ಬಿಬಿಎಂಪಿ ಎಲೆಕ್ಷನ್ ಮೇಲೆ ಸಚಿವರಿಬ್ಬರ ಕಣ್ಣು -ಇದರ ಹಿಂದಿನ ರಾಜಕೀಯ ಲೆಕ್ಕಾಚಾರ ಏನು ಗೊತ್ತಾ..?

ಬಿಬಿಎಂಪಿ ಎಲೆಕ್ಷನ್ ಮೇಲೆ ಸಚಿವರಿಬ್ಬರ ಕಣ್ಣು -ಇದರ ಹಿಂದಿನ ರಾಜಕೀಯ ಲೆಕ್ಕಾಚಾರ ಏನು ಗೊತ್ತಾ..?

ಬೆಂಗಳೂರು: ಶೀಘ್ರದಲ್ಲೇ ‘ಬೃಹತ್ ಮಹಾನಗರ ಪಾಲಿಕೆ’ಗೆ ಚುನಾವಣೆ ಘೋಷಣೆ ಆಗಲಿದೆ. ಆಡಳಿತದ ಚುಕ್ಕಾಣಿ ಹಿಡಿದುಕೊಂಡಿರುವ ರಾಜ್ಯ ಬಿಜೆಪಿಗೆ ಬಿಬಿಎಂಪಿ ಚುನಾವಣೆ ದೊಡ್ಡ ಪ್ರತಿಷ್ಠೆಯಾಗಿದೆ. ಜೊತೆಗೆ ಹೊಸದಾಗಿ ಸಿಎಂ ಗಾದಿಗೆ ಏರಿರುವ ಬಸವರಾಜ್ ಬೊಮ್ಮಾಯಿಗೂ ದೊಡ್ಡ ಸವಾಲ್ ಆಗಿದೆ.

ಹೀಗಾಗಿ ರಾಜ್ಯದ ಇಬ್ಬರು ಸಚಿವರು ಮಹಾಗರ ಪಾಲಿಕೆಯ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಬಿಬಿಎಂಪಿ ಚುನಾವಣೆಯ ನೇತೃತ್ವಕ್ಕಾಗಿ ಇಬ್ಬರು ಸಚಿವರುಗಳು ಪೈಪೋಟಿಗೆ ಇಳಿದಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭುತ್ವವನ್ನು ತೋರಲು ಸಚಿವದ್ವಯರು ಮುಂದಾಗಿದ್ದಾರೆ ಎನ್ನಲಾಗಿದೆ.

ಯಾಕೆ ಪೈಪೋಟಿ..?
ವಸತಿ ಸಚಿವ ವಿ.ಸೋಮಣ್ಣ ಹಾಗೂ ಆರ್.ಅಶೋಕ್ ನಡುವೆ ಪೈಪೋಟಿ ಶುರುವಾಗಿದೆ. ಸಚಿವರಿಬ್ಬರ ದೆಹಲಿ ಪ್ರವಾಸದ ಉತ್ಸಾಹದ ಹಿಂದೆ BBMP ಚುನಾವಣೆ ಎನ್ನಲಾಗಿದೆ. ಹೀಗಾಗಿ ಆ ಇಬ್ಬರು ಸಚಿವರು ಜೊತೆ ಜೊತೆಯಾಗಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಮಹಾ ನಗರದ ಹಿಡಿತಕ್ಕೆ, ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಸಚಿವರು ಸಜ್ಜಾಗಿದ್ದಾರೆ. ಇದರ ಹಿಂದೆ ಭವಿಷ್ಯದ ರಾಜಕೀಯ ಲೆಕ್ಕಾಚಾರ, ಮಹಾ ನಗರದ ಉಸ್ತುವಾರಿ ವಿಚಾರವೂ ಇದ್ಯಂತೆ.

ಈಗಾಗಲೇ ಸೋಮಣ್ಣ ಹಾಗೂ ಅಶೋಕ್ ಸ್ಥಾನಮಾನ ಕುರಿತಂತೆ ಸಾಕಷ್ಟು ಚರ್ಚೆ ಆಗ್ತಿದೆ. ಇಂತಹ ಸಂದರ್ಭದಲ್ಲಿ ದೆಹಲಿ ವರಿಷ್ಠರ ಗಮನ ಸೆಳೆಯುವ ಜೊತೆಗೆ ಬೃಹತ್ ಮಹಾನಗರ ಪಾಲಿಕೆ ಚುನಾವಣೆಗೆ ಉಸ್ತುವಾರಿ ಪಡೆಯಲು ಈಗಿನಿಂದಲೇ ಸಿದ್ಧತೆ ನಡೆಸ್ತಿದ್ದಾರೆ ಅಂತಾ ಹೇಳಲಾಗಿದೆ.

Source: newsfirstlive.com Source link