‘ಟಾಮ್ & ಜೆರ್ರಿ’ ಗಾನ ದಾಖಲೆ.. ಸಿದ್​ ಶ್ರೀರಾಮ್ ಹಾಡಿಗೆ ಕೇಳುಗರ ಫಿದಾ

‘ಟಾಮ್ & ಜೆರ್ರಿ’ ಗಾನ ದಾಖಲೆ.. ಸಿದ್​ ಶ್ರೀರಾಮ್ ಹಾಡಿಗೆ ಕೇಳುಗರ ಫಿದಾ

ಸಂಗೀತ ಪ್ರೇಮಿಗಳಿಗೆ ಹೊಸಬರು ಹಳೆಬರು ಅನ್ನೋ ಭೇದ-ಭಾವ ಇಲ್ಲ. ಚೆನ್ನಾಗಿತ್ತಾ ಮೆಚ್ಚಿಕೊಂಡು ಹಚ್ಚಿಕೊಂಡು ಮೆರವಣಿಗೆ ಮಾಡಿ ಬಿಡುತ್ತಾರೆ. ಸೋಶಿಯಲ್ ಜಗತ್ತಿನಲ್ಲಿ ಅದೆಲ್ಲಿ ನೋಡಿದ್ರು ಕೇಳಿಸುವ, ಅದ್ಯಾರಿಗೆ ಫೋನ್ ಮಾಡಿದ್ರು ರಿಂಗಣಿಸುವ ಹಾಡು ಅದು. ಹೊಸಬರ ಆ ಒಂದು ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅದೆಲ್ಲಿ ನೋಡಿದ್ರು ಕೇಳುತ್ತಿರೋ ಗೀತೆ ಈ ‘‘ಹಾಯಾಗಿದೆ ಎದೆ ಒಳಗೆ’’ ಹಾಡು..

ಸಿದ್​ ಶ್ರೀರಾಮ್.. ಟಾಲಿವುಡ್ ಲೋಕದಲ್ಲಿ ಮೋಡಿ ಮಾಡ್ತಿರೋ ಹಾಡುಗಾರ ಮೋಡಿಗಾರ. ಒಂದು ಕ್ಷಣ ಆ ಧ್ವನಿ ಕಿವಿಯೊಳಗೆ ಸೋಕಿ ಬಿಟ್ರೇ ಸಾಕು; ಕಿವಿಯಿಂದ ಮನಸಿನ ಮನೆಯಲ್ಲಿ ಹೋಕ್ಕಿ ಮಾರ್ಧನಿಸಲು ಶುರು ಹಚ್ಚಿಕೊಂಡು ಬಿಡುತ್ತೆ ಅಂತ ಮ್ಯಾಜಿಕ್​​​ ಪವರ್ ಆ ಧ್ವನಿಗಿದೆ, ಆ ಧ್ವನಿಯೊಳಗೆ ಬೇರತಿರೋ ಮ್ಯೂಸಿಕ್​​ಗಿದೆ. ತೆಲುಗಿನಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನ ಹಾಡಿರೋ ಸಿದ್ ಶ್ರೀರಾಮ್ ಫಸ್ಟ್ ಟೈಮ್ ಕನ್ನಡದ ಹಾಡನ್ನ ಹಾಡುವಂತೆ ಮಾಡಿದ್ದ ಟಾಮ್ ಆಂಡ್ ಜೆರ್ರಿ ಸಿನಿಮಾ ತಂಡ.

blank

ತೆಲುಗು ಸಂಗೀತ ಲೋಕದಲ್ಲಿ ಒಂದಾ ಎರಡಾ ಸಿದ್ ಶ್ರೀರಾಮ್ ಹಾಡಿರೋ ಎಲ್ಲಾ ಹಾಡುಗಳು ಕೇಳುಗರ ದಿಲ್ಕಿ ಫೇವರೆಟ್ ಆಗಿವೆ.. ಅನೇಕ ಹಾಡುಗಳ ಆಂಧ್ರ ಬಾರ್ಡು ದಾಟಿ ಕರ್ನಾಟಕದ ಕನ್ನಡಿಗರ ಮನಸ ಪ್ಲಸ್ ಕನಸನು ಆಕ್ರಮಿಣಿಸಿವೆ.

ತೆಲುಗು ಸಂಗೀತ ಲೋಕದಲ್ಲಿ ತನ್ನ ವಿಶಿಷ್ಠ ಕಂಠಸಿರಿಯಿಂದ ಮ್ಯೂಸಿಕ್ ಲೋಕದಲ್ಲಿ ಮೆರವಣಿಗೆ ಮಾಡುತ್ತಿದ್ದ ಸಿದ್ ಶ್ರೀರಾಮ್ ಅವರನ್ನ ಫಸ್ಟ್ ಟೈಮ್ ಕನ್ನಡಕ್ಕೆ ಕರೆತಂದ ಕಿರುತಿ ಟ್ಯಾಮ್ ಆಂಡ್ ಜೆರ್ರಿ ತಂಡಕ್ಕೆ ಸಲ್ಲಬೇಕು. ಇವತ್ತು ಟ್ಯಾಮ್ ಆಂಡ್ ಜೆರ್ರಿ ಸಿನಿಮಾದ ಹಾಯಾಗಿದೆ ಎದೆಯೋಳಗೆ ಹಾಡು ಕನ್ನಡ ಕೇಳುಗರಿಗೆ ಅಚ್ಚು ಮೆಚ್ಚಾಗುತ್ತಿದೆ.. ಜೊತೆಗೆ ಒಂದು ದಾಖಲೆಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದೆ..

blank

ಸಿದ್ ಶ್ರೀರಾಮ್ ಗಾಯನದ ಮೊದಲ ಕನ್ನಡ ಹಾಡು ದಾಖಲೆ

ನಿಶ್ಚಿತ್, ಚೈತ್ರಾ ರಾವ್ ಮುಖ್ಯ ಭೂಮಿಕೆಯ ‘ಟ್ಯಾಮ್ ಆಂಡ್ ಜೆರ್ರಿ’ ಸಿನಿಮಾ ರಾಘವ್ ವಿನಯ್ ಶಿವಗಂಗೆ ಸಾರಥ್ಯದಲ್ಲಿ ಮೂಡಿಬಂದಿದೆ. ಈ ವರ್ಷದ ಏಪ್ರಿಲ್ ನಲ್ಲಿ ಹಾಡೊಂದನ್ನ ಬಿಟ್ಟು ಸಮನಾಗಿತ್ತು ಚಿತ್ರತಂಡ. ಆದ್ರೆ ದಿನೇ ದಿನೆ ಟ್ಯಾಮ್ ಆಂಡ್ ಜೆರ್ರಿ ಸಿನಿಮಾದ ಮೊದಲ ಹಾಡು ಕೇಳುಗರ ದಿಲ್ಕಿ ಫೇವರೆಟ್ ಆಯ್ತಾ ಹೋಯ್ತು. ‘ಹಾಯಾಗಿದೆ ಎದೆಯೋಳಗೆ’ ಹಾಡು ಹತ್ತ್ ಹತ್ರಾ 80 ಲಕ್ಷ ವೀಕ್ಷಣೆಯಾಗಿದೆ. ಇದ್ಕಿಂತ ಮತ್ತೊಂದು ದಾಖಲೆ ಏನು ಗೊತ್ತಾ.. ಇನ್​ಸ್ಟಾ ಗ್ರಾಮ್​​ನಲ್ಲಿ ಈಗ ಟ್ರೆಂಡ್ ಆಗಿರೋ ಟಿಕ್ ಟಾಕ್​​ನ ತದ್​ರೂಪಿ ರೀಲ್ಸ್​​ನಲ್ಲಿ 14 ಸಾವಿರಕ್ಕೂ ಹೆಚ್ಚು ಬಳಕೆ ಯಾಗಿರೋ ಕನ್ನಡದ ಹಿಟ್ ಹಾಡು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

blank

ಸಾಮಾನ್ಯರಿಂದ ಸಿರಿಯಲ್ ಸ್ಟಾರ್ ಮಹೋದಯರ ತನಕ ಹಾಯ್​​ಗಿದೆ ಹಾಡಿಗೆ ರೀಲ್ಸ್ ಮಾಡಿ ಮೆಚ್ಚುಗೆಯನ್ನ ಸಂಪಾದಿಸುತ್ತಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆಯ ಜೊತೆ ಈ ಹಾಡಿಗೆ ಸಾಹಿತ್ಯವನ್ನ ಬರೆದಿದ್ದಾರೆ. ತಮ್ಮ ಸಿನಿಮಾ ಹಾಡು ಈ ಪಾಟಿ ಹಿಟ್ ಆಗಿರೋ ಖುಷಿಯನ್ನ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ ಹಂಚಿಕೊಂಡಿದ್ದಾರೆ.

ಇನ್ನು ಹಾಯಾಗಿದೆ ಹಾಡಿನ ನಂತರ ಸಿದ್ ಶ್ರೀರಾಮ್ ಗಾಯನ ಕನ್ನಡದಲ್ಲಿ ಮುಂದುವರೆದಿದೆ. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಭಜರಂಗಿ 2 ಸಿನಿಮಾದಲ್ಲೂ ಸಿದ್ ಶ್ರೀರಾಮ್ ಹಾಡಿದ್ದಾರೆ. ನೀ ಸಿಗೋವರೆಗೂ ಎಂಬುವ ಹಾಡು ಕೂಡ ಹಾಯಾಗಿದೆ ಹಾಡಿನಷ್ಟೆ ಕನ್ನಡಿಗರಿಗೆ ಇಷ್ಟವಾಗುತ್ತಿದೆ.. ಇಷ್ಟು ದಿನ ತೆಲುಗಿನಲ್ಲಿ ಸಿದ್ ಶ್ರೀರಾಮ್ ಹಾಡಿದ ಹಾಡುಗಳು ಕೇಳುಗರನ್ನ ಇಂಪ್ರೇಸ್ ಮಾಡ್ತಿದ್ವು.. ಈಗ ಕನ್ನಡದಲ್ಲೂ ಸಿದ್ ಶ್ರೀರಾಮ್ ವಾವ್ ಅನ್ನೋ ಮೋಡಿ ಮಾಡ್ತಿದ್ದಾರೆ.

Source: newsfirstlive.com Source link