ಹಬ್ಬದ ಸಡಗರದಲ್ಲಿ ಕೊರೊನಾ ಎಚ್ಚರಿಕೆ ಮರೆತ ಜನ & ಸರ್ಕಾರ -K.R.ಮಾರ್ಕೆಟ್​ ಫುಲ್ ರಶ್

ಹಬ್ಬದ ಸಡಗರದಲ್ಲಿ ಕೊರೊನಾ ಎಚ್ಚರಿಕೆ ಮರೆತ ಜನ & ಸರ್ಕಾರ -K.R.ಮಾರ್ಕೆಟ್​ ಫುಲ್ ರಶ್

ಬೆಂಗಳೂರು: ಗೌರಿ ಗಣೇಶ ಹಬ್ಬದ ಹಿನ್ನಲೆ ಕೆ.ಆರ್ ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರ ಭರ್ಜರಿಯಾಗಿ ನಡೀತೀದೆ.

blank

ರಸ್ತೆಯ ಬದಿಯಲ್ಲಿಯೇ ವ್ಯಾಪಾರಸ್ಥರು ಹಣ್ಣು, ಹೂವು ಮಾರಾಟ ಮಾಡ್ತಿದ್ದು, ಹೂವು ಖರೀದಿ ಮಾಡಲು ಜನಜಾತ್ರೆ ಸೇರಿದೆ. ವಾಹನಗಳ ಸಂಚಾರಕ್ಕೂ ಕಷ್ಟ ಆಗುವಂತೆ ಜನ ಸಂದಣಿ ಸೇರಿದ್ದು, ಯಾವುದೇ ಕೋವಿಡ್ ನಿಯಮಗಳು ಸಹ ಮಾರ್ಕೆಟ್​ನಲ್ಲಿ ಜನ ಪಾಲನೆ ಮಾಡಿಲ್ಲ, ಮಾಸ್ಕ್ ಧರಿಸಿದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕೊರೊನಾನೇ ಇಲ್ಲವೆಂಬಂತೆ ವರ್ತಿಸಿದ ದೃಶ್ಯ ಕಂಡುಬಂದಿದೆ.

blank

ಈಗಾಗಲೇ ರಾಜ್ಯಕ್ಕೆ ಕೊರೊನಾದ ಮೂರನೇ ಅಲೆಯ ಆತಂಕ ಎದುರಾಗಿದೆ. ಈ ಮಧ್ಯೆ ಹಬ್ಬದ ಸಂಭ್ರಮದಲ್ಲಿ ಕೊರೊನಾ ಎಚ್ಚರಿಕೆಯನ್ನ ಮರೆತಿರೋದು ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಹಾಗೂ ಬಿಬಿಎಂಪಿ ಕೂಡ ಕೊರೊನಾ ನಿಯಮ ಪಾಲನೆಯಲ್ಲಿ ಎಡವಿತಾ ಅನ್ನೋ ಪ್ರಶ್ನೆ ಶರುವಾಗಿದೆ.

blank

Source: newsfirstlive.com Source link