ಉಗ್ರರ ಜೊತೆ ಸೇರಿ ಚೀನಾ, ಪಾಕಿಸ್ತಾನ ಭಾರತದದ ವಿರುದ್ಧ ದುಷ್ಟರ ಕೂಟ ರಚಿಸಿಕೊಂಡಿದ್ದಾರೆ. ಆದ್ರೆ, ಭಾರತವೇನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. 2019ರಲ್ಲಿ ಬಾಲಕೋಟ್‌ ದಾಳಿಯಲ್ಲಿ ಭಾರತದ ಮಿಲಿಟರಿ ಸಾಮರ್ಥ್ಯ ಸಾಬೀತಾಗಿದೆ.

Source: newsfirstlive.com Source link