ಸಿಲಿಂಡರ್ ಸ್ಫೋಟ- ಮೊಮ್ಮಗಳ ಸಮಯ ಪ್ರಜ್ಞೆಯಿಂದ ಉಳೀತು ಅಜ್ಜಿ ಜೀವ

ಚಾಮರಾಜನಗರ: ಸಿಲಿಂಡರ್ ಸ್ಫೋಟಕ್ಕೆ ಮನೆ ಧಗ-ಧಗಿಸಿ ಹೊತ್ತಿ ಉರಿದಿದ್ದು, ಈ ವೇಳೆ ಮೊಮ್ಮಗಳ ಸಮಯ ಪ್ರಜ್ಞೆಯಿಂದ ಅಜ್ಜಿಯ ಜೀವ ಉಳಿದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದ ನಿವಾಸಿ 75 ವರ್ಷದ ಲಕ್ಷ್ಮಮ್ಮ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಮೊಮ್ಮಗಳು ಮೇಘನಾ(17) ತಕ್ಷಣ ಲಕ್ಷ್ಮಮ್ಮ ಅವರನ್ನು ಹೊರಗೆ ಕರೆತಂದಿದ್ದಾರೆ. ಅಜ್ಜಿ-ಮೊಮ್ಮಗಳು ಹೊರಗೆ ಬರುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ವ್ಯಾಪಿಸಿ ಹೊತ್ತಿ ಉರಿದಿದೆ. ಇದನ್ನೂ ಓದಿ: ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಈ ಅವಘಡದ ವೇಳೆ ಲಕ್ಷ್ಮಮ್ಮ ಅವರ ಮಗ ವೆಂಕಟೇಶ್ ಹಾಗೂ ಮೊಮ್ಮಗ ಅಂಗಡಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ:  ಇಂಗ್ಲಿಷ್ ವ್ಯಾಮೋಹ ಕನ್ನಡ ಭಾಷಾಭಿವೃದ್ಧಿಗೆ ದೊಡ್ಡ ಸವಾಲು: ಡಿ.ಎಸ್.ಅರುಣ್

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Source: publictv.in Source link